Categories
Kuvempu

ಮಲೆನಾಡಿಗೆ ಬಾ – ಕುವೆಂಪು

ಮಲೆನಾಡಮ್ಮನ ಮಡಿಲಿನಲಿ ಕರುಗಿಲೊಡಲಿನಲಿ ಮನೆಮಾಡಿರುವೆನು ಸಿಡಿಲಿನಲಿ ಮಿಂಚಿನ ಕಡಲಿನಲಿ! ಬನಗಳ ಬೀಡು ಚೆಲ್ವಿನ ನಾಡು ಮೋಹನ ಭೀಷಣ ಮಲೆನಾಡು! ನೇಸರು ಮೂಡುವ ಪೆಂಪಿಹುದು, ಮುಳುಗುವ ಸೊಂಪಿಹುದು; ತಿಂಗಳ ಬೆಳಕಿನ ಕಾಂತಿಯಿದೆ, ಇರುಳಿನ ಶಾಂತಿಯಿದೆ, ಕೋಗಿಲೆಯಲ್ಲಿ ಲಾವುಗೆಯಲ್ಲಿ ಗಿಳಿಗಳ ನುಣ್ಣರವಿಹುದಿಲ್ಲಿ! ಮೊರೆಯುತ ಹರಿಯುವ ತೊರೆಯಿಹುದು, ತುಂಬಿದ ಕೆರೆಯಹುದು; ಹಾಡುತಲೇರಲು ಬೆಟ್ಟವಿದೆ, ಬಣ್ಣಿಸೆ ಘಟ್ಟವಿದೆ. ಬಿಸಿಲಿದೆ, ತಂಪಿದೆ; ಹೂಗಳ ಕಂಪಿದೆ; ಹಸುರಿನ, ಹಣ್ಣುಗಳಿಂಪಿನೆದೆ! ರನ್ನನು ಪಂಪನು ಬಹರಿಲ್ಲಿ; ಶ್ರೀ ಗುರುವಿಹನಿಲ್ಲಿ ಮಿಲ್ಟನ್, ಷೆಲ್ಲಿ ಬಹರಿಲ್ಲಿ; ಕವಿವರರಿಹರಿಲ್ಲಿ! ಮುದ್ದಿನ ಹಳ್ಳಿ ಈ […]