ಈ ಸಲ ಕಾರ್ತಿಕ ಮಾಸದ ಕೊನೆಯಲ್ಲಿ
ಕೊಟ್ಟೆಮಣೆಗೆ ಕಾಲು ಕೊಟ್ಟು
ಕೊನೆ ತೆಗಿಬೇಕಂದ್ರೆ ಕತ್ತಲೆಗಟ್ಟೋ
ಮಳೆಯ ಕಡೆಗಣಿಸಿ ಔಷಧಿ ಹೊಡೀಬೇಕಲ್ಲಾ…..

ಮಳೆಯ ಚೇಷ್ಟೆಯ ನಡುವೆಯೂ ನಮ್ಮ ಇಸ್ಕೂಲಿನ ಗೇಟನ್ನು ಕಂಡಾಗ ಸವಾರಿ ಹೊರಟ ದಾರಿ ಒಮ್ಮೆಲೆ ಮರೆತಂದಿದೆ ……

ಹಸಿರ ಉಸಿರಲಿ ರಾಮನ ಮಂಟಪ……….
ತುಂಗೆಯ ಶ್ರೇಯಕ್ಕೆ ಬಿಳಿಗೆಂಪು ಕೇಂದ್ರವಿದು……..
ಕಂಡು ಕಣ್ತುಂಬಿಕೊಂಡಾಗ ಸೊಗಸುಗಳ ಹೂರಣವಿದು………
ಹಸಿರ ಚಾದರ ಹೊದ್ದ ಪುಟ್ಟ ಗೂಡಲ್ಲಿ ಕೂತು ಮಳೆನಾಡ ಮಳೆಹನಿಗಳ ಎಣಿಸುತ್ತಿರುವಂತೆ ..

ಹೊಸ ಪದಮುತ್ತುಗಳ ಪೋಣಿಸುವ ಆಶಾಭಾವದಿ ಹನಿಗಳಲ್ಲಿ ಮಿಂದೇಳುತ್ತಿದ್ದಾರಲ್ಲ ನಮ್ಮ ಕನ್ನಡದ ಕವಿಸ್ವರ್ಣ ಮುಕುಟ ..

ಕಲ್ಪನೆಯ ಬೆನ್ನೇರಿ ಸಾಗುವಾಗ ಸೇತುವೆಯ ಸರಳುಗಳು ಹಾಗೇ ಸುಮ್ಮನೆ ಕಣ್ಣಲ್ಲಿ ಮಿಂಚಿ ಹೋದಂತಿವೆ….

ನಿನ್ನೆದೆಯ ಭಾರವ ನೀ ಹೊರುವಂತಿರಬೇಕು
ಕಾಲಡಿಯ ಸಾರ ಬರೀ ಕಾಲಡಿಯಷ್ಟೇ….
-ಸ್ವಾತಿ ರಾಜೇಶ್
ಬೆಳ್ಳಕ್ಕಿ ಹೇಳ್ತಾ ನಿಂತ್ಕಂಡಿದೆ – ನನ್ನೇನು ನೋಡ್ತಿ
ಅತ್ಲಾಗೆ ಮೋಡ ನೋಡಿ ಹೇಳಾ ಮಳೆ ಇತ್ತೇನಾ ಇವತ್ತು……
-ಸ್ವಾತಿ ರಾಜೇಶ್
ಮಳೆ ಹಿಡಿಯೋ ಹೊತ್ತಲ್ಲಿ ಹಾದಿ ಬದಿ ನಿಂತ ಬೆಚ್ಚಪ್ಪನ್ನ ಕಂಡ
ಜಲಕಾಕರಾಯ ನೀ ನನ್ನ ಪೈಕಿನ ಅಂತ ಕೇಳಿದನಂತೆ….
-ಸ್ವಾತಿ ರಾಜೇಶ್

