Categories
Info

SPL – ಸಹ್ಯಾದ್ರಿ ಪ್ರೀಮಿಯರ್ ಲೀಗ್ ಮಧುರ ದಿನಗಳ ಮನನ

ಸಹ್ಯಾದ್ರಿ ಪಾಲಿಟೆಕ್ನಿಕ್ ತೀರ್ಥಹಳ್ಳಿ(SPT ) ಹಳೆಯ ವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾವಳಿ ಸಹ್ಯಾದ್ರಿ ಪ್ರಿಮಿಯರ್ ಲೀಗ್ Sahyadri Premier League 2025 ಫೆಬ್ರವರಿ 8 ಮತ್ತು 9 ನೇ ತಾರೀಕು ಬೆಂಗಳೂರಿನ ಗ್ಲೋಬಲ್ ವಿಲೇಜ್ ಕ್ರೀಡಾಂಗಣದಲ್ಲಿ ನೆಡೆಯಲಿದೆ.
SPL (ಸಹ್ಯಾದ್ರಿ ಪ್ರೀಮಿಯರ್ ಲೀಗ್) ನ 14ನೇ ಆವೃತ್ತಿ ಇದಾಗಿದ್ದು ಕಳೆದ 15 ವರ್ಷಗಳಿಂದ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆಡೆಸಿಕೊಂಡು ಬರುತ್ತಿದ್ದು ಕರೋನ ಮಹಾಮಾರಿಯ ಕಾರಣದಿಂದ ಒಂದು ಆವೃತ್ತಿಯನ್ನು ರದ್ದು ಮಾಡಲಾಗಿತ್ತು.

2010 ರಲ್ಲಿ ಸಹ್ಯಾದ್ರಿ ಪಾಲಿಟೆಕ್ನಿಕ್ ನ ಕೆಲವು ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ SPT ಹಳೆಯ ವಿದ್ಯಾರ್ಥಿಗಳೆಲ್ಲರನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ಹಳೆಯ ವಿದ್ಯಾರ್ಥಿ ಸಂಘ ರಚಿಸಬೇಕೆಂದು ನಿರ್ಣಯ ಮಾಡಿ 2011 ಜನವರಿಯಲ್ಲಿ “ಸಹ್ಯಾದ್ರಿ ಸಮ್ಮಿಲನ” ಎಂಬ ಹೆಸರಿನಲ್ಲಿ ತೀರ್ಥಹಳ್ಳಿ ಕಾಲೇಜಿನಲ್ಲಿ ಅಭೂತಪೂರ್ವವಾದ ಕಾರ್ಯಕ್ರಮವನ್ನು ಎಲ್ಲಾ ಹಳೆಯ ವಿದಾರ್ಥಿಗಳನ್ನು ಸೇರಿಸಿ ಯಶ್ವಸಿಯಾಗಿ ನೆಡೆಸಲಾಯಿತು.

ಹೀಗೆ ಪ್ರಾರಂಭವಾದ ಹಳೆಯ ವಿದ್ಯಾರ್ಥಿಗಳ ಒಡನಾಟವನ್ನು ಸಕ್ರಿಯವಾಗಿಡಲು ವರ್ಷಕೊಮ್ಮೆ ಎಲ್ಲರನ್ನು ಒಗ್ಗೂಡಿಸಲು ಏನಾದರೂ ಒಂದು ಚಟುವಟಿಕೆ ಮಾಡಬೇಕೆಂದುಕೊಂಡಾಗ ಆಗಷ್ಟೆ ಜನಪ್ರಿಯವಾಗಿ ಪ್ರಾರಂಭವಾಗಿದ್ದ IPL ನಿಂದ ಪ್ರಭಾವಿತರಾಗಿ SPL ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ದಿನಗಳ ಕಾಲ ಪ್ರತಿ ವರ್ಷ ನೆಡೆಸಲು ನಿರ್ಧರಿಸಲಾಯಿತು. ಹದಿನೈದು ವರ್ಷಗಳ ಹಿಂದೆ ಪ್ರಾರಂಭವಾದ ಗೆಳೆಯರ ಕ್ರೀಡೋತ್ಸವ ಇಂದಿಗೂ ಅದೇ ಮೆರುಗು ತುಂಬಿಕೊಂಡು ಮುನ್ನೆಡೆಯಿತ್ತಿದೆ.

IPL ನಿಂದ ಪ್ರಭಾವಿತರಾದರಷ್ಟೇ ಸಾಲದು ಅದಕ್ಕೆ ತಕ್ಕಂತೆ ಕ್ರೀಡಾಕೂಟ ಆಯೋಜನೆಯು ಇರಬೇಕೆಂದು ನಿರ್ಧರಿಸಿ ತಂಡಗಳ ಖರೀದಿಗೆ ಫ್ರಾಂಚೈಸಿ ಮಾಲೀಕತ್ವದ ಜೊತೆಗೆ ಮೊದಲ ಮೂರು ವರ್ಷ ಆಟಗಾರರ ಹರಾಜು ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಮಾಡಿ ತದನಂತರ ಆಟಗಾರರ ಹರಾಜಿಗಂತಲೆ ವಿಶೇಷ ವ್ಯವಸ್ಥೆಯುಳ್ಳ ಹೋಟೆಲ್ ನಲ್ಲಿ ಎಲ್ಲ ಫ್ರಾಂಚೈಸಿ ಮಾಲೀಕರಿಗೆ ಮೀಸಲಿರುವ ಪಾಯಿಂಟ್ಸ್ ಗಳ ಮೂಲಕ ನೋಂದಣಿಯಾದ ಆಟಗಾರರಲ್ಲಿ ತಮಗೆ ಬೇಕಾದ ಆಟಗಾರರನ್ನು ಬಿಡ್ ನಲ್ಲಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿ ನೇರ ಪ್ರದರ್ಶನದ ಮೂಲಕ ಅದ್ದೊರಿಯಾಗಿ ಆಟಗಾರರ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ ಇಂದಿಗೂ ಕೂಡ IPL ಮಾದರಿಯಲ್ಲೇ ತುಂಬಾ ಅಚ್ಚುಕಟ್ಟಾಗಿ ಮತ್ತು ಐಷಾರಾಮಿಯಾಗಿ ಆಟಗಾರರ ಹರಾಜು ಪ್ರಕ್ರಿಯೆ ನೆಡೆಯುತ್ತಿದೆ.

SPL ಪ್ರಾರಂಭಿಕ ದಿನಗಳಿಂದಲೂ ಆಟದ, ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಹಲವಾರು ವಿಶೇಷ ವ್ಯಸ್ಥೆಯೊಂದಿಗೆ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತದೆ, SPL ನಾಲ್ಕನೇ ಸರಣಿಯಿಂದ ನೇರ ಪ್ರಸಾರದ ವ್ಯವಸ್ಥೆಯನ್ನು ಜೊತೆಗೆ ಕ್ರಿಕೆಟ್ ಗೆ ಪೂರಕವಾದ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿರುವುದು ಕೂಡ ವಿಶೇಷ.

ಈ ಕ್ರೀಡಾಕೂಟದಲ್ಲಿ 250ಕ್ಕೂ ಹೆಚ್ಚು ಆಟಗಾರರು ನೋಂದಣಿ ಮಾಡಿಕೊಳ್ಳುತ್ತಾರೆ ಹಾಗೆ ಎಲ್ಲರು ಸೇರಿ 400 ರಿಂದ 500 ಜನ ಎರಡೂ ದಿನಗಳ ಕಾಲ ಪಾಲ್ಗೊಂಡು SPL ನಲ್ಲಿ ಸಂಭ್ರಮಿಸುತ್ತಾರೆ.
ಈ ರೀತಿಯ ಸ್ನೇಹ ಸಮ್ಮಿಲವನ್ನು ಹದಿನೈದು ವರ್ಷಗಳಿಂದ ನಿರಂತರಾಗಿ ಮಾಡಿಕೊಂಡು ಬರುತ್ತಿರುವುದು, ಅದು ಕೂಡ ಒಂದೇ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮಾತ್ರ ಅಂದಾಗ ಇದೊಂದು ಸಾಧನೆಯೇ ಸರಿ .

SPL ಪ್ರಾರಂಭವಾದ ಮೊದಲಿಗೆ ಊರಿನಲ್ಲಿರುವ ಮತ್ತು ಅನೇಕ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿಗೆ ಬಂದು ಕ್ರಿಕೆಟ್ ಆಡುತ್ತೇವೆ ಎಂದು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ವಿಷಯವಾಗಿತ್ತು.
ಇಂದಿಗೂ ಕೂಡ ರಾಜ್ಯದ ಮತ್ತು ದೇಶದ ವಿವಿಧ ಮೂಲೆಗಳಿಂದ ಹಾಗು ಕೆಲವು ವಿದ್ಯಾರ್ಥಿಗಳು ಹೊರ ದೇಶಗಳಲ್ಲಿದ್ದು SPL ಸಮಯದಲ್ಲೇ ಭಾರತಕ್ಕೆ ಬರುವ ಯೋಜನೆ ಮಾಡುತ್ತಾರೆ. ಅಂದರೆ ಈ ಕ್ರೀಡಾಕೂಟದ ಮಹತ್ವ ಮತ್ತು ಇದರ ಬಗೆಗಿರುವ ಒಲವನ್ನು ತಿಳಿಸುತ್ತದೆ.

ಈ ಕ್ರೀಡಾಕೂಟದ ಉದ್ದೇಶವೇ ಸ್ನೇಹಿತರನ್ನು ಒಂದುಗೂಡಿಸುವುದೇ ಆಗಿರುವುದರಿಂದ ಆಟಕ್ಕಿಂತ ಭಾವನೆಗಳಿಗೆ ಹೆಚ್ಚು ಮಹತ್ವವಿದೆ. ಇಲ್ಲಿ ಆಟದ ಎಲ್ಲಾ ನಿಯಮಗಳೂ ಇದ್ದರೂ, ಆಟದ ಪರಾಕಾಷ್ಠೆಯಲ್ಲಿ ಆಟಗಾರರು ಇದ್ದರೂ ಕೂಡ ಎಲ್ಲರಲ್ಲೂ ಎಲ್ಲರೂ ನಮ್ಮವರೇ ಎಂಬ ಭಾವನೆಯ ಆಟವೇ ಜಯಿಸುತ್ತದೆ.

ಇಲ್ಲಿ ಯಾವುದೇ ರೀತಿಯ ನಗದು ಬಹುಮಾನಗಳು ಇರುವುದಿಲ್ಲ,ಗೆದ್ದ ತಂಡಗಳಿಗೆ ಜಯದ ಟ್ರೋಫಿ ಜೊತೆಗೆ ಆಕರ್ಷಕ ರೀತಿ ಮರದಲ್ಲಿ ತಯಾರಾದ SPL ಆವರ್ತನ ಟ್ರೋಫಿಯನ್ನು ನೀಡಲಾಗುತ್ತದೆ.

SPT ಯ ಹಳೆಯ ವಿದ್ಯಾರ್ಥಿಗಳನೆಲ್ಲ ಬೆಂಗಳೂರಿನಲ್ಲಿ ಸೇರಿಸಿ ಕ್ರೀಡಾಕೂಟ ಮಾಡುತ್ತಾ ಇದ್ದರೂ ಆಯೋಜಕರಲ್ಲಿ ಒಮ್ಮೆ ತೀರ್ಥಹಳ್ಳಿಯಲ್ಲಿ ಕ್ರೀಡಾಕೂಟವವನ್ನು ಆಯೋಜಿಸಬೇಕೆಂದು ಬಯಕೆ ಇತ್ತು!
ಆ ಸುಸಂಧರ್ಭ ಕೂಡ ಒಂದು ಸುವರ್ಣ ಗಳಿಗೆಯಲ್ಲಿ ಬಂದು SPL ನ ಹತ್ತನೇ ವರ್ಷದ ಆಯೋಜನೆ ತೀರ್ಥಹಳ್ಳಿಯಲ್ಲಿ “SPL ದಶಮಾನೋತ್ಸವ” ಎಂಬ ಹೆಸರಿನಲ್ಲಿ ಅದ್ದೂರಿಯಾಗಿ ನೆರವೇರಿತು.

SPT ಹಳೆಯ ವಿದ್ಯಾರ್ಥಿಗಳ ಈ ಕ್ರೀಡಾಕೂಟದಲ್ಲಿ ಹಿರಿಯ ಕಿರಿಯ ವಿದ್ಯಾರ್ಥಿಗಳೆನ್ನದೆ ಎಲ್ಲರೂ ಒಂದೇ ರೀತಿಯಲ್ಲಿ ಆಯೋಜನೆಯಲ್ಲಿ ಪಾಲ್ಗೊಂಡು ಹಿರಿಯ ವಿದ್ಯಾರ್ಥಿಗಳ ಪ್ರೋತ್ಸಾಹ,ಕಿರಿಯ ವಿದ್ಯಾರ್ಥಿಗಳ ಉತ್ಸಾಹದೊಂದಿಗೆ ಈಗ ಹದಿನಾಲ್ಕನೆ ಸರಣಿಗೆ ಅಣಿಯಾಗುತ್ತಿದೆ

SPT ಹಳೆಯ ವಿದ್ಯಾರ್ಥಿಗಳಿಂದ SPT ಹಳೆಯ ವಿದ್ಯಾರ್ಥಿಗಳಿಗಾಗಿ SPT ಹಳೆಯ ವಿದ್ಯಾರ್ಥಿಗಳಿಗೋಸ್ಕರವೇ ಇರುವ ಈ ಕ್ರೀಡಾಕೂಟದಲ್ಲಿ ಎಲ್ಲ ಹಳೆಯ ವಿದ್ಯಾರ್ಥಿಗಳ ಸ್ನೇಹ ವಲಯ ಅವರ ಕುಟುಂಬ ಹಾಗು ಇನ್ನಿತರ ಆಹ್ವಾನಿತರು ತಮ್ಮದೇ ಕ್ರೀಡಾಕೂಟವೆಂಬಂತೆ ಪಾಲ್ಗೊಳ್ಳುತ್ತಾರೆ.

SPT ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು SPL ಕ್ರೀಡಕೂಟ ಸಾಕಷ್ಟು ಮೊದಲುಗಳಿಗೆ ಮುನ್ನುಡಿಯಾಗಿ ಇಂದಿಗೂ ಇದರಿಂದ ಪ್ರಭಾವಿತಾರಾಗಿ ಹಲವಾರು ಸ್ನೇಹಿತಾ ವಲಯದವರು ತಾವು ಕೂಡ ಇಂತಹ ಕಾರ್ಯಕ್ರಮನ್ನು ಆಯೋಜಿಸಿ ಹಳೆಯ ವಿದ್ಯಾರ್ಥಿಗಳ ಈ ಉದ್ದೇಶಕ್ಕೆ ಮಾಭಿಮಾನದಿನದ ಪ್ರಶಂಸಿಸುತ್ತಿರುವುದು ವಿಶೇಷ.

Advertisement
Advertisement Advertisement