ನಮ್ಮಲ್ಲಿ ನನ್ನ ತಂದೆ ನೆಟ್ಟಿರುವ ಸುಮಾರು 50ಕ್ಕೂ ಅಧಿಕ 20 ವರ್ಷದ ಅಪ್ಪೆ ಮಿಡಿ ಮರವಿದೆ. ಅದರಲ್ಲಿ 40 ಮರಗಳು ಇದುವರೆಗೂ ಕ್ರಾಪ್ ಬಂದಿಲ್ಲ. ಈ ವರ್ಷ ಕೆಲವು ಮರದಲ್ಲಿ ತುಂಬಾ ಒಳ್ಳೆಯ ಅಪ್ಪೆ ಮಿಡಿ ಕಾಯಿ ಬಂದಿದೆ. ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಕಾಯಿ ಬರುತ್ತದೆ. ಕೆಲವು ಮರಗಳಲ್ಲಿ ಮಾತ್ರ ಇದುವರೆಗೆ ಕಾಯಿಯೆ ಬಂದಿಲ್ಲ. ಯಾಕೆ ಎಂಬುದೇ ನಿಗೂಢವಾಗಿ ಉಳಿದಿದೆ.

ಅಪ್ಪೆ ಮಿಡಿ ಉಪ್ಪಿನಕಾಯಿ ಇದೊಂದು ತಲಾತಲಾಂತರದಿಂದ ಬಂದಂತಹ ಪದ್ಧತಿ ಆಗಿದೆ. ಇದರಲ್ಲಿ ಕಾಯಿಯ ಆಯ್ಕೆ ಬಹಳ ಮುಖ್ಯ. ಎಲ್ಲಾ ಮರಗಳು ಆಗುವುದಿಲ್ಲ. ಹಾಗೂ ಅದು ಕೆಡದಂತೆ ಉಪ್ಪಿನಕಾಯಿ ಹಾಕುವುದು ಒಂದು ಹಿಂದಿನ ಕಾಲದಿಂದ ಬಂದಂತಹ ಬಳುವಳಿ ಆಗಿ ಬಂದಿದೆ. ಅದಕ್ಕೆ ತನ್ನದೇ ಆದ ಕ್ರಮಗಳು ಇದೆ ಉಪ್ಪಿನಕಾಯಿ ಹಾಕಲು. ಸುಮಾರು ಮೂರರಿಂದ ನಾಲ್ಕು ವರ್ಷ ಉಪ್ಪಿನಕಾಯಿ ಕೆಡದೆ ಇರಲು ಗಾಜಿನ ಪಾತ್ರೆ ಬಹಳ ಅವಶ್ಯಕ.

ಇವತ್ತು ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿನಕಾಯಿ ಮಾವಿನಕಾಯಿ ಆಗಿರುತ್ತದೆ ಹೊರತು ಅಪ್ಪೆ ಮಿಡಿ ಆಗಿರುವುದಿಲ್ಲ. ಆಗಿದ್ದರು ಬಾಟಲಿಯಲ್ಲಿ ಮೇಲೆ ನಾಲ್ಕು ಪರಿಮಳ ಭರಿತ ಅಪ್ಪೆ ಮಿಡಿ ಉಳಿದೆಲ್ಲವೂ ಸಾಧಾರಣ ಮಾವಿನ ಮಿಡಿ ಆಗಿರುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಅಪ್ಪೆ ಮಿಡಿ ಮಾವಿನಕಾಯಿ ಬಂದರೆ ಮಲೆನಾಡಿನ ಕೃಷಿಕರಿಗೆ ಇದೊಂದು ಒಳ್ಳೆಯ ವರದಾನ ಬೇರೆ ಯಾವ ಬೆಳೆಯು ಬೇಡ. ಆದರೆ ಹಾಗಾಗುತ್ತಿಲ್ಲ. ಒಂದು ಮಿಡಿಗೆ ನಾಲ್ಕರಿಂದ ಐದು ರೂಪಾಯಿ ಇದೆ. ಇದಕ್ಕೆ ಯಾವುದೇ ಪ್ರಾಣಿ ಪಕ್ಷಿಗಳ ಕಾಟವಿಲ್ಲ.
ನಿಜವಾದ ಅಪ್ಪೆ ಮಿಡಿ ಉಪ್ಪಿನಕಾಯಿ ತಿಂದವರಿಗೆ ಗೊತ್ತು ಅದರ ರುಚಿ ಹಾಗೂ ಪರಿಮಳ.( ಮಾರಾಟಕ್ಕೆ ಆಗುವಷ್ಟು ಸಿಕ್ಕಿಲ್ಲ)

ಮಲೆನಾಡಿನಲ್ಲಿ ಈಗ ಇರುವ ಹೆಸರುವಾಸಿಯಾದ ಅಪ್ಪೆ ಮಿಡಿಯ ಮರವನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಹಳ ಹಳೆಯ ಮರವಾದರೆ ಕಸಿಯ ಮುಖಾಂತರ ಅದನ್ನು ಉಳಿಸಿಕೊಳ್ಳುವುದು ಹಾಗೂ ನಮ್ಮ ಮುಂದಿನ ಪೀಳಿಗೆಯವರಿಗೆ ಆ ತಳಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಬರಹ: ಭರತ್ ರಾಜ್. ಕೆರೆಮನೆ. ಶೃಂಗೇರಿ
