ಓ ನನ್ನ ಚೇತನಆಗು ನೀ ಅನಿಕೇತನ! ರೂಪರೂಪಗಳನು ದಾಟಿನಾಮಕೋಟಿಗಳನು ಮೀಟಿ,ಎದೆಯ ಬಿರಿಯೆ ಭಾವದೀಟಿ,ಓ ನನ್ನ ಚೇತನಆಗು ನೀ ಅನಿಕೇತನ! ನೂರು ಮತದ ಹೊಟ್ಟ ತೂರಿ,ಎಲ್ಲ ತತ್ತ್ವದೆಲ್ಲೆ ಮೀರಿ,ನಿರ್ದಿಗಂತವಾಗಿ ಏರಿ,ಓ ನನ್ನ ಚೇತನಆಗು ನೀ ಅನಿಕೇತನ! ಎಲ್ಲಿಯೂ ನಿಲ್ಲದಿರು;ಮನೆಯನೆಂದೂ ಕಟ್ಟದಿರು;ಕೊನೆಯನೆಂದೂ ಮುಟ್ಟದಿರು;ಓ ಅನಂತವಾಗಿರು!ಓ ನನ್ನ ಚೇತನಆಗು ನೀ ಅನಿಕೇತನ! ಅನಂತ ತಾನ್ ಅನಂತವಾಗಿಆಗುತಿಹನೆ ನಿತ್ಯಯೋಗಿ;ಅನಂತ ನೀ ಅನಂತವಾಗು;ಆಗು, ಆಗು, ಆಗು, ಆಗು,ಓ ನನ್ನ ಚೇತನಆಗು ನೀ ಅನಿಕೇತನ! – ಕುವೆಂಪು Vishwamanava Geethe pdf in Kannada Vishwamanava […]
Categories
ವಿಶ್ವಮಾನವ ಗೀತೆ – ಓ ನನ್ನ ಚೇತನ
