Categories
Malnad foods

ಹಲಸಿನ ಹಣ್ಣಿನ ಮುಳುಕ ಮಾಡೋದು ಹೇಗೆ ? ( Halasina hannina mulka )

ಜಿಟಿ-ಜಿಟಿ ಮಳೆಯನ್ನೂ ಲೆಕ್ಕಿಸದೆ ಎಮ್ಮೆ-ಕೋಣಗಳು ಓಡಾಡಿದ ಆ ಕೆಸರಿನ ಹಾದಿಯಲ್ಲೇ ಸಾಗಿ ಹಲಸಿನ ಮರವನ್ನೇರಿ ಹಲಸಿನ ಹಣ್ಣಿಗೆ ಲಗ್ಗೆ ಇಡುವುದು ಮಲೆನಾಡಿಗರಿಗೆ ಹೊಸತೇನಲ್ಲ ಬಿಡಿ! ಯಾವ ಯಾವ ಜಾಗದಲ್ಲಿ ಯಾವ ಯಾವ ಜಾತಿಯ “ಹಲಸು” ಇದೆ  ಎಂದು ಬಲ್ಲ ಜ್ಞಾನಿಗಳಿಗೆ ಈ ನಮ್‌ ಮಲೆನಾಡಲ್ಲಿ ಬರವಿಲ್ಲ. ಬೆಳುವ ಹಲಸನ್ನು ನಿರಾಯುಧರಾಗಿ ಬಗೆದು ಗುಳುಂ ಎಂದು ನುಂಗುವುದು ಎಷ್ಟು ಸುಲಭವೋ ಅಷ್ಟೇ ಕಷ್ಟ ಚಂದ್ರಭಕ್ಕೆ ಹಲಸಿನ ಮೇಣದಿಂದ ತಪ್ಪಿಸಿಕೊಳ್ಳೋದು. ಏನೇ ಆದರೂ ಹಲಸಿನ ಹಣ್ಣನ್ನು ಬಗೆದು ತಿಂದುತೇಗುವುದರಲ್ಲಿರೋ ಗಮ್ಮತ್ತು […]