ನನ್ನೂರು ಮಲೆನಾಡು
ಮೋಡ ಮುಸುಕಿರಲು ಬಾನಿಗೆ…
ಶುರು ಮಳೆ ಹನಿಯ ದಿಬ್ಬಣ ಭೂಮಿಗೆ,
ಜೀರುಂಡೆಗಳ ಸದ್ದಿನ ನಡುವಲ್ಲಿ…
ನಾಚುತ್ತಿದೆ ಕಾನನ ತಂಗಾಳಿಯಲ್ಲಿ,
ಸಿಡಿಲು ಮಿಂಚುಗಳ ರೌದ್ರ ನರ್ತನ…
ಮಲೆನಾಡಿಗೆ ಮಳೆಯ ಸಿಂಚನ,
ಮಂಡೆಗ್ ಹಾಕಿರೋ ಮಂಡಾಳೆ ಜಾರಲ್ಲ…
ಮಲೆನಾಡಿಗರಿಗೆ ಮಳೆಗಾಲವೆಂದರೆ ಬೇಜಾರಾಗಲ್ಲ,
ಮಳೆಗಾಲದ ನಡುವೆ ಬರುತ್ತೆ ಕಪ್ಪೆ ಮತ್ತು ಹುಳ ಸತ್ತ ದುರ್ಗಂಧ…
ಆದರೂ ನಂಗ್ ನನ್ನ ಮಲ್ನಾಡೆ ಚಂದ,
ಮಲೆನಾಡಿನ ಆಚರಣೆಗಳು ಹೋಗುತ್ತಿದವೇ ಮರೆತು…
ಮರ ಗಿಡನೆಲ್ಲ ಕಡೆದು ಪ್ರಾಣಿ ಪಕ್ಷಿನೆಲ್ಲ ಕೊಂದು ನಾವಾಗಿ ನಾವೇ ತಯಾರು ಮಾಡ್ತಿದ್ದೀವಾ ಮಲೆನಾಡಿಗೆ ಚಿತೆ..!