Categories
Kuvempu Quotes

Kuvempu quotes about Karnataka – ಕುವೆಂಪು ನಾಡು ನುಡಿ ಸಾಹಿತ್ಯದ ನುಡಿಗಳು

ಕನ್ನಡಕೆ ಹೋರಾಡು, ಕನ್ನಡದ ಕಂದ
ಕನ್ನಡವ ಕಾಪಾಡು, ನನ್ನ ಆನಂದಾ
ಜೋಗುಳದ ಹರಕೆಯಿದು ಮರೆಯದಿರು, ಚಿನ್ನ
ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ
– ಕುವೆಂಪು

ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ’
– ಕುವೆಂಪು

ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದಾ
– ಕುವೆಂಪು

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
– ಕುವೆಂಪು

ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.
ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ.
– ಕುವೆಂಪು

ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ
– ಕುವೆಂಪು

ನೀ ಮೆಟ್ಟುವ ನೆಲ
ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
– ಕುವೆಂಪು

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
– ಕುವೆಂಪು

ಪ್ರಾದೇಶಿಕ ಭಾಷೆಗೆ ಅಗ್ರಸ್ಥಾನ ಕೊಡಬೇಕು, ಅದೇ ಶಿಕ್ಷಣ ಮಾಧ್ಯಮವಾಗಬೇಕು, ಅದೇ ರಾಜ್ಯಭಾಷೆಯಾಗಬೇಕು.
– ಕುವೆಂಪು