ಮಲೆನಾಡಿನ ಭಾಗದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಜನಪದ ಸಂಪ್ರದಾಯವನ್ನು ನಡೆಸಲಾಗುತ್ತದೆ. ದೀಪಾವಳಿ(ಪಾಡ್ಯದಿಂದ) ಹಬ್ಬದ ಮೂರು ರಾತ್ರಿಗಳಲ್ಲಿ ಹೀಗೆ ಮನೆ ಮನೆಗೆ ಹಾಡು ಹೇಳಿಕೊಂಡು, ದೀಪ ಹಿಡಿದು ಹೊರಡುತ್ತಾರೆ. ದೀಪ ಹಚ್ಚುವುದು, ಎಣ್ಣೆ ಹೊಯ್ಯುವುದು, ಗರತಿ ಬರುವುದು, ಹೀಗೆ ಎಲ್ಲವಕ್ಕೂ ಒಂದೊಂದು ಹಾಡು, ಒಂದೊಂದು ಪದ. ಕೆಲವು ಹಿರಿಯರು ಅಲ್ಲೇ ಪದಕಟ್ಟಿ ಹಾಡುತ್ತಾರೆ.
ಜ್ಯೋತಿ ಹಾಡು :
ಸತ್ಯಳು ಸ್ವಾಮಿಯ ಶರಣು ಮಾಡಲು ಬಂದು ಶರನೆಂದರ ಕೈಯ ಮುಗುದೆವು……
ಕಟ್ಟೆ ಕಟ್ಟಿಸೆವು ಬಟ್ಟರಾ ಕರಾಸೆವು ಈ ಕಟ್ಟೆಗೂ ಪೂಜೆ……
ಜೋಯ್ಸರ ಕರಾಸೆವು ಜಪಗಳ ನಡೆಸವು ಸ್ವಾಮಿ ನಿಮ್ಮ ಪೂಜೆ….
ಸ್ವಾಮಿ ನಿಮ್ಮ ಪೂಜೆ ಸಲ್ಲಿಸೆವು ಜಗಜ್ಯೋತಿ ಸತ್ಯದಿಂದ್ ಉರಿಯೆ…..
ಹಣ್ಣುರೆಡೆಟ್ಟೇವು ಕಾಯಿ ಎರಡ ಒಡೆಸೆವು ಸ್ವಾಮಿ ನಿಮ್ಮ ಪೂಜೆ…..
ಸ್ವಾಮಿ ಜ್ಯೋತವನ ಶಿವಪೂಜೆ ಸಲ್ಲಿಸೆವು ಸತ್ಯದಿಂದ ಉರಿಯೆ….
ಆ ಕೈಲಿ ಆರತಿ ಮಾ ಕೈಲಿ ಶಿವಗಂಟೆ ಮಾಚೋಳು ಜೋತವನ…..
ಮಾಚೋಳು ಜೋತವನ ಶಿವಪೂಜೆ ಸಲ್ಲಿಸೆವು ಸತ್ಯದಿಂದ್ ಉರಿಯೆ…..
ಎಣ್ಣೆಲಿ ಹುಟ್ಟುವಾವಳೇ ಎಣ್ಣೆಲಿ ಬೆಳೆವವಳೇ ಎಣ್ಣೆಲಿ ಕಣ್ಣ ಬಿಡುವವಳೇ…..
ಎಣ್ಣೆಲಿ ಕಣ್ಣ ಬಿಡುವವಳೇ ಜಗಜ್ಯೋತಿ ಸತ್ಯದಿಂದ ಉರಿಯೆ….
ಬತ್ತಿಲಿ ಹುಟ್ಟುವಾವಳೇ ಬತ್ತಿಲೇ ಬೆಳೆವವಳೇ ಬತ್ತಿಲಿ ಕಣ್ಣಾ ಬಿಡುವವಳೇ….
ಬತ್ತಿಲೇ ಕಣ್ಣಾ ಬಿಡುವವಳೇ ಜಗಜ್ಯೋತಿ ಸತ್ಯದಿಂದ್ ಉರಿಯೆ…..
ಕಾವಳು ಕಾವುದವು ದೇವರೇ ನಿಮ್ಮ ಗುಡ್ಡಕ್ಕೆ ಗಂಧದ ಹೊಗೆಯೇ……
ಗಂಧದ ಹೊಗೆಯೇ ಕಾವುದವು ಜಗಜ್ಯೋತಿ ಸತ್ಯದಿಂದ ಉರಿಯೆ……….
ಮಂಜು ಕಾವುದವು ಸ್ವಾಮಿ ನಿಮ್ಮ ಗುಡ್ಡಕ್ಕೆ ಕರಪುರದ ಹೊಗೆಯೇ…..
ಕರಪುರದ ಹೊಗೆಯೇ ಕಾವದವು ಜಗಜ್ಯೋತಿ ಸತ್ಯದಿಂದ ಉರಿಯೆ….
ದಿಪ್ಪರು ಹೊಡಿಯುವದು..
ದೀಪೋಳಿಗೆ ಎನ್ನಿರೋ ದೇವರ ದೀಪೋಳಿಗೆ…….
ದೀಪೋಳಿಗೆ ಎನ್ನಿರೋ ಇಲ್ಲಿರುವ ದೇವ್ರಿಗೆ……
ದೀಪೋಳಿಗೆ ಎನ್ನಿರೋ ಅಣ್ಣಾ ಬಲಿಂದ್ರ ರಾಯಗೆ..
ಅಣ್ಣಾ ಬಲಿಂದ್ರ ರಾಯರು ಮುಹೂರ್ಥಕ್ಕೆ ದೊಡ್ಡೋರು….
ಅಣ್ಣಾ ಬಲಿಂದ್ರ ರಾಯಗೆ ಏನು ಎಲ್ಲಾ ಪೂಜೆಯೊ….
ಏನು ಎಲ್ಲಾ ಪೂಜೆಯೊ ಹಾಲು ಹಣ್ಣಿನ ಪೂಜೆಯೊ…..
ಹಾಲು ಹಣ್ಣಿನ ಪೂಜೆಯೊ ರಸಬಾಳೆ ಹಣ್ಣವೋ…..
ರಸಬಾಳೆ ಹಣ್ಣವೋ ರತ್ನ ಕೌಲಿ ಹಲವೋ…
ವರ್ಷಾ ವರ್ಷಾಕ್ಕೆ ಬರುವುದೊಂದು ಹರ್ಸು ದೀಪೋಳಿಗೆ….
ಕಾಲ ಕಾಲಕ್ಕೆ ಬರುವಾದೊಂದ್ ಕಿರು ದೀಪೋಳಿಗೆ…
ದೀಪೋಳಿಗೆ ಎನ್ನಿರೋ ಕೊಟ್ಟಗೆಲಿರೋ ಹುಸುಗಳಿಗೆ…………….
ಕೊಟ್ಟಗೆಲಿರೋ ಹಸುಗಳಿಗೆ ತೊಟ್ಟಲಾಲಿರೋ ಶಿಶುಗಳಿಗೆ…….
Antige Pantige Documentary
ತುಳಸಿ ಹಾಡು :
ಅಂಗಳ ಸರಸೆವು ರಂಗೋಲಿ ಬಿಡಸೇವು ತಾಯಿ ತುಳಸಾವನ…..
ಕಟ್ಟೆ ಕಟ್ಟಿಸೆವು ಬಟ್ಟರ ಕರೆಸೆವು ಈ ಕಟ್ಟೆಗೂ ಪೂಜೆ……
ಜೋಯ್ಸರ ಕರಾಸೆವು ಜಪಗಳ ನಡೆಸವು ದೇವಾಂಗಳ ಪೂಜೆ……
ದೀಪನ್ನ ಹಚ್ಚೇವು ದುಪಗಳ ತೊರೆವು ತಾಯಿ ತುಳಸಾವನ್ನ…….
ಹನ್ನೆರಡಿಟ್ಟೇವು ಕಾಯಿ ಎರಡ ಒಡೆಸೆವು ತಾಯಿ ತುಳಸಾವನ್ನ……
ತಾಯಿ ತುಳಸಾವನ್ನ ಶಿವಪೂಜೆ ಸಲ್ಲಿಸೆವು ಸಥ್ಯದಿಂದ ಉರಿಯೆ………….
ಆ ಕೈಲಿ ಆರತಿ ಮಾ ಕೈಲಿ ಶಿವಗಂಟೆ ಮಾಚೋಳು ತುಳಸಾಮ್ಮನ…….
ಮಾಚೋಳು ತುಳಸಾಮ್ಮನ ಶಿವಪೂಜೆ ಸಲ್ಲಿಸೆವು ಸಥ್ಯದಿಂದ…………
ಬಾಗಿಲು ತೆಗಿಯೋ ಹಾಡು:
ಬಡಗಲ ಬಂಕಪುರ ದೊಡ್ಡವಾರಳುವ ರಾಜ್ಯ ದೊಡ್ಡದೊರೆ ರಾಯ್ರ…….
ದೊಡ್ಡದೊರೆರಾಯ್ರ ಅರಮನೆ ಬಾಗಿಲ ಮುಂದೆ ಅಗಸೆ ದಾಟುವುದೇ……..
ಅಗಸೆ ಕೀಲೊಂದು ಅತಿಕೆಲು ಪತಿಕೇಲು ಗುಬ್ಬಿ ಜಂತುಕದ………………
ಗುಬ್ಬಿಜಂತೂಕದ ಮರೀಗೆಲು ಮಳಿಗೆಯೊಳಗೆ ಪಂಚಾಪಂಡವರಳಿಯ…….
ಪಂಚಾಪಂಡವರಳಿಯ ಪಾರುದನಿ ಕುನುತಿದ್ದು ಆಳ ಬಿಟ್ಟು ತಾಳ…………..
ಹೆಬ್ಬಾಗಿಲು ತೆಗಿಸ್ರಯ್ಯೋ ದೋಬ್ಬಲ್ಲೋರು ನಮ್ಮೂಯ್ಯೋ ಸುಬ್ಬೀಲಿ ಹೊನ್ನೇ……..
ಸುಬ್ಬೀಲಿ ಹೊನ್ನೇ ಬೆಳೆಯಲು ಬಂದೈದವೇ ಗಾಡ ನಂದಗುಸೆ…………….
ಹೊಸಲು ಹೊಸಲು ಚೆಂದ ಹೊಸಲಿನ ಗಿರಿ ಚೆಂದ ಹೊಸಲು ಹೊಡಿದವರು…….
ಹೊಸಲು ಹೂಡಿದವರು ಯಾರಯ್ಯ ಈ ಮನೆಗೆ ಮಳೂರ್ ಆಚಾರಿ…….
ಮಳೂರ್ ಆಚಾರಿ ಮಗ ಬಂದು ಮಾಡಿದ ಕೆಲಸ ಕಿತ್ತಳೆ ಹಣ್ಣೇ ಸುಲಿದಂಗೆ……..
ಬಾಗಿಲು ಬಾಗಿಲು ಚೆಂದ ಬಾಗಿಲ ಗೆರೆ ಚೆಂದ ಬಾಗಲುಡಿದವರು……
ಬಾಗಲುಡಿದವರು ಯಾರಯ್ಯ ಈ ಮನೆಯ ಮುತ್ತೂರ್ ಆಚಾರಿ…….
ಮುತ್ತೂರ್ ಆಚಾರಿ ಮಗ ಬಂದು ಮಾಡಿದ ಕೆಲಸ ಕಿತ್ತಳೆ ಹಣ್ಣೇ ಸುಲಿದಂಗೆ……….
ಜ್ಯೋತಿ ತಗೋಳ್ಳೋ ಹಾಡು :
ತಣ್ಣನೆ ಹೊತ್ತಿನಲ್ಲೇ ಪುಣೋಲ್ಲರ ಕಾಲದಲ್ಲಿ ಜ್ಯೋತಾಮ್ಮತಮ್ಮನೆಗೆ………..
ಜ್ಯೋತಾಮ್ಮತಮ್ಮನೆಗೆ ಅಂದಾದಲ್ಲಿ ಬರುತ್ತಾಳೆ ಚೆಂದದಿಂದೊಳಗೆ ಕರಕೊಳ್ಳಿ……………..
ಈಡಗಂಟು ಇಡಕೊಂಡು ನಡುದೀಪ ತಕ್ಕೊಂಡು ರನ್ನದ ಬಾಗಿಲಿಗೆ……
ರನ್ನದ ಬಾಗಿಲಿಗೆ ಎದುರಗಿ ನಮ್ಮಮ್ಮೋ ಜ್ಯೋತಾಮ್ಮನೊಳಗೆ ಕರಕೊಳ್ಳಿ……
ಜ್ಯೋತಾಮ್ಮನೊಳಗೆ ಕರಕೊಳ್ಳಿ ನಮ್ಮಮ್ಮೋ ಜ್ಯೋತಿಗೂ ನೋಡ್ ಎಣ್ಣೆ………
ಜ್ಯೋತಿಗೂ ನೋಡೇಣ್ಣೆ ಏರೆಬನ್ನಿ ನಮ್ಮಮ್ಮೋ ಜ್ಯೋತಿಗೂ ಕಾಣಿಕೆ ಕೊಡಬೇಕು……..
ಏನೆಗಲಯೆರೆದರೆ ಪುಣೆಗೊಲು ತಮಗಾದು ಮುಂದಿನ ದೇವರಿಗೆ………..
ಮುಂದಿನ ದೇವರಿಗೆ ಲಾರುಕದ ಕಾರಣದಿಂದ ಆನಂದರ ಕಾಲೇ………….
ಗಣಪತಿ ಹಾಡು :
ಘಟ್ಟದಕೇಳಗೊಂದು ಹುಟ್ಟಿತು ಬೇವಿನ ಮರವು ಲಮಾರಾದಡಿಯ………
ಲಮಾರಾದಡಿಯ ಬೆನವಯ್ಯರು ಕುನುತಿದ್ದು ಕಾಯೋಳರ ಕಥೆಯ………..
ಕಥೆಯ ಕಲಿಯುದಕ್ಕೆ ನಾವುಗಳು ಮಕ್ಕಳು ನಮ್ಮಾ ಮೈದಾನ…..
ಸರಸ್ವತಿ ಸರನೆಂದು ಗಣಪತಿಗೆ ಕೈಯ ಮುಗಿದು ನೆಡಪುನಡರಿಗೆ…………
ನೆಡಪುನಡರಿಗೆ ಧ್ವನಿಕೊಡವು ಈ ಪದವು ಕಲಿತೆನೆನ್ನರಿಗೆ……..
ನೆನೆಯಕ್ಕೆ ನೆಲಗಡಲೆ ಕೊನೆಯಬಾಳೆಯೇಹಣ್ಣು ಎಳ್ಳು ಎಳ್ಳುಉಂಡೆ ಹಣಿ ಹಾಲು……
ಎಳ್ಳು ಎಳ್ಳುಉಂಡೆ ಹಣಿ ಹಾಲು ತಯೋಮ್ಮಾ ಉಂಡೇಂನೆಂಬೋರಿಗೆ ಸೋಲೋದಿಕ್ಕೆ…….
ಉಂಡೆಯೋಬ್ಬರಿಗೆ ಸೋಲೋದಿಕ್ಕೆ ತಾಯಮ್ಮ ತಿಂದೆನೆಬರಿಗೆ……
ರತಿಭಾಮೆ :
ಸರಸತಿ ಶರಣರ ಮಗಳೇ ಕಾರತಾಳೆಕಂಕಣ ಬಾಹು ಲೋರಕಲರೆಕೆಲೇ……
ಲೋರಕಲರೆಕೆಲೇ ಜಪಸರಸರಣರ ಮಗಳೇ ಕಳಸೆಕಲ್ಹಣೆದ…….
ಕಳಸೆಕಲ್ಹಣೆದ ಲೋಚಣಕ್ಕೂ ನಾರಣ ಬಾಹು ಕಳ್ಯಾದುಮೇಲುಕಳ್ಯಾ…
ಕಳ್ಯಾದುಮೇಲುಕಳ್ಯಾ ಏನೆಂದು ನುಡಿದವು ಸತೀವಂತರುಂಟೆ……
ಕೆರೆಯ ಸೋಸುವಾರುಂಟೆ ತರುಣನಳೆಯುವರುಂಟೆ ಸತೀವಂತರುಂಟೆ…….
ಯಾವದೊಂದು ಸೋಲನೇಳಿ ಯಾವದೊಂದು ಗೆಲುವನೇಳಿ ನೀವೇಳಿದ ಗೆಲುವೇ……
ನಾವೇಳಿದ ಗೆಲುವೇ ಗೆಲುತೀವಿ ಎಂದರೆ ಹುಲಿಕಟ್ಟಿ ಹಾಲ ಕರೆದೆವು……..
ಸಿಡಿಮುಡಿ ಗೊಂಡಾಳೋ ಮುಡಿಯ ನಲ್ಯಾಳೋ ಕಡೆಗಣ್ಣಲಿ ನಿರಾ ಸುರುಸ್ಯಳೋ……..
ಕಡೆಗಣ್ಣಲಿ ನಿರಾ ಸುರುಸ್ಯಳೇ ರತಿಭಾಮಾ ಉಪ್ಪರಿಗೆಯೊಳಗೆ ನಡಿದಳೋ…….
ಉಪ್ಪರಿಗೆಯೊಳಗೆ ನಡೆದಾಳೋ ರತಿಭಾಮಾ ಚಿನ್ನದರ ತಂಬಿಗೆ ತಕ್ಕೊಂಡು…….
ಚಿನ್ನದರ ತಂಬಿಗೆ ಬಲಗೈಲಿ ತಕ್ಕೊಂಡು ಹುಲಿಯೇರಿದರೋನಕೆ……..
ಹುಲಿಯೇರಿದರೋನಕೆ ನಡೆದಾಳೋ ರತಿಭಾಮಾ ಹುಲಿಕಟ್ಟೆ ಹಾಲ ಕರೆದಾಳೋ……..
ಇದು ಒಂದು ಸೋಲನಲ್ಲೋ ಇದು ಒಂದು ಗೆಲುವನಲ್ಲೋ ನಾವ್ ಹೇಳಿದ ಗೆಲುವೇ……..
ಯಾವದೊಂದು ಸೋಲನೇಳಿ ಯಾವದೊಂದು ಗೆಲುವನೇಳಿ ನೀವ್ ಹೇಳಿದ ಗೆಲುವೇ…….
ನಾವ್ ಹೇಳಿದ ಗೆಲುವೇ ಗೆಲುತೀವಿ ಎಂದರೆ ಕಲ್ಲು ಒಡೆದು ನಾರ ಸಿಗುದಳೋ……….
ಸಿಡಿಮುಡಿಗೊಂಡಲೋ ಮುಡಿಯ ನಲ್ಯಾಳೋ ಕಡೆಗಣ್ಣಲಿ ನಿರಾ ಸುರಿಸಾಳೋ………
ಕಡೆಗಣ್ಣಲಿ ನಿರಾ ಸುರುಸಾಲಳೋ ರತಿಭಾಮೋ ಉಪ್ಪುರಿಗೆಯೊಳಗೆ ನಡೆದಾಳೋ……..
ಉಪ್ಪುರಿಗೆಯೊಳಗೆ ನಡೆದಾಳೋ ರತಿಭಾಮಾ ಉಕ್ಕಿನರ ಸುತ್ತಗೆ ತಕ್ಕೊಂಡು……..
ಉಕ್ಕಿನರ ಸುತಗೆ ಬಲಗೈಲಿ ತಕ್ಕೊಂಡು ಕಲ್ಲೇರಳಿರೋನಕೆ ನಡೆದಾಳೋ…….
ಕಲ್ಲೇರಳಿರೋನಕೆ ನಡೆದಾಳೋ ರತಿಭಾಮಾ ಕಲ್ಲೋಡೆದು ನಾರ ಸಿಗದಳೋ………
ಇದು ಒಂದು ಸೋಲನಲ್ಲೋ ಇದು ಒಂದು ಗೆಲುವನಲ್ಲೇ ನಾವ್ ಹೇಳಿದ ಗೆಲುವೇ……….
ನಾವ್ ಹೇಳಿದ ಗೆಲುವೇ ಗೆಲುತೀವಿ ಎಂದರೆ ಸಣೇಯೊಳಗೆ ಸಾಸ್ವೆ ಮಾಗೀಬೇಕು………
ಸಿಡಿಮುಡಿಗೊಂಡಳೋ ಮುಡಿಯ ನಲ್ಯಾಳೋ ಕಡೆಗಣ್ಣಲಿ ನಿರಾ ಸುರುಸ್ಯಲೋ…….
ಕಡೆಗಣ್ಣಲಿ ನಿರಾ ಸುರುಸ್ಯಳೋ ರತಿಭಾಮಾ ಉಪ್ಪರಿಗೆಯೊಳಗೆ ನಡಿದಳೋ……..
ಉಪ್ಪರಿಗೆಯೊಳಗೆ ನಡೆದಾಳೋ ರತಿಭಾಮೆ ಉಕ್ಕಿನರ ಸಂಣ್ಣೆ……
ಉಕ್ಕಿನರ ಸಂಣ್ಣೆ ಬಲಗೈಲಿ ತಕ್ಕೊಂಡು ಸಾಸ್ವೆಲಿರೋನಾಕ್ಕೆ ನಡೆದಾಳೋ……
ಸಾಸ್ವೆಲಿರೋನಾಕ್ಕೆ ನಡೆದಾಳೋ ರತಿಭಾಮೆ ಸಂಣ್ಣೆಯೊಳಗೆ ಸಾಸ್ವೆ……….
ಇದು ಒಂದು ಸೋಲನಲ್ಲೋ ಇದು ಒಂದು ಗೆಲುವನಲ್ಲೋ ನಾವ್ ಹೇಳಿದ ಗೆಲುವೇ ಗೆಲಬೇಕು……..
ನಾವ್ ಹೇಳಿದ ಗೆಲುವೇ ಗೆಲುತಿವೆ ಎಂದರೆ ಬಿದ್ದಾ ಹೆದ್ದಾರಿಲಿ ಅಳಿಬೇಕು……
ಸಿಡಿಮುಡಿಗೊಂಡಳೋ ಮುಡಿಯ ನಲ್ಯಾಳೋ ಕಡೆಗಣ್ಣಲಿ ನಿರಾ ಸುರುಸ್ಯಲೋ……..
ಕಡೆಗಣ್ಣಲಿ ನಿರಾ ಸುರುಸ್ಯಲೋ ರತಿಭಮೋ ಉಪ್ಪರಿಗೆಯೊಳಗೆ ನಡೆದಳು……
ಅತ್ತಾರ ಕೋಲಾಳೆದು ಇತ್ತ ಮೂರು ಕೋಲಾಳೆದು ಒಟ್ಟು ಓಂಬ್ಬತ್ರ ಕೋಲಾ ಅಳೆದಳು……
ಬಸವಯ್ಯನ ಹಾಡು :
ಭೂಮಿ ಹುಟ್ಟಕು ಮುಂಚೆ ಬೋಲೋಕ್ ಬೆಳೆಯಕು ಮೊದಲೇ ಬಸವಯ್ಯ ಹುಟ್ಟಿದ್ದು ಸೋಮವಾರ…….
ಬಸವಯ್ಯಾ ಹುಟ್ಟಾಗ ಬಿಸಿಲಿಲ್ಲ ಮಳೆ ಇಲ್ಲಾ ಬಸವಯ್ಯಾರ ತಂಗಿ ಕುಸುಮಲ್……..
ಬಸವಯ್ಯರಾ ತಂಗಿ ಕುಸುಮಲುಟ್ಟಿದ ಮೇಲೆ ಬಿಸಿಲು ಮಳೆ ಎರಡು ಹಸನದು……
ಬಿಸಿಲು ಮಳೆ ಎರಡು ಹಸನಾದರೂ ಬಸವಯ್ಯ ಹಾಸತೆ ಕಟ್ಟಯ್ಯ…….
ಅಡ್ಡಗುಡ್ಡದ ಮೇಲೆ ಒಡ್ಡಯವೇ ಮಳೆ ಮರು ದೊಡ್ಡವರ ಮಗನೇ……….
ದೊಡ್ಡವರ ಮಗನೇ ಬಸವಯ್ಯ ಬರುವಾಗ ಒಡ್ಡಿದ ಮಳೆ ಮಾರೆ…………
ವೈಶಾಖಾ ಮಳೆ ಹೊಯ್ದು ಓಣಿಎಲ್ಲಾ ಕೆಸರದು ಹಾಸೆ ಹೊಜ್ಜುರುದ…………….
ಹಾಸೆ ಹೊಜ್ಜುರದ ಹಾಲಾಗೆಯ ನಸಯ್ಯ ಬೇಸಯ್ಯ ಬೆಳ್ಳಿ…………………
ಹನಿಗಳ ಹರಿದರೆ ತರಗಳು ತತ್ತರಿಸಿದವೇ ಸಾಲು ಸರ ಗಂಟೆ…………
ಸಾಲು ಸರ ಗಂಟೆ ಯಾವಲ್ಲಿಗೆ ನೂಡುದವು ಶಿವನಲ್ಲಿಗೂ ದೂರ………..
ಶಿವನಲ್ಲಿಗೂ ದೂರ ಏನೆಂದು ನೂಡುದವು ನಮ್ಮಗೆ ಮೆಯ್ಯುದಕ್ಕೆ ಹೊಲವಿಲ್ಲ……..
ಹತ್ತಿ ಮೇಯದ ಗುತ್ತಿ ಹತ್ತಿ ಮೇಯದ ಗೋವು ಹತ್ತಿ ಮೆಯಯ್ಯ್………………..
ಹತ್ತಿ ಮೆಯಯ್ಯ್ದುದುರುಗದ ಕೋಟೆಯ ಮೇಲೆ ಕೊನೆಯ ಹುಲ ಮೆಂದು…..
ಕೊನೆ ಕೊನೆ ಹುಲನ್ನು ಮೆಂದ್ದು ಹಣಿ ಹಣಿ ನೀರನ್ನು ಕುಡಿದ್ದು ನಿದ್ದರೆ ಬಂದಲ್ಲಿ ಪವಡಿಸೋ……
ನಿದ್ದರೆ ಬಂದಲ್ಲಿ ಪಾವಡಿಸೋ ಬಸವಯ್ಯ ನೀನೇದ್ದು ರಾಜ್ಯ ಗೆಲಬೇಕು……
ಜ್ಯೋತಿ ಬಿಡೋ ಹಾಡು:
ಸತ್ಯಳೋ ಸ್ವಾಮಿಯ ಶರಣು ಮಾಡಲು ಬಂದು ಶರಣ್ಣೆಂದರ ಕೈಯ ಮುಗುದೆವು……
ಎಣ್ಣೆಲಿ ಹುಟ್ಟುವವಳೇ ಎಣ್ಣೆಲ್ಲೇ ಬೆಳೆವವಳೇ ಎಣ್ಣೆಲ್ಲೇ ಕಣ್ಣಾ ಬಿಡುವವವಳೇ…….
ಬತ್ತಿಲಿ ಹುಟ್ಟುವವಳೇ ಬತ್ತಿಲೆ ಬೆಳೆವವಳೇ ಬತ್ತಿಲೇ ಕಣ್ಣಾ ಬಿಡುವವಳೇ……
ಬತ್ತಿಲೇ ಕಣ್ಣಾ ಬಿಡುವವಳೇ ಜಗಜ್ಯೋತಿ ಇಂದ್ ಹೋಗಿ ಮುಂದೇ ಬರಬೇಕು…….
ಹಲಸಿನ ಮರದಡಿಯ ನಿಲ್ಲದ ದೇವರ ಕೊಣೇ ನಿಲ್ಲದೆ ಹೋಗೆ…………..
ನಿಲ್ಲದೆ ಹೋಗೆ ಜಗಜ್ಯೋತಿ ತಾಯಮ್ಮ ಇಂದ್ ಹೋಗಿ ಮುಂದೇ ಬರಬೇಕು……
ಮಲ್ಲಿಗೆ ಮರದಡಿಯ ತಿರುಮೂರು ದೇವರ ಕೊಣೇ ನಿಲ್ಲಾದೆ ಹೋಗೆ…………
ನಿಲ್ಲದೆ ಹೋಗೆ ಜಗಜ್ಯೋತಿ ತಾಯಮ್ಮೋ ಇಂದು ಹೋಗಿ ಮುಂದೇ ಬರಬೇಕು……..
ಸಂಪಿಗೆ ಮರದಡಿಯ ನಿಲ್ಲದ ದೇವರ ಕೋಣೆ ನಿಲ್ಲದೇ ಹೋಗೆ…………
ನಿಲ್ಲಾದೆ ಹೋಗೆ ಜಗಜ್ಯೋತಿ ತಾಯಮ್ಮೋ ಇಂದ್ ಹೋಗಿ ಮುಂದೆ ಬರಬೇಕು……….