Categories
Kuvempu

ಮಲೆನಾಡಿಗೆ ಬಾ – ಕುವೆಂಪು

ಮಲೆನಾಡಮ್ಮನ ಮಡಿಲಿನಲಿ ಕರುಗಿಲೊಡಲಿನಲಿ ಮನೆಮಾಡಿರುವೆನು ಸಿಡಿಲಿನಲಿ ಮಿಂಚಿನ ಕಡಲಿನಲಿ! ಬನಗಳ ಬೀಡು ಚೆಲ್ವಿನ ನಾಡು ಮೋಹನ ಭೀಷಣ ಮಲೆನಾಡು! ನೇಸರು ಮೂಡುವ ಪೆಂಪಿಹುದು, ಮುಳುಗುವ ಸೊಂಪಿಹುದು; ತಿಂಗಳ ಬೆಳಕಿನ ಕಾಂತಿಯಿದೆ, ಇರುಳಿನ ಶಾಂತಿಯಿದೆ, ಕೋಗಿಲೆಯಲ್ಲಿ ಲಾವುಗೆಯಲ್ಲಿ ಗಿಳಿಗಳ ನುಣ್ಣರವಿಹುದಿಲ್ಲಿ! ಮೊರೆಯುತ ಹರಿಯುವ ತೊರೆಯಿಹುದು, ತುಂಬಿದ ಕೆರೆಯಹುದು; ಹಾಡುತಲೇರಲು ಬೆಟ್ಟವಿದೆ, ಬಣ್ಣಿಸೆ ಘಟ್ಟವಿದೆ. ಬಿಸಿಲಿದೆ, ತಂಪಿದೆ; ಹೂಗಳ ಕಂಪಿದೆ; ಹಸುರಿನ, ಹಣ್ಣುಗಳಿಂಪಿನೆದೆ! ರನ್ನನು ಪಂಪನು ಬಹರಿಲ್ಲಿ; ಶ್ರೀ ಗುರುವಿಹನಿಲ್ಲಿ ಮಿಲ್ಟನ್, ಷೆಲ್ಲಿ ಬಹರಿಲ್ಲಿ; ಕವಿವರರಿಹರಿಲ್ಲಿ! ಮುದ್ದಿನ ಹಳ್ಳಿ ಈ […]

Categories
Kuvempu

ವಿಶ್ವಮಾನವ ಗೀತೆ – ಓ ನನ್ನ ಚೇತನ

ಓ ನನ್ನ ಚೇತನಆಗು ನೀ ಅನಿಕೇತನ! ರೂಪರೂಪಗಳನು ದಾಟಿನಾಮಕೋಟಿಗಳನು ಮೀಟಿ,ಎದೆಯ ಬಿರಿಯೆ ಭಾವದೀಟಿ,ಓ ನನ್ನ ಚೇತನಆಗು ನೀ ಅನಿಕೇತನ! ನೂರು ಮತದ ಹೊಟ್ಟ ತೂರಿ,ಎಲ್ಲ ತತ್ತ್ವದೆಲ್ಲೆ ಮೀರಿ,ನಿರ್ದಿಗಂತವಾಗಿ ಏರಿ,ಓ ನನ್ನ ಚೇತನಆಗು ನೀ ಅನಿಕೇತನ! ಎಲ್ಲಿಯೂ ನಿಲ್ಲದಿರು;ಮನೆಯನೆಂದೂ ಕಟ್ಟದಿರು;ಕೊನೆಯನೆಂದೂ ಮುಟ್ಟದಿರು;ಓ ಅನಂತವಾಗಿರು!ಓ ನನ್ನ ಚೇತನಆಗು ನೀ ಅನಿಕೇತನ! ಅನಂತ ತಾನ್ ಅನಂತವಾಗಿಆಗುತಿಹನೆ ನಿತ್ಯಯೋಗಿ;ಅನಂತ ನೀ ಅನಂತವಾಗು;ಆಗು, ಆಗು, ಆಗು, ಆಗು,ಓ ನನ್ನ ಚೇತನಆಗು ನೀ ಅನಿಕೇತನ! – ಕುವೆಂಪು Vishwamanava Geethe pdf in Kannada Vishwamanava […]

Categories
Kuvempu

ನಾಡಗೀತೆ – Naada Geethe lyrics – Kuvempu

Naada Geethe song details : Naada Geethe lyrics in kannada ಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ!ಜಯ ಸುಂದರ ನದಿ ವನಗಳ ನಾಡೇ,ಜಯ ಹೇ ರಸಋಷಿಗಳ ಬೀಡೆ! ಭೂದೇವಿಯ ಮಕುಟದ ನವಮಣಿಯೆ,ಗಂಧದ ಚಂದದ ಹೊನ್ನಿನ ಗಣಿಯೆ;ರಾಘವ ಮಧುಸೂಧನರವತರಿಸಿದಭಾರತ ಜನನಿಯ ತನುಜಾತೆ!ಜಯ ಹೇ ಕರ್ನಾಟಕ ಮಾತೆ! ಜನನಿಯ ಜೋಗುಳ ವೇದದ ಘೋಷ,ಜನನಿಗೆ ಜೀವವು ನಿನ್ನಾವೇಶ!ಹಸುರಿನ ಗಿರಿಗಳ ಸಾಲೇ,ನಿನ್ನಯ ಕೊರಳಿನ ಮಾಲೆ!ಕಪಿಲ ಪತಂಜಲ ಗೌತಮ ಜಿನನುತ,ಭಾರತ ಜನನಿಯ ತನುಜಾತೆ!ಜಯ ಹೇ ಕರ್ನಾಟಕ ಮಾತೆ! ಶಂಕರ […]

Categories
Kuvempu

ನೇಗಿಲ ಯೋಗಿ – Negila yogi lyrics – Kuvempu

Negila hidida holadolu haadutha music info : Negila yogi lyrics in Kannada ನೇಗಿಲ ಹಿಡಿದ, ಹೊಲದೊಳು ಹಾಡುತ,ಉಳುವ ಯೋಗಿಯ ನೋಡಲ್ಲಿ.ಫಲವನು ಬಯಸದ ಸೇವೆಯೇ ಪೂಜೆಯು,ಕರ್ಮವೇ ಇಹಪರ ಸಾಧನವು.ಕಷ್ಟದೊಳನ್ನವ ದುಡಿವನೆ ತ್ಯಾಗಿ,ಸೃಷ್ಟಿನಿಯಮದೊಳಗವನೇ ಭೋಗಿ.ಉಳುವಾ ಯೋಗಿಯ ನೋಡಲ್ಲಿ ಲೋಕದೊಳೇನೆ ನಡೆಯುತಲಿರಲಿತನ್ನೀ ಕಾರ್ಯವ ಬಿಡನೆಂದೂರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ,ಹಾರಲಿ ಗದ್ದುಗೆ ಮುಕುಟಗಳು,ಮುತ್ತಿಗೆ ಹಾಕಲಿ ಸೈನಿಕರೆಲ್ಲ,ಬಿತ್ತುಳುವುದನವ ಬಿಡುವುದೇ ಇಲ್ಲ.ಉಳುವಾ ಯೋಗಿಯ ನೋಡಲ್ಲಿ ಬಾಳಿತು ನಮ್ಮೀ ನಾಗರಿಕತೆ ಸಿರಿ ಮಣ್ಣೋಣಿ ನೇಗಿಲಿನಾಶ್ರಯದಿ ನೇಗಿಲ ಹಿಡಿದ ಕೈಯಾದಾರದಿ ದೊರೆಗಳು ದರ್ಪದೊಳಾಳಿದರು ನೇಗಿಲ ಬಲದೊಳು ವೀರರು […]