ಮಲೆನಾಡ ಮಗಳು…
ಮಲೆನಾಡ ಮಣ್ಣಿನಲ್ಲಿ ಮೂಡಿದ ಕುಸುಮವವಳು
ಹಸುರಿನ ತಾಣದಲ್ಲಿ ಮಿಂದೆದ್ದ ಕೂಸಿವಳು
ಮಲೆನಾಡ ಮಣ್ಣಿನಲ್ಲಿ ಹಸನಾದ ಫಸಿರಿವಳು
ಮಳೆ ಕಾಡಿನ ಮಳೆ ಹನಿಗಳ ಸ್ಪರ್ಶವಿವಳು
ಕಾಫಿಯ ಗಮದ ಸುವಾಸನೆಯಿವಳು
ಗೆಳೆಯರೊಡನೆ ಆಟವಾಡಿದ ಬಾಲೆ ಅವಳು
ಹಸಿರು ಬಯಲಿನಲ್ಲಿ ನಾಟ್ಯವಾಡಿದ ನವಿಲು ಅವಳು
ಬನದ ಕಾಡಲ್ಲಿ ಕುಣಿದೆದ್ದ ಚಿಗರೆ ಅವಳು
ನಿಸರ್ಗದೊಂದಿಗೆ ದನಿಗೂಡಿಸಿದ ಕೋಗಿಲೆ ಅವಳು
ಹಸಿರ ಸೊಂಪಲ್ಲಿ ಮಿಂದೆದ್ದ ಅಡವಿಯ ರಾಣಿ ಅವಳು
ಮಲೆನಾಡ ಸಂಸ್ಕೃತಿಯ ಸಿಂಗಾರ ಅವಳು
ಹಸಿರಿನ ಸೆರಗನ್ನು ಹೊದ್ದವಳು ಅವಳು
ಮಲ್ಲಿಗೆ ಹೂವ ಮುಡಿದವಳು ಅವಳು
ಹಸಿರು ಗಾಜಿನ ಬಳೆಯ ಸದ್ದು ಅವಳು
ಕಾಲ್ಗೆಜ್ಜೆಯ ನಾದದ ರಿಂಗಣ ಅವಳು
ಹುಟ್ಟೂರ ಹೊನ್ನಿನಲ್ಲಿ ಅರಳಿದ ಪ್ರತಿಭೆಯಿವಳು
ಬಿದ್ದರೂ ಎದ್ದರೂ ಮತ್ತೆ ಚಿಗುರುವ ಬಳ್ಳಿಯಿವಳು
ಮಲ್ನಾಡ ಹಳ್ಳಿಯ ಹೆಜ್ಜೆ ಗುರುತಿವಳು
ದೂರಾದರೂ ಮರೆಯಲಾಗದ ಹುಟ್ಟೂರಿನ ಮಗಳಿವಳು
ಮಲೆನಾಡ ಮಗಳು!
