- ಅಜ್ಜಿಯ ಸೀರೆ ಮಡಚೋಕೆ ಆಗಲ್ಲ, ಅಜ್ಜನ ರೊಕ್ಕ ಎಣಿಸೋಕೆ ಆಗಲ್ಲ – ಮೋಡ, ನಕ್ಷತ್ರ
- ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ – ಬುಗುರಿ
- ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ.– ಬದನೇಕಾಯಿ
- ಸಾಗರ ಪುತ್ರ, ಸಾರಿನ ಮಿತ್ರ – ಉಪ್ಪು
- ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು – ನವಿಲು
- ಲಟಪಟ ಲೇಡಿಗೆ ಒಂದೇ ಕಣ್ಣು – ಸೂಜಿ
- ಹಸಿರು ಕೋಲಿಗೆ ಮುತ್ತಿನ ತುರಾಯಿ – ಜೋಳದ ತೆನೆ
- ಕಡ್ಲೆ ಕಾಳಷ್ಟು ಹಿಂಡಿ 32 ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ – ಹಲ್ಲುಪುಡಿ
- ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ – ರೊಟ್ಟಿ, ದೋಸೆ
- ಚಿಪ್ಪುಂಟು ಅಮೆಯಲ್ಲ, ಜುಟ್ಟುನಂಟು ಪೂಜಾರಿಯಲ್ಲ. – ಮೂರು ಕಣ್ಣುನಂಟು ಹರನಲ್ಲ, ಹಾಗಾದರೆ ನಾನು ಯಾರು? – ತೆಂಗಿನಕಾಯಿ
- ಕರಿ ಗುಡ್ಡಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ – ಗಡಿಗೆ ಮಜ್ಜಿಗೆ
- ಅಗಲವಾದ ಮಾಳಿಗೆಗೆ ಒಂದೇ ಕಂಬ – ಛತ್ರಿ
- ಬಿಳಿ ತೊಟ್ಟಿಯಲ್ಲಿ ಕಪ್ಪು ದ್ರಾಕ್ಷಿ – ಕಣ್ಣು
- ಎರಡು ಗವಿಗಳಿಗೆ ಒಂದೇ ಗೋಡೆ – ಮೂಗು
- ಹಸಿರು ಮರದಲ್ಲಿ ಮೊಸರು ಚೆಲ್ಲಿದೆ – ಮಲ್ಲಿಗೆ
- ಐದು ಮನೆಗೆ ಒಂದೇ ಅಂಗಳ – ಅಂಗ್ಯ
- ಚಿಕ್ಕ ಮನೆಗೆ ಚಿನ್ನದ ಬೀಗ – ಮೂಗುತಿ
- ಹಗ್ಗ ಹಾಸಿದೆ, ಹಸು ಮಲಗಿದೆ – ಕುಂಬಳಕಾಯಿ
- ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು – ಹುಂಜ
- ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತೆ ಗಡಿಯಾರವಲ್ಲ– ಕೋಳಿ
- ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ – ವರ್ಷ
- ಗುಂಡಾಕಾರ ಮೈಯೆಲ್ಲಾ ತೂತು – ದೋಸೆ
- ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ– ಚಿಮಿಣಿ
- ಒಂದು ಮರ, ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ – ಆಕಾಶ ನಕ್ಷತ್ರ ಚಂದ್ರ
- ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು – ಏಲಕ್ಕಿ
- ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು – ತಾರೆ
- ಲಟಪಟ ಲೇಡಿಗೆ ಒಂದೇ ಕಣ್ಣು– ಸೂಜಿ
- ಹಸಿರು ಕೋಲಿಗೆ ಮುತ್ತಿನ ತುರಾಯಿ – ಜೋಳದ ತೆನೆ
- ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ – ನಾಲಿಗೆ
- ಸೂಜಿ ಸಣ್ಣಕಾಗೆ ಬಣ್ಣ – ಕೂದಲು
- ಹೋದರು ಇರುತ್ತೆ ಬಂದರೂ ಕಾಡುತ್ತೆ. ಇದು ಏನು – ನೆನಪು
- ನೀಲಿ ಸಾಗರದಲ್ಲಿ ಬೆಳ್ಳನೇ ಮೀನುಗಳು ನಾನ್ಯಾರು – ತಾರೆಗಳು
- ಬಿಡಿಸಿದರೆ ಹೂವು, ಮಡಚಿದರೆ ಮೊಗ್ಗು – ಛತ್ರಿ
- ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುಸಿ – ಕಪ್ಪೆ
- ಮುಳ್ಳುಗಳಿವೆ ಅಪಾಯವಿಲ್ಲ, ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ, ಗಂಟೆ ಹೊಡೆಯುತ್ತದೆ, ದೇವಾಲಯವಲ್ಲ. – ಗಡಿಯಾರ
- ಕಾಸಿನ ಕುದುರೆಗೆ ಬಾಲದ ಲಗಾಮು – ಸೂಜಿ ದಾರ
- ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ, ಬೆಲೆಯಿಲ್ಲ, ಮೈ ಹಸಿರಾಗಿದೆ – ಗಿಳಿ
- ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ, ಮುಚ್ಚಿದರೆ ಹಾನಿ ಇದೇನು? – ಮೂಗು, ಬಾಯಿ
- ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು ? – ಮೊಟ್ಟೆ
- ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು? – ಕೋಳಿ
- ಇದ್ದಲು ನುಂಗುತ್ತ, ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು? -ರೈಲು
- ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ – ಗಡಿಯಾರ
- ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ – ಕಲ್ಲಂಗಡಿ ಹಣ್ಣು
- ೧೩.ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ. – ದಾರಿ
- ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು. – ಯುಗಾದಿ
- ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ.– ಬದನೆಕಾಯಿ.
- ಸಾಗರ ಪುತ್ರ, ಸಾರಿನ ಮಿತ್ರ. – ಉಪ್ಪು
- ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ.– ಅಕ್ಕಿ
- ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು. – ನವಿಲು.
- ಕಣ್ಣಿಲ್ಲ, ಕಾಲಿಲ್ಲ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ. – ನದಿ
- ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು. – ಕೋಳಿ
- ೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ. – ಮೂಗುಬೊಟ್ಟು
- ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ. – ನೆರಳು
- ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ – ಗಾಣ
- ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ – ಶ್ಯಾವಿಗೆ
- ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು – ತೆಂಗಿನಕಾಯಿ
- ಕತ್ತಲೆ ಮನೆಯಲಿ ಕಾಳವ್ವ ಕುಂತವೈ ಕುಯ್ಯೋ, ಮರ್ರೋ ಅಂತವಳೇ – ತಂಬೂರಿ
- ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ – ಕಪ್ಪೆ
- ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ – ಕಸಪೊರಕೆ
- ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು – ಉಪ್ಪು
- ಅಕ್ಕ ಪಕ್ಕ ಚದುರಂಗ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ ಇದು ಏನು? – ದತ್ತುರಿಯ ಮುಳ್ಳು.
- ವನದಲ್ಲಿ ಹುಟ್ಟಿ,ವನದಲ್ಲಿ ಬೆಳೆದು,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು. – ಕಮಲ.
- ಕೋಳಿ ಕುಗುತ್ತದೆ, ಮುಲ್ಲ ಚೂರಿ ಹಾಕುತ್ತಾನೆ. – ಗಿರಣಿ
- ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ. – ದುಡ್ಡು.
- ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ. – ಸಗಣಿ.
- ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬದೆ ದಾಗಿನ ಅಲ್ಲ.– ಗರಗಸ.
- ಕಡ್ಲೆ ಕಾಳಷ್ಟು ಹಿಂಡಿ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ. – ಹಲ್ಲುಪುಡಿ.
- ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ. – ಗಡಿಗೆಮಜ್ಜಿಗೆ.
- ೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ. – ರೊಟ್ಟಿ, ದೋಸೆ
- ಕೆಂದ ಕುದುರೆ,ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ – ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ
- ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ. – ಕಣ್ಣು.
- ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ. – ಬೆಣ್ಣೆ ಉಂಡೆ.
- ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.-ಅಂಗಿ.
- ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ – ಮಲ್ಲಿಗೆ
- ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ – ಆಕಾಶ, ನಕ್ಷತ್ರ
- ಸುಟ್ಟ ಹೆಣ ಮತ್ತೆ ಸುಡ್ತಾರೆ – ಇದ್ದಿಲು
- ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ – ಬಾಳೆ ಹಣ್ಣು
- ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ – ಬಳೆ
- ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ – ಬಳೆ
- ಒಂದು ಹಪ್ಪಳ ಊರಿಗೆಲ್ಲ ಊಟ – ಚಂದ್ರ
- ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ – ಹುಣಸೇಹಣ್ಣು
- ನೀಲಿ ಕೆರೆಯಲಿ ಬಿಳಿ ಮೀನು – ನಕ್ಷತ್ರ
- ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
- ಬಾ ಅಂದರೆ ಬರೋಲ್ಲ, ಹೋಗು ಅಂದರೆ ಹೋಗೋಲ್ಲ– ಮಳೆ
- ನಾ ಇರುವಾಗ ಬರುತ್ತೆ, ನಾ ಹೋದ ಮೇಲೂ ಇರುತ್ತೆ– ಕೀರ್ತಿ
- ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ– ಕಣ್ಣು
- ಅಕ್ಕನ ಮೇಲೆ ಛತ್ರಿ – ರೆಪ್ಪೆ
- ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು– ತೆಂಗಿನ ಕಾಯಿ
- ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ – ಕಣ್ಣು
- ಅಮ್ಮನ ಆಕಾಶವಾಣಿ ನಾನು – ಮಗು
- ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು – ಈರುಳ್ಳಿ
- ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ– ಬಾಳೆಹಣ್ಣು
- ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ– ಕಣ್ಣು
- ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ – ತೆಂಗಿನ ಕಾಯಿ
- ನೀನಿಲ್ಲದೆ ಊಟವಿಲ್ಲ– ಉಪ್ಪು
- ಬಿಳಿ ಸರದಾರನಿಗೆ ಕರಿ ಟೋಪಿ – ಬೆಂಕಿಕಡ್ಡಿ
- ಕಾಲಿಲ್ಲ ಹುಡುಗಿಗೆ ಮಾರುದ್ದ ಕಡಿವಾಣ – ಸೂಜಿ
- ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ– ಹೇನು ಕೂದಲು
- ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ, ಇನ್ನೊಬ್ಬ ಇಳಿತಾನೇ – ಬೆಂಕಿ,ಬಾಣಲೆ, ದೋಸೆ
- ಒಂದು ಮನೆಗೆ ಒಂದೇ ತೊಲೆ – ತಲೆ
- ಕಂದ ಬಂದ ಕೊಂದ ತಂದ – ಶ್ರೀ ರಾಮ ಚಂದ್ರ
- ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ – ಭೂಪಟ
- ಚಿಕ್ಕಕ್ಕನಿಗೆ ಪುಕ್ಕುದ್ದ– ಸೌಟು
- ಎರಡು ಮನೆಗೆ ಒಂದೇ ದೂಲ – ಮೂಗು
- ನೀರಿರೋತಾವ ನಿಲ್ಲಲೇ ಕೋಣ – ಚಪ್ಪಲಿ
- ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ– ನೆರಳು
- ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ – ಮನುಷ್ಯನ ಹುಟ್ಟು ಮಗು
- ೮೪. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ, ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು ಹೇಳಿ – ಸುಣ್ಣ
- ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ – ದೀಪ
- ಹೋಗುತ್ತಾ, ಬರುತ್ತಾ ಇರುವುದು ಎರಡು,ಹೋದ ಮೇಲೆ ಬರಲಾರವು ಎರಡು – ಸಿರಿತನ-ಬಡತನ, ಪ್ರಾಣ -ಬಡತನ
- ಒಂದು ಹಸ್ತಕ್ಕೆ ನೂರೆಂಟು ಬೆರಳು – ಬಾಳೆಗೊನೆ
- ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ – ಜರಡಿ
- ಎಂದರೆ ತೆರಿತಾವ, ಅಪ್ಪ ಎಂದರೆ ಮುಚ್ಚುತಾವ – ಬಾಯಿ
- ದಾಸ್ ಬುರುಡೆ ದೌಲಥ ಬುರುಡೆ, ಲೋಕಕ್ಕೆಲ್ಲ ಎರಡೇ ಬುರುಡೆ – ಸೂರ್ಯ, ಚಂದ್ರ
- ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ – ಅಡಿಕೆ ಮರ
- ಹಾರಾಡುತ್ತಿದೆ ಗಾಳಿಪತವಲ್ಲ, ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ– ಧ್ವಜ
- ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು? – ತಾರೆಗಳು
- ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು,ಇದು ಏನು? – ಛತ್ರಿ
- ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ– ನೊಣ
- ಒಂಟಿಕಾಲಿನ ಕುಂಟ. ನಾನ್ಯಾರು? – ಬುಗರಿ
- ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ – ಕಳ್ಳಿ
- ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು – ಶ್ರೀಗಂಧ
- ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು – ಪರಂಗಿ ಹಣ್ಣು
- ಒಂದು ಮನೆಯಲ್ಲಿ ಮೂರು ಜನ ಅಕ್ಕ – ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ– ಜಾದಳಕಾಯಿ
- ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ – ರೊಟ್ಟಿ
- ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ– ಎಲೆ ಅದಿಕೆ
- ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ – ಬಾಳೆಲೆ
- ಎರಡು ಬಾವಿಗಳ ನಡುವೆಯೊಂದು ಸೇತುವೆ – ಮೂಗು
- ತಿಂಡಿಗೆ ಕಡಿಮೆ ಇಲ್ಲ, ತೀರ್ಥ ಕುಡಿದರೆ ಸಾವು – ವಿಷ
- ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು, ಒಬ್ಬಳು ತೇಲಿದಳು – ಅಡಿಕೆ, ಸುಣ್ಣ
- ಹೋಗೋದು ಮುಳುಗೋದು ತರೋದು ಏನು? – ಬಿಂದಿಗೆ
- ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು? – ನೆನಪು
- ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ– ನುಸಿ
- ಊರಿಗೆಲ್ಲ ಒಂದೇ ಕಂಬಳಿ – ಆಕಾಶ
- ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ– ಕುಂಕುಮ
- ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ – ಬೈತಲೆ
- ಒಂದು ಬತ್ತಿ ಮನೆಯೆಲ್ಲ ಬೆಳಕು – ಸೂರ್ಯ
- ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ – ಗಾಳಿ
- ಕಣ್ಣಿಗೆ ಹತ್ತಿರ ಕಾಲಿಗೆ ದೂರ – ಬೆಟ್ಟ
- ಊಟಕ್ಕೆ ಮೊದಲು ನಾನು ಅಂತ ಬರುತ್ತೆ – ಬಾಳೆ ಎಲೆ, ತಟ್ಟೆ
- ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ-ಮಾವು
- ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ – ಬೆಕ್ಕು
- ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ – ಕಪ್ಪೆ
- ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು – ನದಿ
- ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ – ಮೇಡು
- ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ– ಆಕಾಶ
- ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ – ಜೋಳದ ದಂಟು
- ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು? – ಸಾಲಿಗ್ರಾಮ
- ಕರಿ ಹುಡುಗನಿಗೆ ಬಿಳಿ ಟೋಪಿ – ಹೆಂಡದ ಮಡಿಕೆ
- ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು, ಇದನ್ನು ನೋಡಲು ಜನ ಕಾದಿಹರು – ನಾಣ್ಯ
- ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ. – ತಿಗಣೆ
- ಕುದುರೆ ಬಾಲದಿಂದ ನೀರು ಕುಡಿಯುತ್ತದೆ – ಹೇನು
- ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು. – ಸೀತ ಫಲ
- ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ. – ಕಣ್ಣು
- ಮನೆ ಮೇಲೆ ಮಲ್ಲಿಗೆ ಹೂವು. – ಮಂಜು
- ಹಾರಿದರೆ ಹನುಮಂತ ಕೂಗಿದರೆ ಶಂಖ. – ಕಪ್ಪೆ
- ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು. – ಸುಣ್ಣ
- ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ. – ಪೋಸ್ಟ್ ಕಾರ್ಡ್
- ಬಿಳಿ ಕುದುರೆಗೆ ಹಸಿರು ಬಾಲ. – ಮೂಲಂಗಿ
- ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ. – ಕುಂಕುಮ
- ಬರೋದ ಕಂಡು ಕೈ ಒಡ್ತಾರೆ. – ಬಸ್
- ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು – ಹುಂಜ
- ಹಸಿರು ಮುಖಕ್ಕೆ ವಿಪರೀತ ಕೋಪ, ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ? – ಮೆಣಸಿನಕಾಯಿ
- ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು – ಬೆಳ್ಳುಳ್ಳಿ
- ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ? ನಾನ್ಯಾರು ಹೇಳಿ? – ನಕ್ಷತ್ರ
- ಹಗ್ಗ ಹಾಸಿದೆ ಕೋಣ ಮಲಗಿದೆ – ಕುಂಬಳಕಾಯಿ, ಬಳ್ಳಿ
- ನನ್ನ ಕಂಡರೆ ಎಲ್ಲರು ಓದೀತಾರೆ – ಚೆಂಡು
- ಹಳ್ಳಿ ಗಡಿಯಾರ, ಒಳ್ಳೆ ಆಹಾರ – ಕೋಳಿ
- ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ – ಕಣ್ಣು.
- ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ನಾನು ಯಾರು – ಗಾಂಧೀಜಿ
- ಬಾಯಲ್ಲಿ ಹಲ್ಲಿಲ್ಲ, ಮಯಲ್ಲಿ ಶಕ್ತಿ ಇಲ್ಲ, ತಲೆಯಲ್ಲಿ ಕೂದಲಿಲ್ಲ, ಆದ್ರೂ ಎಲ್ಲುನ್ನು ಕಾಡತಿನಿ ನಾನ್ಯಾರು. – ಸೊಳ್ಳೆ
- ಅಕ್ಷರಗಳಿದ್ದರೂ ಪುಸ್ತಕವಲ್ಲ,ಸಿಂಹವಿದ್ದರೂ ಅರಣ್ಯವಲ್ಲ,ದುಂಡಾಗಿದ್ದರೂ ಚಕ್ರವಲ್ಲ,ನಾನ್ಯಾರು. – నాణ్య
- ಗಂಟೆ ಹೊಡೆಯುತ್ತಾನೆ ಪೂಜಾರಿ ಅಲ್ಲ, PAPER ಅರಿಯುತ್ತಾನೆ ಆದರೆ ಹುಚ್ಚುನೂ ಅಲ್ಲ, ಹಣ ಕೇಳುತ್ತಾನೆ ಭಿಕ್ಷುಕ ಅಲ್ಲ – ಕಂಡಕ್ಟರ್
- ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆತುಂಬ – ದೀಪದ ಬೆಳಕು
- ಕಾಲಿಲ್ಲದೆ ನಡೆಯುವುದು ಬಾಯಿಲ್ಲದೆ ನುಡಿಯುವುದು ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು – ನದಿ
- ಚೋಟುದ್ದ ಹುಡುಗಿಗೆ ಮಾರುದ್ದ ಜಡೆ – ಸೂಜಿ ದಾರ
- ಊರುಂಟು ಜನರಿಲ್ಲ ನದಿಯುಂಟು ನೀರಿಲ್ಲ – ಭೂಪಟ.
- ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ – ಹುರಳಿಕಾಯಿ
- ಬಿಳಿಯ ಹೊಲದಲ್ಲಿ ಕರಿ ಕಾಳು ಕೈಯಲ್ಲಿ ಬಿತ್ತುತ್ತಾರೆ ಬಾಯಲ್ಲಿ ಏತ್ತುತ್ತಾರೆ ನಾನು ಯಾರು – ಪುಸ್ತಕ ಮತ್ತು ಅಕ್ಷರಗಳು
- ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? – ಭಾರತ
- ನಾಲ್ಕು ಕಂಬಗಳುಂಟು ದೇವಾಲಯವಲ್ಲ; ಎರಡು ಮೊರಗಳುಂಟು ಕೇರಲಾಗುವುದಿಲ್ಲ; ಒಂದು ಕಹಳೆಯುಂಟು ಊದಲಾಗುವುದಿಲ್ಲ; ಹಾಗಾದರೆ ನಾನು ಯಾರು? – ಆನೆ
- ಕರಿ ಕಂಬ್ಬಿ ನೆಂಟ, ಸರೊತ್ತಿನಲ್ಲಿ ಹೊಂಟ, ಅವನ್ಯಾರು? – ಹೆಗ್ಗಣ
- ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ – ದೀಪ/ಹಣತೆ
Categories