Categories
Info

ಆಲೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವದ ಸಂಭ್ರಮ.!

  • ಆಲೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವದ ಸಂಭ್ರಮ.!
  • ಸರಿಸುಮಾರು 100 ವರ್ಷಗಳನ್ನು ಪೂರೈಸಿದ ಹೆಗ್ಗಳಿಕೆ

ಕೊಪ್ಪ ತಾಲ್ಲೂಕು, ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಕಲ್‌ Gadikal ನಲ್ಲಿರುವ ಆಲೆಮನೆ Alemane School ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪ Koppa ತಾಲ್ಲೂಕಿನ ಅತ್ಯಂತ ಪ್ರತಿಷ್ಠಿತ ಶಾಲೆಯಾಗಿ ಗುರುತಿಸಲ್ಪಟ್ಟಿದೆ. ಈ ಶಾಲೆಯಲ್ಲಿ ವಿದ್ಯೆ ಕಲಿತವರು ರಾಜ್ಯದ ವಿವಿಧೆಡೆ ಮಾತ್ರವಲ್ಲದೆ, ದೇಶ, ವಿದೇಶಗಳಲ್ಲಿ ಅತ್ಯುನ್ನತ ಸ್ಥಾನಮಾನಗಳಿಗೆ ಪಾತ್ರವಾಗಿದ್ದು, ಶಾಲೆಯ ಹಿರಿಮೆಯನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಹಿರೇಕೊಡಿಗೆ, Herekodige ಕುಂಬಾರಕೊಪ್ಪ, Kumbarakoppa ಬೆಕ್ಕನೂರು Bekkanuru ಹಾಗೂ ಗುಣವಂತೆ ಗ್ರಾಮಗಳ ಹಿರಿಯರ ಶೈಕ್ಷಣಿಕ ಪ್ರೇಮಕ್ಕೆ ಸಾಕ್ಷಿಯಾಗಿರುವ ಈ ಶಾಲೆ 1905ರ ಸುಮಾರಿಗೆ ಆರಂಭವಾಯಿತು. ಗ್ರಾಮಸ್ಥರೇ ದೇಣಿಗೆ ನೀಡಿ ನಿರ್ಮಿಸಿದ ಕಟ್ಟಡದಲ್ಲಿ ಆರಂಭವಾದ ಶಾಲೆ ನಂತರ 1915ರಲ್ಲಿ ಮಿಷನ್ ಸ್ಕೂಲ್ ಆಗಿ ಗುರುತಿಸಲ್ಪಟ್ಟಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಶಾಲೆ ಸೂರ್ಯದೇವಸ್ಥಾನ, Surya Devastana ಮೊದಲಕೊಪ್ಪ, ಸ್ಕೂಲ್‌ ಮಕ್ಕಿಗಳಿಗೆ ಸ್ಥಳಾಂತರಗೊಂಡಿದ್ದು ಇತಿಹಾಸ.

1915ರಲ್ಲಿ ಅಧಿಕೃತವಾಗಿ ಸರ್ಕಾರಿ ಶಾಲೆಯೆಂದು ಘೋಷಿಸಲ್ಪಟ್ಟ ಈ ಶಾಲೆ ಸರಿಸುಮಾರು 100 ವರ್ಷಗಳನ್ನು ಪೂರೈಸಿದ್ದರೂ, ಶಾಲೆ ಆರಂಭದ ನಿಖರ ಮಾಹಿತಿಗಳು ಲಭ್ಯವಾಗಿರದ ಕಾರಣ ಶತಮಾನೋತ್ಸವ ಆಚರಿಸುವ ಸಂದರ್ಭ ಒದಗಿರಲಿಲ್ಲ. ಆದರೆ ಇತ್ತೀಚೆಗೆ ಪ್ರಕಟಗೊಂಡ ಮಾನ್ಯಶ್ರೀ ಅಲಿಗೆ ಎ.ಆರ್. ಗುರುರವರ ‘ಹೊರಬೈಲು ಮನೆತನದ ಆಯ್ದ ದಾಖಲೆಗಳು’ ಪುಸ್ತಕದಲ್ಲಿ ಶಾಲೆ ಆರಂಭದ ನಿಖರ ಮಾಹಿತಿಗಳು ಲಭ್ಯವಾಗಿದ್ದರಿಂದ ಸ್ಥಳೀಯ ಗ್ರಾಮಸ್ಥರು, ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಈಗಲಾದರೂ ಶಾಲೆಯ ಶತಮಾನೋತ್ಸವ ಆಚರಿಸಬೇಕೆಂಬ ಸಂಕಲ್ಪದೊಂದಿಗೆ ಫೆಬ್ರವರಿ 10 ರಂದು ಅರ್ಥಪೂರ್ಣವಾಗಿ ಶಾಲಾ ಶತಮಾನೋತ್ಸವವನ್ನು ಆಚರಿಸುವ ತೀರ್ಮಾನ ಮಾಡಿರುತ್ತಾರೆ.

ಕಳೆದೊಂದು ಶತಮಾನಗಳ ಕಾಲ ಹಿರೇಕೊಡಿಗೆಯಂತಹ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ಕ್ರಾಂತಿಯನ್ನುಂಟುಮಾಡಿ ಸಹಸ್ರಾರು ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿದ ಈ ಜ್ಞಾನದೇಗುಲದ ಶತಮಾನೋತ್ಸವವನ್ನು ಚರಿತ್ರೆಯಲ್ಲಿ ದಾಖಲಾಗುವಂತೆ ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಆ ಸವಿನೆನಪಿನಲ್ಲಿ ಶಾಲೆಯನ್ನು ಸರ್ವತೋಮುಖ ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿರುವ ಮಹನೀಯರಾದ ನೀವು / ನಿಮ್ಮ ತಂದೆ / ನಿಮ್ಮ ತಾಯಿ ಇವರು ಈ ಶಾಲೆಯ ಹಳೇ ವಿದ್ಯಾರ್ಥಿಗಳಾಗಿದ್ದು, ತಾವುಗಳು ತನು-ಮನ-ಧನ ರೂಪದಲ್ಲಿ ಉದಾರ ಸಹಕಾರ ನೀಡಿ, ಈ ಶತಮಾನೋತ್ಸವ ಸಮಾರಂಭವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಪ್ರಾರ್ಥಿಸುತ್ತೇವೆ.

ಶತಮಾನೋತ್ಸವ ಆಚರಣಾ ಸಮಿತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಲೆಮನೆ
ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ

ಶ್ರೀ ಎ.ಓ. ಸುರೇಶ್
ಅಧ್ಯಕ್ಷರು, 9448750750

ಶ್ರೀ ಎಸ್.ಎನ್‌. ರಾಮಸ್ವಾಮಿ, ಶೆಟ್ಟಿಗದ್ದೆ
ಕಾರ್ಯಾಧ್ಯಕ್ಷರು, ಮೊ. 9448666124

ಶ್ರೀ ಹೆಚ್.ಎಸ್. ರಮೇಶ್, ಹೊಸಮನೆ
ಕಾರ್ಯದರ್ಶಿ, 9449620233

ಶ್ರೀ ಹೆಚ್.ಎಂ. ರವಿಕಾಂತ್ ,
ಸಂಚಾಲಕರು, 9480117664

ಶ್ರೀ ಶಂಕರನಾರಾಯಣ ಉಡುಪ, ಕೊಕ್ಕೋಡ
ಖಜಾಂಚಿ, 9482421366

ಶಾಲೆಯ ಬ್ಯಾಂಕ್ ಖಾತೆ ವಿವರ :

ಖಾತೆಯ ಹೆಸರು : ಶತಮಾನೋತ್ಸವ ಆಚರಣಾ ಸಮಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಲೆಮನ

ಅಕೌಂಟ್ ನಂಬರ್ : 120004284875
ಬ್ಯಾಂಕ್ ಹೆಸರು : ಡಿಸಿಸಿ ಬ್ಯಾಂಕ್ ಶಾಖೆ, ಕೊಪ್ಪ
IFSC : KSCB0012001

Advertisement
Advertisement Advertisement