2025 ನೇ ಇಸವಿಯ ಕೊನೆಯ ತಿಂಗಳ ಕೆಲವೇ ದಿನಗಳು ಬಾಕಿ ಇದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಈ ತಿಂಗಳೂ ಮುಗಿದು ಹೊಸ ಕ್ಯಾಲೆಂಡರ್ ಬದಲಾಯಿಸುವ ದಿನ ಬಂದೇ ಬಿಡುತ್ತದೆ. 2026 ರಲ್ಲಿ ರಾಜ್ಯ ಸರ್ಕಾರಿ ರಜೆಗಳು Karnataka State Government Holiday List ಯಾವುದಿದೆ ಅನ್ನೋದರ ಅಧಿಕೃತ ಘೋಷಣೆ ಈಗಾಗ್ಲೇ ಆಗಿದೆ. ಹಾಗಾದ್ರೆ ಇನ್ನೇಕೆ ತಡಾ ರಜಾ ದಿನಗಳ ಪಟ್ಟಿ ನೋಡಿ ಫ್ಯಾಮಿಲಿ ಟ್ರಿಪ್, ಫಂಕ್ಷನ್ ಎಲ್ಲದನ್ನೂ ಈಗಲೇ ಪ್ಲಾನ್ ಮಾಡಿಬಿಡಿ.
ಸದ್ಯ ನಮ್ಮ ಕರ್ನಾಟಕದಲ್ಲಿ ಬ್ಯಾಂಕುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ. ಇದನ್ನು ಹೊರತುಪಡಿಸಿ ಇತರೆ ರಜಾ ದಿನಗಳ ಪಟ್ಟಿ ಇಲ್ಲಿದೆ. Government Holidays In Karnataka 2026. ಈ ಎಲ್ಲಾ ರಜಾ ದಿನಗಳಲ್ಲಿ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಹಾಗೂ ಶಾಲಾ ಕಾಲೇಜುಗಳು ಮುಚ್ಚಿರುತ್ತವೆ. ಈ ಮಾಹಿತಿಯನ್ನು ತಿಳಿದುಕೊಳ್ಳುವುದರಿಂದ ನಮ್ಮ ಕೆಲಸಗಳನ್ನು ರಜಾ ದಿನಗಳನ್ನು ಹೊರತುಪಡಿಸಿ ಪ್ಲಾನ್ ಮಾಡಲು, ಕುಟುಂಬದೊಂದಿಗೆ ಪ್ರವಾಸಗಳನ್ನು ಆಯೋಜಿಸಲು ಸಹಕಾರಿಯಾಗುತ್ತದೆ.
1) ಜನವರಿ-2026
ಜನವರಿ 15 : ಮಕರ ಸಂಕ್ರಾಂತಿ, ಗುರುವಾರ
ಜನವರಿ 26 : ಗಣರಾಜ್ಯೋತ್ಸವ, ಸೋಮವಾರ
3) ಮಾರ್ಚ್-2026:
ಮಾರ್ಚ್ 19: ಯುಗಾದಿ, ಗುರುವಾರ
ಮಾರ್ಚ್ 21: ಖುತುಬ್ ಎ ರಂಜಾನ್, ಶನಿವಾರ
ಮಾರ್ಚ್ 31 : ಮಹಾವೀರ ಜಯಂತಿ, ಮಂಗಳವಾರ
4) ಎಪ್ರಿಲ್-2026:
ಏಪ್ರಿಲ್ 03 : ಗುಡ್ ಪ್ರೈಡೆ, ಶುಕ್ರವಾರ
ಏಪ್ರಿಲ್ 14: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮಂಗಳವಾರ
ಏಪ್ರಿಲ್ 20 : ಬಸವ ಜಯಂತಿ, ಅಕ್ಷಯ ತೃತೀಯ, ಸೋಮವಾರ
5) ಮೇ-2026:
ಮೇ 1 : ಕಾರ್ಮಿಕರ ದಿನಾಚರಣೆ, ಶುಕ್ರವಾರ
ಮೇ 28 : ಬಕ್ರೀದ್, ಗುರುವಾರ
6) ಜೂನ್-2026:
ಜೂನ್ 26 : ಮೊಹರಂ ಕಡೆ ದಿನ, ಶುಕ್ರವಾರ
8) ಆಗಸ್ಟ್-2026:
ಆಗಸ್ಟ್ 15 : ಸ್ವಾತಂತ್ರ್ಯ ದಿನಾಚರಣೆ, ಶನಿವಾರ
ಆಗಸ್ಟ್ 26 : ಈದ್ ಮಿಲಾದ್, ಬುಧವಾರ
9) ಸೆಪ್ಟೆಂಬರ್-2026:
ಸೆಪ್ಟೆಂಬರ್ 14 : ವರಸಿದ್ಧಿ ವಿನಾಯಕ ವ್ರತ, ಸೋಮವಾರ
10) ಅಕ್ಟೋಬರ್-2026:
ಅಕ್ಟೋಬರ್ 02 : ಗಾಂಧಿ ಜಯಂತಿ, ಶುಕ್ರವಾರ
ಅಕ್ಟೋಬರ್ 20 : ಮಹಾನವಮಿ, ಆಯುಧಪೂಜೆ, ಮಂಗಳವಾರ
ಅಕ್ಟೋಬರ್ 21 : ವಿಜಯದಶಮಿ, ಬುಧವಾರ
11) ನವೆಂಬರ್-2026:
ನವೆಂಬರ್ 10 : ಬಲಿಪಾಡ್ಯಮಿ, ದೀಪಾವಳಿ, ಮಂಗಳವಾರ
ನವೆಂಬರ್ 27 : ಕನಕದಾಸ ಜಯಂತಿ, ಶುಕ್ರವಾರ
12) ಡಿಸೆಂಬರ್- 2026:
ಡಿಸೆಂಬರ್ 25: ಕ್ರಿಸ್ಮಸ್, ಶುಕ್ರವಾರ


