Categories
Quotes

Madan Kolavadi Quotes about malenadu

ಮತ್ತೆ ಶುರುವಾಗಿದೆ ಮುಂಗಾರು…ಕುಡಿಯೊಡೆಯುತಿವೆ ಹಸುರೆಲೆ ಚಿಗುರು…ಮಲೆನಾಡಿನ ಮಳೆಗಾಲದ ಚಂದವ…ಬಣ್ಣಿಸಲು ಅಸಾಧ್ಯವೇ ಸರಿ….ಒಂದೆಡೆ ಇಂಬಳ ಜೀರುಂಡೆಗಳ ಕಿರುಕುಳವಾದರೆ…ಇನ್ನೊಂದೆಡೆ ಮನೆಯಲಿ ಹಲಸಿನ ದೋಸೆ ಮುಳುಕಗಳ ಪರಿಮಳ…ಜಡಿ ಮಳೆಗೆ ವಿದ್ಯುತ್ ಇಲ್ಲವಾದರೆಸೀಮೆ ಎಣ್ಣೆ ದೀಪಗಳ ನರ್ತನ ಒಂದೆಡೆಯಾದರೆ…ಮಳೆಯ ತಂಡಿಗೆ ಮುದುಡಿ ಕಂಬಳಿ ಹೊದ್ದು ಕೂರುವ ಹಿರಿಯರು ಇನ್ನೊಂದೆಡೆ…ಇದುವೇ ಮಳೆಯ ಸ್ವರ್ಗ ಮಲೆನಾಡಿನ ಸಾಮಾನ್ಯ ಚಿತ್ರಣ… ಮುಂಗಾರಿನ ಆಗಮನಕ್ಕೆ ದರಗೆಲ್ಲ ಕೊಳೆತಿತ್ತು…ಯಾವುದೋ ಒಂದು ಮನಸಿಗೆ ಗ್ರಹಿಸಲಾಗದ ಪರಿಮಳ ಅಡವಿಯಲ್ಲಾ ಮುತ್ತಿತ್ತು…ಕೊಳೆತ ದರಗಿನ ಅಡಿಯಲ್ಲಿ ಮಿಜುಗುಡುತಿತ್ತು ಇಂಬಳಗಳ ಗುಂಪು…ರಕ್ತವೋ ಎಲೆಗಳ ಪತ್ರವೋ ಹೊಟ್ಟೆಗೆ ಸಿಕ್ಕರೆ […]

Categories
Kuvempu Quotes

ಕುವೆಂಪು ನುಡಿಮುತ್ತುಗಳು – Kuvempu quotes

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪು ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು– ಕುವೆಂಪು ಮಲೆನಾಡೆಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ಪರ್ಣಶಾಲೆ, ಅರಣ್ಯರಮಣಿಯ ವಿಲಾಸಕ್ಷೇತ್ರ.– ಕುವೆಂಪು ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ.– ಕುವೆಂಪು ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು ಕಟ್ಟುವುದಕ್ಕೆ ನಮಗೆ ದುಡ್ಡು ಇದೆ. ಆದರೆ ಹಳ್ಳಿಗಳಲ್ಲಿ ಬಾವಿ ತೋಡಲು ಹಣವಿಲ್ಲ.– ಕುವೆಂಪು

Categories
Poornachandra Tejaswi Quotes

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನುಡಿಮುತ್ತುಗಳು – K. P. Poornachandra Tejaswi Quotes

ನನಗಂತೂ ಕಾಡುಪ್ರಾಣಿಗಳ ಹೆದರಿಕೆ ಕೊಂಚವೂ ಇರಲಿಲ್ಲ. ಅಲ್ಲದೆ ಹೆದರುವುದರಿಂದ ಪ್ರಯೋಜನವೂ ಇರಲಿಲ್ಲ.– ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಮಳೆಗಾಗಿ ಕಾಡು ಬೇಕೇಬೇಕು ಅನ್ನೋ ಜನ ನಮ್ಮ ಒತ್ತುವರಿ ಮಾತ್ರ ಹಾಗೇ ಇರಲಿ ಎಂದು ಬಯಸುತ್ತಾರೆ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯಾರಿಗೆ ತಾವು ಇದ್ದಲ್ಲೇ ಎಲ್ಲವೂ ಕುತೂಹಲಕರವಾಗಿ ಇರುವುದಿಲ್ಲವೋ ಅವರು ಈ ಭೂಮಂಡಲದ ಮೇಲೆ ಎಲ್ಲಿ ಟೂರ್ ಹೋದರೂ, ಇಂಟರೆಸ್ಟಿಂಗ್ ಆಗಿ ಇರೋದಿಕ್ಕೆ ಆಗಲ್ಲ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ‎ನನಗೂ […]