
Author: Hoimalnad_admin

Malnad gidda ( ಮಲೆನಾಡು ಗಿಡ್ಡ )
ಮಲೆನಾಡು ಗಿಡ್ಡ (ಗೋವಿನ ತಳಿ) ಮಲೆನಾಡ ಗಿಡ್ಡ ತಳಿಯ ವಿಶೇಷತೆಗಳು
Kuppalli photos – ಕುಪ್ಪಳಿ ಚಿತ್ರಗಳು

Swathi Rajesh Quotes about malnad
ಈ ಸಲ ಕಾರ್ತಿಕ ಮಾಸದ ಕೊನೆಯಲ್ಲಿಕೊಟ್ಟೆಮಣೆಗೆ ಕಾಲು ಕೊಟ್ಟುಕೊನೆ ತೆಗಿಬೇಕಂದ್ರೆ ಕತ್ತಲೆಗಟ್ಟೋಮಳೆಯ ಕಡೆಗಣಿಸಿ ಔಷಧಿ ಹೊಡೀಬೇಕಲ್ಲಾ….. ಮಳೆಯ ಚೇಷ್ಟೆಯ ನಡುವೆಯೂ ನಮ್ಮ ಇಸ್ಕೂಲಿನ ಗೇಟನ್ನು ಕಂಡಾಗ ಸವಾರಿ ಹೊರಟ ದಾರಿ ಒಮ್ಮೆಲೆ ಮರೆತಂದಿದೆ …… ಹಸಿರ ಉಸಿರಲಿ ರಾಮನ ಮಂಟಪ……….ತುಂಗೆಯ ಶ್ರೇಯಕ್ಕೆ ಬಿಳಿಗೆಂಪು ಕೇಂದ್ರವಿದು……..ಕಂಡು ಕಣ್ತುಂಬಿಕೊಂಡಾಗ ಸೊಗಸುಗಳ ಹೂರಣವಿದು……… ಹಸಿರ ಚಾದರ ಹೊದ್ದ ಪುಟ್ಟ ಗೂಡಲ್ಲಿ ಕೂತು ಮಳೆನಾಡ ಮಳೆಹನಿಗಳ ಎಣಿಸುತ್ತಿರುವಂತೆ .. ಹೊಸ ಪದಮುತ್ತುಗಳ ಪೋಣಿಸುವ ಆಶಾಭಾವದಿ ಹನಿಗಳಲ್ಲಿ ಮಿಂದೇಳುತ್ತಿದ್ದಾರಲ್ಲ ನಮ್ಮ ಕನ್ನಡದ ಕವಿಸ್ವರ್ಣ ಮುಕುಟ […]
Madan Kolavadi Quotes about malenadu
ಮತ್ತೆ ಶುರುವಾಗಿದೆ ಮುಂಗಾರು…ಕುಡಿಯೊಡೆಯುತಿವೆ ಹಸುರೆಲೆ ಚಿಗುರು…ಮಲೆನಾಡಿನ ಮಳೆಗಾಲದ ಚಂದವ…ಬಣ್ಣಿಸಲು ಅಸಾಧ್ಯವೇ ಸರಿ….ಒಂದೆಡೆ ಇಂಬಳ ಜೀರುಂಡೆಗಳ ಕಿರುಕುಳವಾದರೆ…ಇನ್ನೊಂದೆಡೆ ಮನೆಯಲಿ ಹಲಸಿನ ದೋಸೆ ಮುಳುಕಗಳ ಪರಿಮಳ…ಜಡಿ ಮಳೆಗೆ ವಿದ್ಯುತ್ ಇಲ್ಲವಾದರೆಸೀಮೆ ಎಣ್ಣೆ ದೀಪಗಳ ನರ್ತನ ಒಂದೆಡೆಯಾದರೆ…ಮಳೆಯ ತಂಡಿಗೆ ಮುದುಡಿ ಕಂಬಳಿ ಹೊದ್ದು ಕೂರುವ ಹಿರಿಯರು ಇನ್ನೊಂದೆಡೆ…ಇದುವೇ ಮಳೆಯ ಸ್ವರ್ಗ ಮಲೆನಾಡಿನ ಸಾಮಾನ್ಯ ಚಿತ್ರಣ… ಮುಂಗಾರಿನ ಆಗಮನಕ್ಕೆ ದರಗೆಲ್ಲ ಕೊಳೆತಿತ್ತು…ಯಾವುದೋ ಒಂದು ಮನಸಿಗೆ ಗ್ರಹಿಸಲಾಗದ ಪರಿಮಳ ಅಡವಿಯಲ್ಲಾ ಮುತ್ತಿತ್ತು…ಕೊಳೆತ ದರಗಿನ ಅಡಿಯಲ್ಲಿ ಮಿಜುಗುಡುತಿತ್ತು ಇಂಬಳಗಳ ಗುಂಪು…ರಕ್ತವೋ ಎಲೆಗಳ ಪತ್ರವೋ ಹೊಟ್ಟೆಗೆ ಸಿಕ್ಕರೆ […]

ಜಿಟಿ-ಜಿಟಿ ಮಳೆಯನ್ನೂ ಲೆಕ್ಕಿಸದೆ ಎಮ್ಮೆ-ಕೋಣಗಳು ಓಡಾಡಿದ ಆ ಕೆಸರಿನ ಹಾದಿಯಲ್ಲೇ ಸಾಗಿ ಹಲಸಿನ ಮರವನ್ನೇರಿ ಹಲಸಿನ ಹಣ್ಣಿಗೆ ಲಗ್ಗೆ ಇಡುವುದು ಮಲೆನಾಡಿಗರಿಗೆ ಹೊಸತೇನಲ್ಲ ಬಿಡಿ! ಯಾವ ಯಾವ ಜಾಗದಲ್ಲಿ ಯಾವ ಯಾವ ಜಾತಿಯ “ಹಲಸು” ಇದೆ ಎಂದು ಬಲ್ಲ ಜ್ಞಾನಿಗಳಿಗೆ ಈ ನಮ್ ಮಲೆನಾಡಲ್ಲಿ ಬರವಿಲ್ಲ. ಬೆಳುವ ಹಲಸನ್ನು ನಿರಾಯುಧರಾಗಿ ಬಗೆದು ಗುಳುಂ ಎಂದು ನುಂಗುವುದು ಎಷ್ಟು ಸುಲಭವೋ ಅಷ್ಟೇ ಕಷ್ಟ ಚಂದ್ರಭಕ್ಕೆ ಹಲಸಿನ ಮೇಣದಿಂದ ತಪ್ಪಿಸಿಕೊಳ್ಳೋದು. ಏನೇ ಆದರೂ ಹಲಸಿನ ಹಣ್ಣನ್ನು ಬಗೆದು ತಿಂದುತೇಗುವುದರಲ್ಲಿರೋ ಗಮ್ಮತ್ತು […]
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪು ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು– ಕುವೆಂಪು ಮಲೆನಾಡೆಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ಪರ್ಣಶಾಲೆ, ಅರಣ್ಯರಮಣಿಯ ವಿಲಾಸಕ್ಷೇತ್ರ.– ಕುವೆಂಪು ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ.– ಕುವೆಂಪು ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು ಕಟ್ಟುವುದಕ್ಕೆ ನಮಗೆ ದುಡ್ಡು ಇದೆ. ಆದರೆ ಹಳ್ಳಿಗಳಲ್ಲಿ ಬಾವಿ ತೋಡಲು ಹಣವಿಲ್ಲ.– ಕುವೆಂಪು