ನನಗಂತೂ ಕಾಡುಪ್ರಾಣಿಗಳ ಹೆದರಿಕೆ ಕೊಂಚವೂ ಇರಲಿಲ್ಲ. ಅಲ್ಲದೆ ಹೆದರುವುದರಿಂದ ಪ್ರಯೋಜನವೂ ಇರಲಿಲ್ಲ.
– ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಳೆಗಾಗಿ ಕಾಡು ಬೇಕೇಬೇಕು ಅನ್ನೋ ಜನ ನಮ್ಮ ಒತ್ತುವರಿ ಮಾತ್ರ ಹಾಗೇ ಇರಲಿ ಎಂದು ಬಯಸುತ್ತಾರೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಯಾರಿಗೆ ತಾವು ಇದ್ದಲ್ಲೇ ಎಲ್ಲವೂ ಕುತೂಹಲಕರವಾಗಿ ಇರುವುದಿಲ್ಲವೋ ಅವರು ಈ ಭೂಮಂಡಲದ ಮೇಲೆ ಎಲ್ಲಿ ಟೂರ್ ಹೋದರೂ, ಇಂಟರೆಸ್ಟಿಂಗ್ ಆಗಿ ಇರೋದಿಕ್ಕೆ ಆಗಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ನನಗೂ ಕಾಡಿಗೂ ಇರುವ ಸಂಬಂಧ ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳ ಜೊತೆ ಇರುವ ಸಂಬಂಧದಂತೆ ವಿವರಿಸಲಸಾಧ್ಯವಾದಷ್ಟು ನಿಗೂಢವಾದದ್ದು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕಾಡು ಮತ್ತು ಕಾಡುಪ್ರಾಣಿಗಳನ್ನು ಮನುಷ್ಯ ಸವಾಲಿನಂತೆ ಎದುರಿಸಬೇಕಾಗಿದ್ದ ಕಾಲ ಈ ತಲೆಮಾರುಗಳ ಪಾಲಿಗೆ ಕೇವಲ ದೆವ್ವ, ಭೂತ, ಪೌರಾಣಿಕ ಕತೆಗಳಂತೆ ಕಾಣುತ್ತವೆ .
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
Also Read: K P Poornachandra Tejaswi quotes about life – ಕೆ ಪಿ ಪೂರ್ಣಚಂದ್ರ ತೇಜಸ್ವಿ ಜೀವನದ ನುಡಿಗಳು
Also Read: K. P. Poornachandra Tejaswi Quotes About Nature
Also Read: K P Poornachandra Tejaswi Images
ಹಕ್ಕಿಗಳು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಾನು ಮನುಷ್ಯರ ಸಾಮಾಜಿಕ ಕಥಾವಸ್ತುವನ್ನು ತೆಗೆದುಕೊಂಡು ಬರೆದರೂ ಅಲ್ಲಿ ಹಕ್ಕಿಗಳು ನುಸುಳಿರುತ್ತವೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಪಂಚದ ಅಗಾಧ ಪಕ್ಷಿ ಸಂಕುಲವನ್ನು ಗಮನಿಸಿದಾಗ ನಾನು ಎಷ್ಟೇ ಹಕ್ಕಿಗಳನ್ನು ನೋಡಿದ್ದರೂ ಅದು ಸಾಸಿವೆ ಕಾಳಿಗೆ ಸಮನಾಗುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕೃತಿ ಮತ್ತು ಪರಿಸರದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರು
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕಾಡಿನ ರಂಗಸ್ಥಳದಲ್ಲಿ ನಡೆಯುವುದೆಲ್ಲಾ ಸುಖಾಂತ್ಯವಾಗುವುದಿಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಹಕ್ಕಿಗಳು ವಾತಾವರಣದ ವೈಪರೀತ್ಯಗಳಿಗೆ ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತವೆಂದರೆ ಪರಿಸರದ ಆರೋಗ್ಯ ಅನಾರೋಗ್ಯಗಳಿಗೆ ಅವು ಅತ್ಯದ್ಭುತ ದಿಕ್ಸೂಚಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನನ್ನ ಸುತ್ತಮುತ್ತ ನಡೆಯುವ ನೂರಾರು ಪರಿಸರದ ವಿದ್ಯಮಾನಗಳನ್ನು ಅದರಲ್ಲಿ ಪಾತ್ರಧಾರಿಯಾಗದೆ ಪ್ರೇಕ್ಷಕನಾಗಿ ದೂರ ನಿಂತು ನೋಡಬೇಕೆಂಬುದೆ ನನ್ನ ಉದ್ದೇಶ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತೂ ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕೃತಿಯನ್ನು ಈ ಪರಿಯಾಗಿ ದುಡಿಸಿಕೊಳ್ಳುತ್ತಿದ್ದೀವಿ, ಎಲ್ಲಿಗೆ ಹೋಗುತ್ತೇವೋ ನಾವು
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಇನ್ನು ಕೆಲವೇ ಕಾಲದಲ್ಲಿ ಚಿರತೆ, ಸಿಂಹ, ಹುಲಿಗಳು ಸಹ ಪ್ರಾಚೀನ ಮಹೋರಗಗಳಂತೆ ಪಳೆಯುಳಿಕೆಗಳಿಂದ ಪತ್ತೆ ಹಚ್ಚ ಬೇಕಾದ ಪ್ರಾಣಿಗಳಾಗಬಹುದು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಒಂದು ಕಾಲದಲ್ಲಿ ಮನುಷ್ಯನಿಗೆ ಎದೆ ನಡುಗಿಸುವ ಸವಾಲುಗಳಾಗಿದ್ದ ಹುಲಿ ಸಿಂಹಗಳಿಗೆ ಇಂದು ನಾವು ರಕ್ಷಣೆ ಕೊಟ್ಟು ಸಾಕಬೇಕಾದ ದುಃಸ್ಥಿತಿ ಒದಗಿದಂತೆಯೇ ನಮ್ಮ ಹಿಮಾಲಯ, ಅಮೆಜಾನ್, ಧ್ರುವ ವಲಯ, ಮಹಾಸಾಗರಗಳು ದುಸ್ಥಿತಿಗೆ ಒಳಗಾದರೆ ಅದು ಮುಂಬರಲಿರುವ ನಮ್ಮ ದುಸ್ಥಿತಿಯ ಮುನ್ನುಡಿಯಷ್ಟೇ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಒಂದು ವಿಷ ಒಂದು ಜೀವ ಸಮುದಾಯವನ್ನು ಮಾತ್ರ ಕೊಂದು ಇನ್ನೊಂದನ್ನು ಬಿಡುತ್ತದೆ ಎಂದು ಹೇಳುವ ಸಿದಾಂತವೇ ತಪ್ಪು. ಈ ಜಗತ್ತಿನ ಪಶು ಪಕ್ಷಿ ಪ್ರಾಣಿ ತರು ಲತೆಗಳೆಲ್ಲ ಒಂದೇ ಜೀವ ಮೂಲದಿಂದ ವಿಕಾಸವಾಗಿ ಬಂದುವು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪ್ರಕೃತಿಯನ್ನು ಪಳಗಿಸಬೇಕೆಂಬ ಮಾನವನ ಹಂಬಲ ಮಾತ್ರ ಇನ್ನೂ ನಿಂತಿಲ್ಲ.
–ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ರೈತರು ಎಷ್ಟೇ ಬಡವರಾದರು ಆತ್ಮ ಗೌರವ ಉಳ್ಳವರು
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ



ರೈತನಿಗೆ ಹಸಿರು ಕ್ರಾಂತಿ ಮಾಡುವಂಥ ಬ್ಯಾಂಕಿನ ಸಹಾಯವು ಏಳು ಸಮುದ್ರಗಳಾಚೆ ಇರುವ ಏಳು ಸುತ್ತಿನ ಕೋಟೆಯೊಳಗೆ ಸರ್ಪ ಕಾವಲಿನಲ್ಲಿರುವ ಅಲಭ್ಯ ಗಂಟಾಗಿ ಹೋಗಿದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಭಾರತದ ರೈತರಾಗಲೀ ಕಾರ್ಮಿಕರಾಗಲೀ, ಅವರು ಬಡವರಾಗಿರಬಹುದು ಅನಕ್ಷರಸ್ತರಾಗಿರಬಹುದು ಆದರೆ ಜಗತ್ತಿನ ಯಾವುದೇ ದೇಶದವರಿಗಿಂತ ಕೀಳಾದವರೆಂದು ನನಗೆ ಎಂದೂ ಅನ್ನಿಸಿಲ್ಲ .
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ನಾನು ಕಂಡಂತೆ ಸ್ವಾತಂತ್ರೋತ್ತರ ಭಾರತದ ರಾಜಕೀಯ ಚರಿತ್ರೆಯಲ್ಲಿ ಗ್ರಾಮಮಟ್ಟದವರೆಗೂ ಪ್ರಭಾವ ಬೀರಿದ ಏಕಮಾತ್ರ ಚಳವಳಿ ಎಂದರೆ ಕರ್ನಾಟಕ ರೈತ ಚಳವಳಿ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ವಿಶ್ವಪರಿಸರ ಸಂರಕ್ಷಣೆಯ ಹೋರಾಟಕ್ಕೆ ನಮ್ಮ ಓಬೀರಾಯನ ಕಾಲದ ನ್ಯಾಯ ಸಂಹಿತೆಗಳು ಮತ್ತು ಅಂಥದೇ ದೃಷ್ಟಿಕೋನವಿರುವ ನ್ಯಾಯಾಂಗಗಳು ಬಹು ದೊಡ್ಡ ಅಡ್ಡಿಯಾಗಿದ್ದಾರೆ. ಕಾಲ ಮೀರುವ ಮೊದಲೇ ನ್ಯಾಯಾಂಗ ಇದನ್ನು ತಿಳಿದು ತಾನೆ ಸ್ವತಃ ಏನಾದರೂ ಮಾಡದಿದ್ದರೆ ಬಹು ದೊಡ್ಡ ಅಪಕೀರ್ತಿಗೆ ಒಳಗಾಗಬೇಕಾಗುತ್ತದೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕಾಲಾನುಕಾಲದವರೆಗೂ ವಿಷ ಹರಡುವ, ಪಶು ಪ್ರಾಣಿಗಳೊಳಗೆ ಅನುಷಂಗಿಕವಾಗಿ ಜನ್ಮಜನ್ಮಾಂತರದವರೆಗೆ ವಿಷಕಾರುವ ಔಷಧಿಗಳನ್ನು ಉಪಯೋಗಿಸುತ್ತಿರುವ ಭಾರತದ ರೈತನ ಕತೆಯೇನು? ಈ ವಿಷವರ್ತುಲದಲ್ಲಿ ಸಿಕ್ಕಿರುವ ನಾವು ಪಾರಾಗುವುದುದಾದರೂ ಹೇಗೆ?
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
















