Categories
Kannada Quotes

Kannada Quotes About Karnataka – ಕನ್ನಡ ನಾಡು, ನುಡಿ ಕುರಿತು ಹಿರಿಯ ಸಾಹಿತಿಗಳು, ಕವಿಗಳ ಸಾಲುಗಳು

ಕನ್ನಡ ರಾಜ್ಯೋತ್ಸವ ಮತ್ತು ಹೆಮ್ಮೆಯ ಕನ್ನಡತನದ ಕುರಿತ ಉಲ್ಲೇಖಗಳು – Kannada Rajyotsava Quotes

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
– ಕೆ. ಎಸ್. ನಿಸಾರ್ ಅಹಮದ್

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ
– ಡಿ.ಎಸ್. ಕರ್ಕಿ

ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮಿರುವುದು!
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
– ರಾಷ್ಟ್ರಕವಿ ಕುವೆಂಪು

“ಸಿರಿಗನ್ನಡಂ ಗೆಲ್ಲೆ”
– ರಾ.ಹ. ದೇಶಪಾಂಡೆ

ಕರ್ನಾಟಕವು ನಮ್ಮ ಕನ್ನಡಿಗರ ಕುರುಕ್ಷೇತ್ರ , ಭಾರತವು ನಮ್ಮ ಧರ್ಮ ಕ್ಷೇತ್ರ
– ಆಲೂರು ವೆಂಕಟರಾಯರು

ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ
– ಜಿ.ಪಿ. ರಾಜರತ್ನಂ

Kannada Rajyotsava Quotes Images:

ಕರ್ನಾಟಕವು ನಮ್ಮ ಕನ್ನಡಿಗರ ಕುರುಕ್ಷೇತ್ರ , ಭಾರತವು ನಮ್ಮ ಧರ್ಮ ಕ್ಷೇತ್ರ
– ಆಲೂರು ವೆಂಕಟರಾಯರು

ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ
– ಜಿ.ಪಿ. ರಾಜರತ್ನಂ

“ಸಿರಿಗನ್ನಡಂ ಗೆಲ್ಲೆ”
– ರಾ.ಹ. ದೇಶಪಾಂಡೆ

ಸಿರಿಗನ್ನಡಂ ಗೆಲ್ಗೆ, ಕನ್ನಡ ತಾಯ್ ಬಾಳ್ಗೆ
– ಬಿ. ಎಂ. ಶ್ರೀಕಂಠಯ್ಯ

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ!
ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ!
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ…
– ವರಕವಿ ದ.ರಾ.ಬೇಂದ್ರೆ

ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮಿರುವುದು!
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು
– ರಾಷ್ಟ್ರಕವಿ ಕುವೆಂಪು

ನನ್ನ ಕನ್ನಡ ನುಡಿಯೇ ನೀನೆಷ್ಟು ಚಂದ !
ಏನು ಗೀಚಿದರೂ ಆಗುವುದು ಶ್ರೀಗಂಧ
ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು,
ಬಂಗಾರಕ್ಕಿಂತಲೂ ಶ್ರೇಷ್ಠ ನುಡಿಮುತ್ತು
– ದಿನಕರ ದೇಸಾಯಿ

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ
– ಡಿ.ಎಸ್. ಕರ್ಕಿ

ಕನ್ನಡ ನಾಡಿನ ಕರಾವಳಿ
ಕನ್ನಡ ದೇವಿಯ ಪ್ರಭಾವಳಿ..
– ಸು.ರಂ. ಎಕ್ಕುಂಡಿ

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ
ನಿತ್ಯೋತ್ಸವ ತಾಯಿ ನಿತ್ಯೋತ್ಸವ
– ಕೆ. ಎಸ್. ನಿಸಾರ್ ಅಹಮದ್

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ |
ಕನ್ನಡದ ನೆಲದ ನೀರ್ವೊಲೆನಗೆ ಜೀವನದಿ.
ಕನ್ನಡದ ನೆಲದ ಕಲ್ಲೆನಗೆ ಸಾಲಿಗ್ರಾಮ ಶಿಲೆ.
ಕನಡವೆ ದೈವಮೈ ಕನ್ನಡ ಶಬ್ದಮೆನಗೋಂಕಾರಮೀಯೆನ್ನ |
ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ.
ಮಿನ್ನಾವುದೈಪೆರೆತು ಕನ್ನಡದ
ಸೇವೆಯಿಂದಧಿಕಮೀಜಗಧೊಳೆನಗೆ?
– ಸಾಲಿ ರಾಮಚಂದ್ರರಾವ್

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ
ನಮ್ಮ ಜನ್ಮದಾತೆಯೆ
– ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ

ನಮ್ಮ ಉಸುರು, ನಮ್ಮ ಕಸುವು ಕನ್ನಡ;
ನಮ್ಮ ಹೆಸರು, ನಮ್ಮ ಕಸುಬು ಕನ್ನಡ –
ಕನ್ನಡವಿದು ಕನ್ನಡ
ಬನ್ನಿ ನಮ್ಮ ಸಂಗಡ;
– ಎಂ ಗೋಪಾಲಕೃಷ್ಣ ಅಡಿಗ

ಕನ್ನಡದ ಬದುಕು ತಲೆಯೆತ್ತಿ ನಿಂತ ಮಂಗಳ
ಮುಹೂರ್ತದಲ್ಲಿ ಮನೆಮನೆಯ ಮುಂದೆ
ಮುಂಬೆಳಗಿನಲ್ಲಿ ಸಂತಸದ ರಂಗವಲ್ಲಿ
– ಕೆ.ಎಸ್. ನರಸಿಂಹಸ್ವಾಮಿ

ಹೆಸರಾಯಿತು ಕರ್ನಾಟಕ,
ಉಸಿರಾಗಲಿ ಕನ್ನಡ
– ಚೆನ್ನವೀರ ಕಣವಿ

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ
ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ
– ಬೆನಗಲ್ ರಾಮರಾವ್

ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ
– ರಾಷ್ಟ್ರಕವಿ ಶ್ರೀ ಎಂ. ಗೋವಿಂದ ಪೈ

ಕನ್ನಡವು ಕನ್ನಡವ ಕನ್ನಡಿಸುತಿರಬೇಕು
-ದ. ರಾ. ಬೇಂದ್ರೆ

ಜಾಣ ಜಾಣೆಯರೆದೆಗೆ ಕನಸು ಕೊಡುವವಳೆ ಬಾಗಿದವರಿಗೆ ಭಾಗ ಹೃದಯ ಕೊಡುವವಳೆ ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ ಇನ್ನೊಬ್ಬರನು ಕಾಣೆ ಧರೆಗೆ ದೊಡ್ಡವಳೆ ಸಾವಿರದ ಶರಣವ್ವ ಕನ್ನಡದ ತಾಯೇ
– ಡಾ. ಚಂದ್ರಶೇಖರ ಕಂಬಾರ

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
– ರಾಷ್ಟ್ರಕವಿ ಕುವೆಂಪು

ಸಿರಿಗನ್ನಡಂ ಗೆಲ್ಗೆ, ಕನ್ನಡ ತಾಯ್ ಬಾಳ್ಗೆ
– ಬಿ. ಎಂ. ಶ್ರೀಕಂಠಯ್ಯ

ಕನ್ನಡವು ಕನ್ನಡವ ಕನ್ನಡಿಸುತಿರಬೇಕು
-ದ. ರಾ. ಬೇಂದ್ರೆ

“ಸಿರಿಗನ್ನಡಂ ಗೆಲ್ಲೆ”
– ರಾ.ಹ. ದೇಶಪಾಂಡೆ

ಸಾವಿರದ ಶರಣವ್ವ ಕನ್ನಡದ ತಾಯೇ
– ಡಾ. ಚಂದ್ರಶೇಖರ ಕಂಬಾರ

ಹೆಸರಾಯಿತು ಕರ್ನಾಟಕ,
ಉಸಿರಾಗಲಿ ಕನ್ನಡ
– ಚೆನ್ನವೀರ ಕಣವಿ
Advertisement
Hoi Malnad Advertisement