ಮಲೆನಾಡೆಂದರೆ ಅನೇಕ ಆಚರಣೆಗಳ ತವರು. ತನ್ನದೇ ಆದಂತಹ ಅನೇಕ ಸಂಸ್ಕ್ರತಿ, ಆಚಾರ ,ವಿಚಾರಗಳನ್ನು ಹೊಂದಿರುವಂತಹ ಪ್ರದೇಶವಿದು.
ಹಬ್ಬ ಹರಿದಿನಗಳೆಂದರೆ ಮಲೆನಾಡು ಮೊದಲು ನೆನಪಿಗೆ ಬರುತ್ತದೆ.
ಈ ಸಂಭ್ರಮಗಳಲ್ಲಿ ಒಂದು ಈ ಭೀಮನ ಅಮವಾಸ್ಯೆ, ಕೊಡಮಾಸೆ, ಕೊಡನಾಮಾಸೆ ಎಂದೆಲ್ಲ ಕರೆಯಲ್ಪಡುವ ಈ ಹಬ್ಬ ಘಟ್ಟದ ಕೆಳಗೆ ಆಟಿ ಅಮವಾಸ್ಯೆ ಎಂದೂ ಕರೆಯಲ್ಪಡುತ್ತದೆ.
ಆಷಾಡಕ್ಕೆ ತವರಿಗೆ ಬಂದ ಮಡದಿಯನ್ನು ಕರೆದೊಯ್ಯಲು ಬರುವ ಅಳಿಯನಿಗೆ ಸತ್ಕಾರ ಮಾಡುವ ಹಬ್ಬ ಇದಾಗಿದೆ. ಮಗಳು ಅಳಿಯನನ್ನು ಕಳಿಸುವ ಸಂದರ್ಭದಲ್ಲಿ ಮಳೆಗೆಂದು ಕೊಡೆ ಕೊಟ್ಟು ಕಳುಹಿಸುವುದರಿಂದ ಇದನ್ನು ಕೊಡೆ ಅಮವಾಸ್ಯೆ ಎಂದು ಕರೆಯುತ್ತಾರೆ ಎಂಬುದು ಪ್ರತೀತಿ.
ಇನ್ನೂ ಕೆಲವರು ಕಡೆ ಜಾನುವಾರು ಕೊಟ್ಟಿಗೆಗೆ ಇರುವ ಕೆಟ್ಟ ದೃಷ್ಟಿಯನ್ನು ನಿವಾರಿಸಲು ಕೇಳಿ ಬಲಿ ಕೊಡುವ ಪದ್ದತಿಯೂ ಉಂಟು. ಕೋಳಿಯನ್ನು ಜಾನುವಾರುಗಳಿಗೆ ಕೊಟ್ಟಿಗೆಗೆ ನಿವಾಳಿಸಿ ಕೊಯ್ದು ಎಡೆಮಾಡಿ ಊಟ ಮಾಡುವ ಪದ್ಧತಿ ಹಲವೆಡೆ ಇದೆ.
ಇನ್ನೂ ಕೆಲೆವೆಡೆ ಸಿಹಿ ಖಾದ್ಯದ ಅಡುಗೆ ತಯಾರಿಸಿ ಊಟ ಮಾಡುತ್ತಾರೆ.
ಮುಂದಿನ ಒಂದು ತಿಂಗಳು ಶ್ರಾವಣಮಾಸವಾದುದರಿಂದ ಕೆಲವು ಮಾಂಸಾಹಾರಿಗಳು ಮಾಂಸವನ್ನು ಸೇವಿಸದೇ ಒಂದು ಪದ್ದತಿಯ ರೀತಿಯಲ್ಲಿ ಅನುಸರಿಸುತ್ತಾರೆ.
ಒಂದೊಂದು ಪ್ರದೇಶದ ಆಚರಣೆ ವಿಭಿನ್ನವಾಗಿದ್ದರೂ ಮಲೆನಾಡ ಗರ್ಭದಲ್ಲಿ ಭೀಮನ ಅಮವಾಸ್ಯೆ ವಿಶೇಷ ಸ್ಥಾನ ಪಡೆದಿದೆ. ಈ ದಿನದಂದೇ ಶಿವ ಪಾರ್ವತಿಯ ತಪಸ್ಸನ್ನು ಮೆಚ್ಚಿ ಆಕೆಯನ್ನು ಒಪ್ಪಿದನು ಎಂಬ ಪುರಾಣ ಪ್ರತೀತಿಯೂ ಇರುವುದರಿಂದ ಇದು ವಿಶೇಷವಾದ ಹಬ್ಬವೇ ಸರಿ.
Content credits : ಮದನ್ ಕೊಳವಾಡಿ
