ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ
– ಕುವೆಂಪು
ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು
– ಕುವೆಂಪು
ಮಲೆನಾಡೆಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ಪರ್ಣಶಾಲೆ, ಅರಣ್ಯರಮಣಿಯ ವಿಲಾಸಕ್ಷೇತ್ರ.
– ಕುವೆಂಪು
ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ.
– ಕುವೆಂಪು
ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು ಕಟ್ಟುವುದಕ್ಕೆ ನಮಗೆ ದುಡ್ಡು ಇದೆ. ಆದರೆ ಹಳ್ಳಿಗಳಲ್ಲಿ ಬಾವಿ ತೋಡಲು ಹಣವಿಲ್ಲ.
– ಕುವೆಂಪು
ನಾ ನಿನಗೆ ನೀನೆನಗೆ ಜೇನಾಗುವಾ!
ರಸ ದೇವಗಂಗೆಯಲಿ ಮಿನಾಗುವಾ!
ಹೂವಾಗುವಾ ಹಣ್ಣಾಗುವಾ!
ರತಿರೂಪಿ ಭಗವತಿಗೆ ಮುಡಿಪಾಗುವಾ!
– ಕುವೆಂಪು
ಎಷ್ಟು ಧನವಿದ್ದರೇನು? ಎಷ್ಟು ಗದ್ದೆ ತೋಟಗಳಿದ್ದರೇನು? ಆರೋಗ್ಯವಿಲ್ಲದಿದ್ದರೆ ಅವೆಲ್ಲವೂ ನೀರಿನಲ್ಲಿ ಮಾಡಿದ ಹೋಮ ಆದರ್ಶಗಳು ನಾವು ದಿನಾ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು
– ಕುವೆಂಪು
ಮಲೆಗಳಲ್ಲಿ ಮದುಮಗಳು
ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ !ಇಲ್ಲಿ
ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ
ಕೊನೆ ಮುಟ್ಟುವುದು ಇಲ್ಲಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ !ಇಲ್ಲಿ
ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!– ಕುವೆಂಪು
ಹಕ್ಕಿಗಳ ಸಂಗದಲ್ಲಿ ರೆಕ್ಕೆ ಮೂಡುವುದೆನಗೆ
ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ
– ಕುವೆಂಪು
ಯಾರೂ ನೋಡದ ಯಾರಿಗು ಬೇಡದ
ಹೂದೋಟದ ಈ ಮೂಲೆಯಲಿ
ನೋಡಿದೊ ಒಂದೆ ಗುಲಾಬಿಯ ಹೂವಿದೆ
– ಕುವೆಂಪು
ಪ್ರಕೃತಿಯ ಕಲೆಗಿಂ ಮಿಗಿಲೆ ನರಕೃತಿಯ ಕಲೆ?
– ಕುವೆಂಪು
ಒಲಿದೆರಡು ದೃಷ್ಟಿಗಳ ಸಂಗಮವು ತುಂಗೆ ಭದ್ರೆಯರ ಗಂಗೆಯಮುನೆಯರ ಸಂಗಮಕ್ಕಿಂತಲೂ ಪವಿತ್ರವಾದದು, ಗೂಢವಾದುದು, ಮಹತ್ತರವಾದುದು.
– ಕುವೆಂಪು
ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲಕುಳದೊಳಗಡಗಿದೆ ಕರ್ಮ
ನೇಗಿಲ ಮೇಲಿಯೆ ನಿಂತಿದೆ ಧರ್ಮ
– ಕುವೆಂಪು
ರೈತ ಕಾರ್ಮಿಕರು ಮಾಡುವ ಕೆಲಸದಲ್ಲಿ ಯೋಗವಿದೆ. ಮನೆ ಮನೆಯ ತಪಸ್ವಿನಿಯ ಸಕಲ ಕಾರ್ಯಗಳು ಯೋಗವೆನಿಸಿಕೊಳ್ಳುತ್ತದೆ.
– ಕುವೆಂಪು
2 replies on “ಕುವೆಂಪು ನುಡಿಮುತ್ತುಗಳು – Kuvempu quotes”
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
Good