Categories
Quotes

Sudhanva Gadikal Quotes About Malenadu

ನನ್ನೂರು ಮಲೆನಾಡು

ಮೋಡ ಮುಸುಕಿರಲು ಬಾನಿಗೆ…
ಶುರು ಮಳೆ ಹನಿಯ ದಿಬ್ಬಣ ಭೂಮಿಗೆ,
ಜೀರುಂಡೆಗಳ ಸದ್ದಿನ ನಡುವಲ್ಲಿ…
ನಾಚುತ್ತಿದೆ ಕಾನನ ತಂಗಾಳಿಯಲ್ಲಿ,
ಸಿಡಿಲು ಮಿಂಚುಗಳ ರೌದ್ರ ನರ್ತನ…
ಮಲೆನಾಡಿಗೆ ಮಳೆಯ ಸಿಂಚನ..!

ಮಲ್ನಾಡ್ ಜೀವ್ನ

ಮಂಡೆಗ್ ಹಾಕಿರೋ ಮಂಡಾಳೆ ಜಾರಲ್ಲ…
ಮಲೆನಾಡಿಗರಿಗೆ ಮಳೆಗಾಲವೆಂದರೆ ಬೇಜಾರಾಗಲ್ಲ,
ಮಳೆಗಾಲದ ನಡುವೆ ಬರುತ್ತೆ ಕಪ್ಪೆ ಹುಳ ಸತ್ತ ದುರ್ಗಂಧ…
ಆದರೂ ನಂಗ್ ನನ್ನ ಮಲ್ನಾಡೆ ಚಂದ..
ಮಲೆನಾಡಿನ ಆಚರಣೆಗಳು ಹೋಗುತ್ತಿದವೇ ಮರೆತು…
ಮರ ಗಿಡನೆಲ್ಲ ಕಡೆದು ಪ್ರಾಣಿ ಪಕ್ಷಿನೆಲ್ಲ ಕೊಂದು ನಾವಾಗಿ ನಾವೇ ತಯಾರು ಮಾಡ್ತಿದ್ದೀವಾ ಮಲೆನಾಡಿಗೆ ಚಿತೆ..!
ಸುಧನ್ವ ಗಡಿಕಲ್
Advertisement
Hoi Malnad Advertisement