Categories
Kuvempu Quotes

Kuvempu quotes about life – ಕುವೆಂಪು ಜೀವನದ ನುಡಿಮುತ್ತುಗಳು

ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ.
– ಕುವೆಂಪು

ಹಕ್ಕಿಗಳ ಸಂಗದಲ್ಲಿ ರೆಕ್ಕೆ ಮೂಡುವುದೆನಗೆ
ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ
– ಕುವೆಂಪು

ಮನುಜ ಮತ, ವಿಶ್ವ ಪಥ, ವಿಜ್ಞಾನ ದೃಷ್ಟಿ, ವಿಚಾರ ಬುದ್ದಿ – ಇವು ನಮ್ಮ ಹೃದಯದ ನಿತ್ಯಮಂತ್ರಗಳಾಗಬೇಕು.
– ಕುವೆಂಪು

ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.
– ಕುವೆಂಪು

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ (The answer is silent for a meaningless question)
– ಕುವೆಂಪು

ಓ ನನ್ನ ಚೇತನ, ಆಗು ನೀ ಅನಿಕೇತನ
– ಕುವೆಂಪು

ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ, ಚಿನ್ನದ ಚೆಲುವು ಹೆಣದಂತೆ
– ಕುವೆಂಪು

ಜಡವೆಂಬುದೆ ಇಲ್ಲ ಚೇತನವೇ ಎಲ್ಲ
– ಕುವೆಂಪು

ಆದರ್ಶಗಳು ನಾವು ದಿನಾ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು
– ಕುವೆಂಪು

ಮನುಷ್ಯ ವಾಸ್ತವವಾಗಿಯೂ ಈ ಪ್ರಪಂಚದಲ್ಲಿ ಒಬ್ಬ ಪ್ರವಾಸಿ. ಅವನ ಜೀವನ ಸಮಸ್ತವೂ ಒಂದು ಪ್ರವಾಸ.
– ಕುವೆಂಪು

ನಮ್ಮ ನಾಗರಿಕತೆ ಬೆಳೆದಂತೆ ನಮ್ಮ ಆಧ್ಯಾತ್ಮಿಕತೆ ಅಥವಾ ಆತ್ಮಶ್ರೀಯೂ ಬೆಳೆಯಬೇಕು.
– ಕುವೆಂಪು

ಮುಗುಳ್ನಗೆಗೆ ಮುಪ್ಪಿಲ್ಲ.
– ಕುವೆಂಪು

ಜೀವನದ ಸಂಪತ್ತು ಅದರ ಅನುಭವಗಳಲ್ಲಿದೆ. ನೆನಪು ಆ ಅನುಭವಗಳ ನಿಧಿ.
– ಕುವೆಂಪು 

ಪ್ರಕೃತಿಯ ಕಲೆಗಿಂ ಮಿಗಿಲೆ ನರಕೃತಿಯ ಕಲೆ?
– ಕುವೆಂಪು

ಪ್ರೇಮವೆ ಶಿವ; ಶಿವನೇ ಪ್ರೇಮ;
ಪ್ರೀತಿಸುವುದೆ ಪ್ರಾಣದ ನೇಮ
– ಕುವೆಂಪು 

ಮುಚ್ಚು ಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ.
– ಕುವೆಂಪು

ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು
– ಕುವೆಂಪು

ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು
– ಕುವೆಂಪು

ಅಲ್ಪ ನಾನು ಎಂದು ಕುಗ್ಗಿ ಮುದುಗ ಬೇಡವೋ: ಓ ಅಲ್ಪವೆ, ಅನಂತದಿಂದ ಗುಣಿಸಿಕೊ; ನೀನ್ ಅನಂತವಾಗುವೆ!
– ಕುವೆಂಪು

ಉತ್ತಮವಾದದ್ದು ಇದ್ದರೆ ಹೊಗಳಿ; ಇಲ್ಲದಿದ್ದರೆ ತೆಪ್ಪಗಿರಿ.
ಕುವೆಂಪು

ಮನುಷ್ಯ ವಾಸ್ತವವಾಗಿಯೂ ಈ ಪ್ರಪಂಚದಲ್ಲಿ ಒಬ್ಬ ಪ್ರವಾಸಿ. ಅವನ ಜೀವನ ಸಮಸ್ತವೂ ಒಂದು ಪ್ರವಾಸ.
– ಕುವೆಂಪು