Categories
Blogs

ಗಾದೆ ಮಾತುಗಳು – Gadhe Mathugalu In Kannada

  • ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?
  • ಹುಟ್ಟು ಗುಣ ಸುಟ್ಟರೂ ಹೋಗೋದಿಲ್ಲ
  • ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು.
  • ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
  • ಹೂವಿನಿಂದ ನಾರಿಗೂ ಸ್ವರ್ಗ
  • ಹೊಳೆ ನೀರಿಗೆ ದೊಣೆನಾಯ್ಕನ ಅಪ್ಪಣೆ ಏಕೆ ?
  • ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ
  • ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
  • ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
  • ಹಾಸಿಗೆ ಇದ್ದಷ್ಟು ಕಾಲು ಚಾಚು.
  • ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು
  • ಹಿತ್ತಲ ಗಿಡ ಮದ್ದಲ್ಲ.
  • ವಿನಾಶ ಕಾಲೇ ವಿಪರೀತ ಬುದ್ದಿ
  • ವೇದ ಸುಳ್ಳಾದರು ಗಾದೆ ಸುಳ್ಳಾಗದು.
  • ಶಂಖದಿಂದ ಬಂದರೇನೇ ತೀರ್ಥ.
  • ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
  • ಸಂಕಟ ಬಂದಾಗ ವೆಂಕಟರಮಣ.
  • ಸಂಸಾರ ಗುಟ್ಟು, ವ್ಯಾಧಿ ರಟ್ಟು.
  • ಸಗಣಿಯವನ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು.
  • ಸಜ್ಜನರ ಸಂಗ ಹೆಚ್ಚೇನು ಸವಿದಂತೆ
  • ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
  • ಸದಾಶಿವಂಗೆ ಅದೇ ಧ್ಯಾನ.
  • ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
  • ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
  • ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
  • ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ.
  • ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
  • ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.
  • ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ
  • ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ, ವಿಷ ಕುಡಿದ ಮಕ್ಕಳು ಬದುಕುತ್ತಾರಾ?
  • ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ
  • ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.
  • ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
  • ಹಂಗಿನ ಅರಮನೆಗಿಂತ ಗುಡಿಸಲೇ ಮೇಲು.
  • ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
  • ಮುಖ ನೋಡಿ ಮಣೆ ಹಾಕು.
  • ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
  • ಮೂಗಿಗಿಂತ ಮೂಗುತಿ ಭಾರ.
  • ಮೂರು ಹೆತ್ತವಳು ಆರು ಹೆತ್ತವಳಿಗೆ ಬುದ್ದಿ ಹೇಳಿದಂತೆ.
  • ಮೂರೂ ಬಿಟ್ಟೋನು,ಊರಿಗೆ ದೊಡ್ಡನು.
  • ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು.
  • ಯಥಾ ರಾಜಾ ತಥಾ ಪ್ರಜಾ.
  • ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ.
  • ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ.
  • ರವಿ ಕಾಣದ್ದನ್ನು ಕವಿ ಕಂಡ.
  • ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ.
  • ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ.
  • ರೇಷ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.
  • ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ
  • ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ
  • ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
  • ಮಗೂನ ಚಿವುಟೋದು, ತೊಟ್ಟಿಲು ತೂಗೋದು
  • ಮದುವೆಯಾಗೋ ಗುಂಡ ಅಂದರೆ ನೀನೇ ನನ್ನ ಹೆಂಡತಿಯಾಗು ಅಂದ ಹಾಗೆ
  • ಮನಸಿದ್ದರೆ ಮಾರ್ಗ.
  • ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
  • ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
  • ಮನೆಗೆ ಮಾರಿ, ಊರಿಗೆ ಉಪಕಾರಿ.
  • ಮನೇಲಿ ಇಲಿ, ಬೀದೀಲಿ ಹುಲಿ.
  • ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.
  • ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದರೆ, ಮೂರು ಮತ್ತೊಂದು ಅಂದಳಂತೆ.
  • ಬಿಸಿ ತುಪ್ಪ, ನುಂಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
  • ಬಿಳಿ ಆನೆ ಸಾಕಿದ ಹಾಗೆ
  • ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ.
  • ಬೀಸೊ ದೊಣ್ಣೆ ತಪ್ಪಿಸಿ ಕೊಂಡರೆ ಸಾವಿರ ವರ್ಷ ಆಯಸ್ಸು.
  • ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ.
  • ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ
  • ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
  • ಬೆಟ್ಟ ಅಗೆದು ಇಲಿ ಹಿಡಿದಂತೆ
  • ಬೆರಳು ತೋರಿಸಿದರೆ ಹಸ್ತ ನುಂಗಿದನಂತೆ.
  • ಬೆಳೆಯುವ ಪೈರು ಮೊಳಕೆಯಲ್ಲಿ
  • ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
  • ಬೇಲೀನೆ ಎದ್ದು ಹೊಲ ಮೇಯ್ದಂತೆ.
  • ಬೊಗಳುವ ನಾಯಿ ಕಚ್ಚುವುದಿಲ್ಲ. ಕಟ್ಟೋ ನಾಯಿ ಬೊಗಳೊಲ್ಲ.
  • ಮಂತ್ರಕ್ಕೆ ಮಾವಿನಕಾಯಿ ಉದುರತ್ಯೇ ?
  • ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು
  • ತಾನು ಕಳ್ಳ ಪರರ ನಂಬ
  • ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು.
  • ತಾನೂ ತಿನ್ನ, ಪರರಿಗೂ ಕೊಡ.
  • ತಾನೊಂದೆಣಿಸಿದರೆ ದೈವವೊಂದೆಣಿಸಿತು
  • ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ
  • ತಾಯಿಯಂತೆ ಮಗಳು ನೂಲಿನಂತೆ ಸೀರೆ
  • ತಾಳಕ್ಕೆ ತಕ್ಕ ಮೇಳ
  • ತಾಳಿದವನು ಬಾಳಿಯಾನು
  • ತುಂಬಿದ ಕೊಡ ತುಳುಕುವುದಿಲ್ಲ.
  • ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ
  • ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು
  • ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
  • ದೀಪದ ಕೆಳಗೆ ಯಾವತ್ತೂ ಕತ್ತಲೆ.
  • ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
  • ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ
  • ದೇಶ ಸುತ್ತು ; ಕೋಶ ಓದು.
  • ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
  • ಗಾಯದ ಮೇಲೆ ಬರೆ ಎಳೆದ ಹಾಗೆ.
  • ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ
  • ಗಾಳಿ ಬಂದಾಗ ತೂರಿಕೋ.
  • ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ?
  • ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರಂತೆ.
  • ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
  • ಗೆದ್ದೆತ್ತಿನ ಬಾಲ ಹಿಡಿದ ಹಾಗೆ
  • ಗೋರ್ಕಲ್ಲ ಮೇಲೆ ಮಳೆಗರೆದಂತೆ
  • ಚಾಪೆ ಇರುವಷ್ಟಕ್ಕೆ ಕಾಲು ನೀಡಬೇಕು
  • ಚಾಪೆ ಕೆಳಗೆ ಒಬ್ಬ ತೂರಿದರೆ ಇನ್ನೊಬ್ಬ ರಂಗೋಲಿ ಕೆಳಗೆ ತೂರಿದ
  • ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.
  • ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗತ್ತೆ
  • ಮಾಡಿದೋರ ಪಾಪ ಆಡಿದೋರ ಬಾಯಲ್ಲಿ
  • ಮಾಡಿದ್ದುಣೋ ಮಹರಾಯ.
  • ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
  • ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು.
  • ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ.
  • ಮಾತು ಮನೆ ಕೆಡಿಸಿತು; ತೂತು ಒಲೆ ಕೆಡಿಸಿತು.
  • ಮಾತು ಬೆಳ್ಳಿ, ಮೌನ ಬಂಗಾರ.
  • ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
  • ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
  • ಬಾಲ ಸುಟ್ಟ ಬೆಕ್ಕಿನ ಹಾಗೆ
  • ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
  • ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
  • ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
  • ಜನ ಮರುಳೋ ಜಾತ್ರೆ ಮರುಳೋ.
  • ಜಲ ನೋಡಿ ಬಾವಿ ತೆಗೀಬೇಕು, ಕುಲ ನೋಡಿ ಹೆಣ್ಣು ತರಬೇಕು.
  • ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು,
  • ತಮ್ಮ ಮನೇಲಿ ಹೆಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
  • ಕೈ ಕೆಸರಾದರೆ ಬಾಯಿ ಮೊಸರು
  • ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ
  • ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
  • ಕೈಲಾಗದೋನು ಮೈ ಪರಚಿಕೊಂಡ
  • ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
  • ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
  • ಕೊಟ್ಟ ಹೆಣ್ಣು ಕುಲದಿಂದ ಹೊರಗೆ
  • ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.
  • ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು.
  • ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.
  • ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
  • ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರಸಿದ ಹಾಗೆ.
  • ಕೋತಿಗೆ ಹೆಂಡ ಕುಡಿಸಿದ ಹಾಗೆ.
  • ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುವುದಿಲ್ಲ.
  • ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
  • ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು.
  • ಗಡ್ಡಕ್ಕೆ ಬೆಂಕಿ ಹೊತ್ತಿದಾಗ ಬಾವಿ ತೋಡಕ್ಕೆ ಶುರು ಮಾಡಿದರಂತೆ.
  • ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನಂತೆ.
  • ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
  • ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ.
  • ಎಲ್ಲರ ಮನೆಯ ದೋಸೆಯೂ ತೂತೆ !
  • ಐದು ಬೆರಳು ಒಂದೇ ಸಮ ಇರುವುದಿಲ್ಲ.
  • ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ.
  • ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವನ ಎತ್ತುಕೊಂಡು ಹೋಗಿ
  • ಒಲಿದರೆ ನಾರಿ ಮುನಿದರೆ ಮಾರಿ
  • ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು
  • ಓದುವಾಗ ಓದು, ಆಡುವಾಗ ಆಡು.
  • ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
  • ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ
  • ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
  • ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು
  • ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ.
  • ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ.
  • ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ
  • ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
  • ಊರಿಗೆ ಉಪಕಾರಿ, ಮನೆಗೆ ಮಾರಿ
  • ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೇ ?
  • ಊರು ಸುಟ್ಟರೂ ಹನುಮಂತರಾಯ ಹೊರಗೆ.
  • ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.
  • ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ದಿ.
  • ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
  • ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ ?
  • ಆಡು ಮುಟ್ಟದ ಸೊಪ್ಪಿಲ್ಲ ?
  • ಈಚಲ ಮರದ ಕೆಲಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ ?
  • ಈಸಿ ನೋಡು, ಇದ್ದು ಜೈಸಿ ನೋಡು ?
  • ಉಂಡೂ ಹೋದ, ಕೊಂಡೂ ಹೋದ.
  • ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.
  • ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ.
  • ಅರವತ್ತಕ್ಕೆ ಅರಳು ಮರಳು.
  • ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದನಂತೆ.
  • ಅಹಂಕಾರಕ್ಕೆ ಉದಾಸೀನವೇ ಮದ್ದು.
  • ಅಳಿಯ ಅಲ್ಲ, ಮಗಳ ಗಂಡ.
  • ಆಕಳು ಕಪ್ಪಾದರೆ ಹಾಲು ಕಪ್ಪೆ.
  • ಆಕಾಶಕ್ಕೆ ಏಣಿ ಹಾಕಿದ ಹಾಗೆ.
  • ಆಟಕ್ಕುಂಟು,ಲೆಕ್ಕಕ್ಕಿಲ್ಲ.
  • ಆತುರಗಾರನಿಗೆ ಬುದ್ದಿ ಮಟ್ಟ.
  • ಆಪತ್ತಿಗಾದವನೇ ನೆಂಟ.
  • ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ?
  • ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
  • ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದನಂತೆ.
  • ಇದ್ದೋರು ಮೂವರಲ್ಲಿ ಕದ್ದೋರು ಯಾರು ?
  • ಇಬ್ಬರ ಜಗಳ ಮೂರನೆಯವನಿಗೆ ಲಾಭ.
  • ಇರಲಾರದೆ ಇರುವೆ ಬಿಟ್ಟುಕೊಂಡ ಹಾಗೆ.
  • ಇರುವೆಗೆ ಇರುವೆ ಮೈ ಭಾರ, ಆನೆಗೆ ಆನೆ ಮೈ ಭಾರ ?
  • ಇರುಳು ಕಂಡ ಬಾವೀಲಿ ಹಗಲು ಬಿದ್ದರಂತೆ.
  • ಇಲಿ ಬಂತು ಅಂದರೆ ಹುಲಿ ಬಂತು ಎಂದರು.
Advertisement
Advertisement Advertisement