Categories
Blogs Chikkamagaluru Koppa Malnad information Tourist Places

ಕುದುರೆಗುಂಡಿಯ ಕಪಿಲಹಳ್ಳ ಮತ್ತು ಅಬ್ಬಿಗುಂಡಿ ಜಲಪಾತ – Kudregundi Kapilahalla and Abbigundi Falls

ದೊಡ್ಡದಾಗಿರುವ ಒಂದು ಹಾವು ಕಾಡಿಂದ ಊರೊಳಗೆ ಹೋಗಿರೋ ತರ ತಿರುವುಗಳ ಹೋಂಡಾ ಗುಂಡಿ ತುಂಬಿರೋ ರಸ್ತೆ, ಕಣ್ಣು ಹಾಯಿಸದಲ್ಲೆಲ್ಲ ಹಚ್ಚ ಹಸಿರು ಸ್ವಚ್ಛ ಗಾಳಿ, ಹೌದು ನಾನು ಕರ್ಕೊಂಡು ಹೋಗ್ತಿರುವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕುದುರೆಗುಂಡಿ ಈ ಊರು ಅಭಿವೃದ್ಧಿಯ ಪತ ಹಿಡಿದು ತನ್ನ ಮಿತವಾದ ವೇಗದಲ್ಲಿ ಅಭಿವೃದ್ಧಿ ಕಡೆಗೆ ಸಾಗುತ್ತಿದ್ದರೆ ತನ್ನೊಳಗಿರುವಂತಹ ವಿಶೇಷ ವಿಷಯಗಳನ್ನ ಅತ್ಯಮೂಲ್ಯ ರೀತಿಯಲ್ಲಿ ಸುರಕ್ಷಿತವಾಗಿ ನೋಡ್ಕೊಳ್ತಾಯಿದೆ ಅಂತಹ ಒಂದು ವಿಶೇಷವಾದ ವಿಷಯವನ್ನು ನಾನು ನಿಮಗೆ ಇವತ್ತು ಪರಿಚಯಿಸುತ್ತಿದ್ದೇನೆ.
ಈ ಕುದುರೆ ಗುಂಡಿ ಸಮಯದಲ್ಲಿ ರಾಮಾಯಣ ಹಾಗೂ ಮಹಾಭಾರತ ಕಾಲದ ಇತಿಹಾಸವನ್ನು ಹೊಂದಿರುವಂತಹ ಒಂದು ಪ್ರದೇಶವಿದೆ ಹಾಗೆ ದಟ್ಟ ಕಾಡಿನ ಮಧ್ಯೆ ಮನುಷ್ಯ ಹಾಗೂ ಪ್ರಕೃತಿಯ ಕೈಚಳಕದಿಂದ ಮೂಡಿರುವಂತಹ ಒಂದು ಜಲಪಾತ ಕೂಡ ಸಿಗುತ್ತೆ.

ಕೊಪ್ಪದಿಂದ ಕುದುರೆಗುಂಡಿಗೆ ಹೋಗುವಾಗ ಮಾರ್ಗ ಮಧ್ಯದಲ್ಲೇ ನಮಗೆ ಶ್ರೀ ಕ್ಷೇತ್ರ ಕಪಿಲೇಶ್ವರ ಕುದುರೆಗುಂಡಿ ಎಂಬ ಒಂದು ದ್ವಾರ ಕಾಣಲು ಸಿಗುತ್ತೆ ಆ ದ್ವಾರದ ಮೂಲಕ ಕೇವಲ ಒಂದು ಐದು ನಿಮಿಷದ ದಾರಿಯಲ್ಲಿ ನಾವು ಸಾಗಿದರೆ ನಮಗೊಂದು ಸುಂದರ ಪ್ರಪಂಚ ಕಣ್ ತೆರೆದುಕೊಳ್ಳುತ್ತದೆ ಆ ಪ್ರಪಂಚದಲ್ಲೇ ವಿಶಾಲವಾಗಿ ಕಪಿಲಾವತಿ ಮೈದುಂಬಿ ಹರಿದಿದ್ರೆ ಪಕ್ಕದಲ್ಲಿ ಒಂದು ಸಣ್ಣ ಗುಡಿ ಕೂಡ ಕಾಣ ಸಿಗುತ್ತೆ ಇದರ ಹಿಂದಿನ ಇತಿಹಾಸ ಏನೆಂದರೆ

  • ಕುದುರೆಗುಂಡಿ ಕಪಿಲಾ ನದಿ ಇತಿಹಾಸ

ರಾಮಾಯಣ ಮಹಾಭಾರತ ಒಳಗೊಂಡಂತೆ ಹಲವು ಪುರಾಣಗಳಲ್ಲಿ ವರ್ಣಿಸಿರುವಂತೆ ದಕ್ಷಿಣ ಭಾರತದ ಸಹ್ಯಾದ್ರಿಖಂಡದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯು ನಾಗರಖಂಡ ದ್ರವಂಕನಾಡು ರಾಮ ಕ್ಷೇತ್ರ ಅಗಸ್ತ್ಯ ಕ್ಷೇತ್ರ ಎಂದು ಕರೆಯಲ್ಪಡುತ್ತದೆ ಎಂದು ಐತಿಹವಿದೆ, ಈ ಮಲೆಯಾಚಲ ಪ್ರದೇಶ ಕನಕಾಂಬ ಎಂಬ ದೇವಿಯ ಮೂಲ ಸ್ಥಾನದಲ್ಲಿ ತೀರ್ಥ ರೂಪಿತಳಾಗಿ ಹರಿಯುವ ನದಿಯೇ ಕಪಿಲಾವತಿ ಆ ನದಿಯು ಪೂರ್ವಭಿಮುಖವಾಗಿ ಹಬ್ಬಿ ಉತ್ತರಾಭಿಮುಖವಾಗಿ ಹರಿದು ತುಂಗೆಯನ್ನು ಸೇರುತ್ತದೆ ಈ ನದಿಯ ಮೇಲೆ ಸಿಗುವಂತಹ ಬ್ರಹ್ಮವನಗಳಲ್ಲಿ ಸೋಮೇಶ್ವರ, ಅಶ್ವಕಂಡೇಶ್ವರ, ಕಪಿಲೇಶ್ವರ ಇನ್ನು ಮುಂತಾದ ಅನೇಕ ದೇವಾಲಯಗಳು ಅಸ್ತಿತ್ವ ಕಂಡುಕೊಂಡಿವೆ, ಜಮದಿಗ್ನಿ ಮಹರ್ಷಿ ಹಾಗೂ ರೇಣುಕಾ ದೇವಿಯ ಸುಪುತ್ರ ಪರಶುರಾಮ ಅರ್ಥಾತ್ ಭಾರ್ಗವರಾಮ ಮಾತೃ ಹತ್ಯ ಪಾಪ ನಿವಾರಣೆಗಾಗಿ ತೀರ್ಥಯಾತ್ರೆ ಕೈಗೊಂಡಾಗ ಈ ಪವಿತ್ರ ಕಪಿಲಾ ತೀರ್ಥದಲ್ಲಿ ದೈವಿಕವಾಗಿ ಪೂಜ್ಯ ಭಾವದೊಂದಿಗೆ ತನ್ನ ಕರಗಮಲದಲ್ಲಿರುವ ಮಾತೃ ಹತ್ಯೆಗೆ ಬಳಸಲಾದ ಪರಶು ಅಂದರೆ ಕೊಡಲಿಯನ್ನು ತೊಳೆಯಲು ಯೋಚಿಸಿ ಮೊದಲು ಶಿವನ ಪೂಜೆಯನ್ನು ನೆರವೇರಿಸಲು ಅಲ್ಲೇ ಇದ್ದ ಮಣ್ಣಿನಿಂದ ಶಿವಲಿಂಗವನ್ನು ನಿರ್ಮಿಸಿ ಪೂಜೆ ಮಾಡಿದ ಬಗ್ಗೆ ಐತಿಹವಿದೆ ಅದಲ್ಲದೆ ಅನೇಕ ಕಾಲಘಟ್ಟಗಳಲ್ಲಿ ಶಿವರಾಧಕರಾದ ಕಪಿಲಮುನಿ ಹಾಗೂ ಅಗಸ್ತ್ಯ ಮನಿ ಈ ಕ್ಷೇತ್ರದಲ್ಲಿ ಶಿವಾಚನೆ ಮಾಡಿದ ಕಾರಣಕ್ಕೆ ಇಲ್ಲಿ ಪೂಜಿಸಲ್ಪಡುತ್ತಿರುವ ಈಶ್ವರನನ್ನು ಕಪಿಲೇಶ್ವರ ಎಂದು ಕರೆಯಲಾಗುತ್ತದೆ ಎಂಬುದು ಐತಿಹಾ ಇದನ್ನು ಮನಗೊಂಡ ಕೆಳದಿಯ ಅರಸರಿಂದ ಸಂರಕ್ಷಿಸಿ ಇಲ್ಲಿ ಪೂಜಿಸಲ್ಪಡುತ್ತದೆ, ಇಲ್ಲಿ ಪುರಾತನ ಶಿಲಾಸ್ತಂಬದಲ್ಲಿರುವ ಶ್ರೀ ವೀರಭದ್ರೇಶ್ವರ ಕಪಿಲೇಶ್ವರ ದೇವರ ಶಿಲಾ ಕೃತಿ ಗೋಚರಿಸಲ್ಪಡುತ್ತದೆ ಅಲ್ಲದೆ ಈ ಪ್ರದೇಶದಲ್ಲಿ ಪರಿಸರ ಸ್ವಚ್ಛತೆಯ ಉತ್ಕನನ ಸಂದರ್ಭದಲ್ಲಿ ಪಾಣಿಪೀಠ ಹಲವು ನಾಗರ ಕಲ್ಲುಗಳು ಪುರಾತನ ಪಳಯುಳಿಕೆಗಳು ಗೋಚರಿಸಲ್ಪಟ್ಟಿವೆ. ಪ್ರಕೃತಿ ವಿಕೋಪಕ್ಕೆ ಒಳಗೊಂಡು ಯಾವುದೇ ಅಭಿವೃದ್ಧಿ ಕಾಣದೆ ಶಿಥಿಲಾವಸ್ಥೆಯಲ್ಲಿರುವ ಪಳೆಯುಳಿಕೆಗಳು ಮಾತ್ರ ಉಳಿದಿವೆ, ಇಲ್ಲಿ ಪ್ರತಿ ವರ್ಷವೂ ಎಳಮವಾಸ್ಯೆಯ ದಿನ ಜಾತ್ರೆ ನಡೆಯುತ್ತದೆ ಆ ದಿನ ಸ್ಥಳೀಯರು ಮತ್ತು ಹೊರ ಊರಿನ ಭಕ್ತರು ಬಂದು ತೀರ್ಥ ಸ್ಥಾನ ಮಾಡಿ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಸಾಮೂಹಿಕ ಅನ್ನ ಸಂತರ್ಪಣೆಯಲ್ಲಿ ಭೋಜನ ಸ್ವೀಕರಿಸಿ ಕೃತರ್ತರಾಗಿದ್ದಾರೆ, ಪ್ರತಿ ವರ್ಷವೂ ಶಿವರಾತ್ರಿಯ ವಿಶೇಷ ಪೂಜೆ ರುದ್ರಾಭಿಷೇಕ ರಾತ್ರಿಯೆಲ್ಲ ಭಜನೆ ಹಾಗೂ ಮಾರನೇ ದಿನ ಸಾಮೂಹಿಕ ಅನ್ನ ಸಂತರ್ಪಣೆ ನಡೆಯುತ್ತದೆ…

Advertisement
Advertisement Advertisement

ಏನೊಂದು ಈ ಕಪಿಲೇಶ್ವರನ ದೇವಸ್ಥಾನ ನೋಡಿ ನೇರವಾಗಿ ಕುದುರೆಗುಂಡಿಯ ಪೇಟೆ ಒಲೆಯಕ್ಕೆ ಬಂದರೆ ಅಲ್ಲಿಂದ ನಮಗೆ ನಾಗರಮಕ್ಕಿ ಎಂಬ ಊರಿಗೆ ಹೋಗುವ ರಸ್ತೆ ಕಾಣುತ್ತೆ ಆ ರಸ್ತೆಯಲ್ಲಿ ಯಾರಾದರೂ ಸ್ಥಳೀಯರ ಸಹಾಯ ಪಡೆದುಕೊಂಡು ಅಬ್ಬಿಗುಂಡಿ ಜಲಪಾತಕ್ಕೆ ಹೋಗೋ ದಾರಿಯನ್ನು ಕೇಳಿದರೆ ಖಂಡಿತವಾಗ್ಲೂ ಇಲ್ಲಿನ ಜನ ನಿಮ್ಗ್ ಹೇಳಿ ಹೇಳ್ತಾರೆ, ಅಕಸ್ಮಾತ್ ನೀವೇನಾದ್ರೂ ಅಂತರ್ಮುಖಿಗಳು ಅಂದರೆ ಇಂಟರ್ವರ್ಟ್ಗಳು ಆಗಿದ್ರೆ ಮೊಬೈಲಲ್ಲಿರುವಂತ ಗೂಗಲ್ ಮ್ಯಾಪ್ ನಲ್ಲಿ ಅಬ್ಬಿಗುಂಡಿ ಫಾಲ್ಸ್ ಅಥವಾ ಅಬ್ಬಿಗುಂಡಿ ಜಲಪಾತ ಅಂತ ಸರ್ಚ್ ಮಾಡಿದ್ರು ಕೂಡ ನಿಮಗೆ ದಾರಿ ತೋರಿಸುತ್ತದೆ ಆದರೆ ಸದ್ಯದ ಮಾಹಿತಿ ಪ್ರಕಾರ ನಿಮಗೆ ಬಿಎಸ್ಎನ್ಎಲ್ ಸಿಂ ಇದ್ರೆ ಉತ್ತಮ ಬೇರೆ ಸಿಮ್ಗಳಿದ್ರೆ ಕೆಲವೊಂದಷ್ಟು ಸಿಮ್ಗಳಿಗೆ ನೆಟ್ವರ್ಕ್ ಸಿಗಬಹುದು ಇನ್ ಕೆಲವ್ದಕ್ಕೆ ದೇವರೇ ಕಾಪಾಡಬೇಕು ಈ ತಪತ್ರೆಯ ಬೇಡ ಅನ್ನೋದಾದ್ರೆ ಅಲ್ಲಿರುವ ಸ್ಥಳೀಯರ ಸಹಾಯ ಪಡೆಯುವುದೇ ಉತ್ತಮ, ನಂತರ ನೀವು ಅವರ ಮಾರ್ಗದರ್ಶನದಂತೆ ಅಥವಾ ಗೂಗಲ್ ನ ಮಾರ್ಗದರ್ಶನದಂತೆ ಒಂದು ದಟ್ಟ ಕಾಡಿನ ಪುಟ್ಟ ರಸ್ತೆಯಲ್ಲಿ ಸಾಗಿದರೆ ಅಬ್ಬಿಗುಂಡಿ ಜಲಪಾತದ ಸಮೀಪದವರೆಗೆ ನಿಮ್ಮ ವಾಹನದಲ್ಲಿ ನೀವು ಹೋಗಬಹುದು ನಂತರ ಅಲ್ಲೇ ಇರುವಂತ ಸ್ಥಳದಲ್ಲಿ ಅಂದರೆ ರಸ್ತೆಯ ಪಕ್ಕದಲ್ಲಿ ಬೇರೆಯವರಿಗೆ ತೊಂದರೆ ಆಗದ ರೀತಿಯಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿ ಕೆಲವಷ್ಟೇ ದೂರದ ಕಾಲಿನಡಿಗೆಯಲ್ಲಿ ನೀವು ಸಾಗಿದರೆ ನಿಮ್ಮ ಕಣ್ಣೆದುರುಗಡೆ ಒಂದು ಅಮೋಘ ಅದ್ಭುತ ಮಾನವ ಹಾಗೂ ಪ್ರಕೃತಿಯ ಕೈಚಳಕದಿಂದ ಮೂಡಿದಂತಹ ಒಂದು ಜಲಪಾತ ಕಣ್ಣಿಗೆ ಕಾಣಲಿಕ್ಕೆ ಸಿಗುತ್ತೆ.
ಅದೇ ಅಬ್ಬಿಗುಂಡಿ ಜಲಪಾತ.

ಊರ ರಸ್ತೆಯಲ್ಲಿ ಹೋಂಡಾ ಗುಂಡಿ ಇದ್ರು ಊರಿನ ಪ್ರಕೃತಿ ಅತ್ಯಂತ ಮನೋಹರವಾಗಿತ್ತು ಒಂದು ರೀತಿಯಲ್ಲಿ ಈ ಎರಡು ಪ್ರದೇಶಗಳು ದಟ್ಟ ಕಾಡಿನ ಮಧ್ಯ ಜನದಟ್ಟಣೆಯಿಂದ ದೂರ ಉಳಿದಿದ್ದು ಒಂದು ರೀತಿಯಲ್ಲಿ ಸಮುದ್ರದೊಳಗಿನ ಕಪ್ಪೆ ಚಿಪ್ಪಿನ ಒಳಗಿರುವ ಮುತ್ತಿನಂತೆ ತನ್ನ ಸೌಂದರ್ಯವನ್ನು ಬಚ್ಚಿಟ್ಟುಕೊಂಡು ಯಾರೇ ಬಂದರೂ ಅವರನ್ನು ಮಂತ್ರಮುದರನ್ನಾಗಿಸುವಂತೆ ಬಾಸವಾಗುತ್ತಿದ್ದವು, ಇದು ಕುದುರೆಗುಂಡಿಯ ಕಪಿಲಹಳ್ಳ ಮತ್ತು ಅಬ್ಬಿಗುಂಡಿ ಜಲಪಾತ ಬಗ್ಗೆ ಇರುವ ನನ್ನ ಅನಿಸಿಕೆ ಅಥವಾ ಅಭಿಪ್ರಾಯ ಅಥವಾ ಒಂದು ಪ್ರವಾಸ ಕಥನ ಅಂದ್ರು ತಪ್ಪಾಗಲ್ಲ
ಧನ್ಯವಾದಗಳು..

– ಸುಧನ್ವ ಗಡಿಕಲ್ (SG Days)

Kudregundi Kapilahalla and Abbigundi Falls Related Youtube Video

Images related to Kapilahalla

Images related to Abbigundi Falls

Advertisement
Advertisement Advertisement
Advertisement
Advertisement Advertisement