ಕನ್ನಡ ರಾಜ್ಯೋತ್ಸವ ಮತ್ತು ಹೆಮ್ಮೆಯ ಕನ್ನಡತನದ ಕುರಿತ ಉಲ್ಲೇಖಗಳು – Kannada Rajyotsava Quotes ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆನಿತ್ಯೋತ್ಸವ ತಾಯಿ ನಿತ್ಯೋತ್ಸವ– ಕೆ. ಎಸ್. ನಿಸಾರ್ ಅಹಮದ್ ಹಚ್ಚೇವು ಕನ್ನಡದ ದೀಪಕರುನಾಡದೀಪ ಸಿರಿನುಡಿಯದೀಪಒಲವೆತ್ತಿ ತೋರುವಾ ದೀಪ– ಡಿ.ಎಸ್. ಕರ್ಕಿ ಕನ್ನಡ ಎನೆ ಕುಣಿದಾಡುವುದೆನ್ನೆದೆ,ಕನ್ನಡ ಎನೆ ಕಿವಿ ನಿಮಿರುವುದು!ಕಾಮನ ಬಿಲ್ಲನು ಕಾಣುವ ಕವಿಯೊಳುತೆಕ್ಕನೆ ಮನ ಮೈ ಮರೆಯುವುದು– ರಾಷ್ಟ್ರಕವಿ ಕುವೆಂಪು “ಸಿರಿಗನ್ನಡಂ ಗೆಲ್ಲೆ”– ರಾ.ಹ. ದೇಶಪಾಂಡೆ […]
 
		