ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
– ಕುವೆಂಪು
ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.
– ಕುವೆಂಪು
ಸೃಷ್ಟಿಯ ವ್ಯೂಹದಲ್ಲಿ ಮರದ ತುದಿಯ ಹೂವೆಷ್ಟು ಮುಖ್ಯವೊ ಗೊಬ್ಬರವೂ ಅಷ್ಟೇ ಮುಖ್ಯ.
– ಕುವೆಂಪು
ಹಸಿದವರಿಗೆ ಬೇಕಾದುದು ಅನ್ನ; ಮತ, ತತ್ವ ಮತ್ತು ಕಲೆಗಳ ಕನಸಿನುಣಿಸಲ್ಲ.
– ಕುವೆಂಪು