Categories
Malnad Malnad information Rain Thirthahalli trekking

ಮುಂಗಾರಿನ ಮಡಿಲಲ್ಲಿ ಪ್ರಕೃತಿಯ ಆರಾಧನೆ – Rainathon Season 18

ಮಳೆಯೆಂದರೆ ಎಲ್ಲರಿಗೂ ಪ್ರೀತಿ. ಕೆಲವರಿಗೆ ಮಳೆಯಲ್ಲಿ ನೆನೆಯುವುದು ಖುಷಿ ಕೊಟ್ಟರೆ, ಇನ್ನು ಕೆಲವರಿಗೆ ಮಳೆಯನ್ನು ನೋಡುವುದೇ ಒಂದು ರೋಮಾಂಚನ. ಕೃಷಿ ಮನೆತನದ ಕುಟುಂಬಗಳಲ್ಲಿ‌ ಮಳೆಯಲ್ಲಿಯೇ ನೆನೆದು ಕೆಲಸ ಪೂರೈಸುವ ಅನಿವಾರ್ಯತೆ ಇರುತ್ತದೆ. ಹೀಗೆ, ಮಳೆ ಎಂಬ ವಿಸ್ಮಯ ಒಬ್ಬೊಬ್ಬರಿಗೆ ತನ್ನದೇ ರೀತಿಯಲ್ಲಿ ಸಂತೋಷವನ್ನು ತಂದುಕೊಡುತ್ತದೆ. ಇದೇ ಮಳೆಯ ಆನಂದವನ್ನು ಸವಿಯಲು ತೀರ್ಥಹಳ್ಳಿಯಲ್ಲಿ ನಡೆದ “ರೈನಥಾನ್ ೧೮ನೇ ಆವೃತ್ತಿ – Rainathon Season 18” ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದೆ. ಬಹಳ ಉತ್ಸುಕತೆಯಿಂದ ಬೆಂಗಳೂರಿನಿಂದ ಆಗಮಿಸಿದ ಸಹಪಥಿಕರಾಗಲೀ ಅಥವಾ ಸುತ್ತಲ […]

Categories
Info Malnad information Rain Thirthahalli trekking

ಮಳೆನಡಿಗೆ, ಮಳೆಯಲ್ಲಿ ನಡಿಗೆ ಮಲೆನಾಡಿನ ಮಳೆಯಲ್ಲಿ ನಡಿಗೆ..! – Rainathon

ರೈನಥಾನ್ (Rainathon) ಇದರ 18 ನೆ ಆವೃತ್ತಿ 27 ಜೂನ್ 2026 ರಂದು ತೀರ್ಥಹಳ್ಳಿಯ ಹುರುಳಿ ಎಂಬ ಸ್ಥಳದಲ್ಲಿ ನಡೆಯಲಿದೆ, ಪ್ರತಿಬಾರಿಯಂತೆ ಈ ಬಾರಿಯೂ ಅಂದಾಜು 100+ ಹೆಚ್ಚು ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬೆಂಗಳೂರಿನಿಂದ 26 ಜೂನ್ 2026 ರ ರಾತ್ರಿ 8.30 ಕ್ಕೆ , 45 ಜನರ ಉತ್ಸಾಹಿ ಜನರ ತಂಡ ಹೊರಡಲು ಸಿದ್ಧವಾಗಲಿದೆ, ಈಗಾಗಲೇ ಅನೇಕರು Registration ಮಾಡಿದ್ದು. ಇನ್ನು ಕೆಲವೇ ಆಸನಗಳು ಖಾಲಿ ಇವೆ. Rainathon ಇದೊಂದು ವಿಶೇಷ ಮಲೆನಾಡಿನ ಮಳೆಯಲ್ಲಿ ಎಲ್ಲವನ್ನೂ […]

Categories
Author Blogs Kannada Malnad information

ಡಾ. ಕೆ. ಶ್ರೀಪತಿ ಹಳಗುಂದ ಅವರ “ಗನಗದಿರಾ – ಮಲೆನಾಡಿನ ಪದಪ್ರಪಂಚ”

ಮಲೆನಾಡಿನ ವೈವಿಧ್ಯಮಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಆಡುಭಾಷೆಯ ಸೊಬಗನ್ನು ಸಮಾಜಿಕ ಜಾಲತಾಣದಲ್ಲಿ ದಾಖಲಿಸುವ ಉದ್ದೇಶದಿಂದ, ಖ್ಯಾತ ಲೇಖಕರು, ವಿಮರ್ಶಕರು ಹಾಗೂ ಅಂಕಣಕಾರರು ಆದ ಡಾ. ಕೆ. ಶ್ರೀಪತಿ ಹಳಗುಂದ ಅವರ “ಗನಗದಿರಾ – ಮಲೆನಾಡಿನ ಪದಪ್ರಪಂಚ” ಕೃತಿಯಲ್ಲಿ ೪೦೦ಕ್ಕೂ ಹೆಚ್ಚು ಅಪರೂಪದ ಪದಗಳನ್ನು ಸಂಗ್ರಹಿಸಿದ್ದಾರೆ. ಈ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಅವರ ಅನುಮತಿಯ ಮೇರೆಗೆ, ಆಯ್ದ ಪದಗಳ ಅರ್ಥ ಮತ್ತು ಆಡುಭಾಷೆಯ ಸೊಬಗಿನ ಚಿತ್ರಗಳ ಸರಣಿಗಳು, ನಮ್ಮ ಮುಂದಿನ ಪೋಸ್ಟ್ಗಳಲ್ಲಿ ನಿಮ್ಮ ಮುಂದೆ ಅನಾವರಣಗೊಳಿಸಲಿದ್ದೇವೆ. ಗನಗದಿರಾ?ಇದೊಂದು ಸಂಭೋದನಾ ವಾಚಕ […]

Categories
Blogs Culture Malnad information

ಹೊಸ ಹುರುಪಿನ ಹಸಿರ ತೋರಣ ಮಲೆನಾಡ ಯುಗಾದಿ – Ugadi celebrations in Malenad

– ಬಿ.ಸಂ. ಸುವರ್ಚಲಾ ಮಲೆನಾಡೆಂದರೆ ಹಸಿರಿನ ತೊಡುಗೆಯುಟ್ಟು, ಶುದ್ಧ ಗಾಳಿಯ ಪಸರಿಸುತ್ತಾ ಮನಸಿಗೆ ಮುದ ನೀಡುವ ಊರು. ಇಂತಹಾ‌ ಮಲೆನಾಡ ಮಡಿಲಿನಲಿ ಪ್ರಕೃತಿಯ ಹಬ್ಬ ಯುಗಾದಿಯ ಆಚರಣೆಯ ಸೊಗಸೇ ಬೇರೆ. ಪ್ರಕೃತಿ ಮಾತೆಯು ಹೊಸ ಚಿಗುರಿನಿಂದ, ಬಣ್ಣ ಬಣ್ಣದ ಹೂ- ಹಣ್ಣುಗಳನ್ನು ತುಂಬಿಕೊಂಡು ತುಂಬು ಗರ್ಭಿಣಿಯಂತೆ‌ ಕಾಣುವ ಸಂದರ್ಭದಲ್ಲಿ ಬರುವ ಹೊಸವರ್ಷದ ಹಬ್ಬ ಯುಗಾದಿ. ಇಲ್ಲಿ ಕೇವಲ ಒಂದು ಸಂವತ್ಸರ ಕಳೆದು ಇನ್ನೊಂದು ಸಂವತ್ಸರ ಬರುವುದಿಲ್ಲ. ಹಳೆತನದಿಂದ ಹೊಸತನದೆಡೆಗೆ ಜನರನ್ನು ಕರೆದೊಯ್ಯುತ್ತದೆ. ಮಲೆನಾಡ ಯುಗಾದಿ ಸಂಭ್ರಮ ಯುಗಾದಿ […]

Categories
Author Blogs Malnad information

ಆಗುಂಬೆ ಟನಲ್ ಯೋಜನೆ ಪರ / ವಿರೋಧ ಅಂಶಗಳು – Agumbe Tunnel Project Pros / Cons

– ಮಲ್ನಾಡ್ ಪ್ಲಾನೆಟ್ Malnad Planet (Instagram Page) ಅಭಿವೃದ್ಧಿ ಬೇಕು ನಿಜ, ಆದರೆ ಅದು ಪಶ್ಚಿಮ ಘಟ್ಟದ ವಿನಾಶದ ಮೇಲೆ ಇರಬಾರದು. ಆಗುಂಬೆ ಘಾಟಿಯ ಹೇರ್‌ಪಿನ್ ತಿರುವುಗಳು ನಮ್ಮ ಹೆಮ್ಮೆ ಮತ್ತು ಪ್ರಕೃತಿಯ ಸೌಂದರ್ಯ. ಸುರಂಗ ಮಾರ್ಗದಿಂದ ಪ್ರಯಾಣ ಸುಲಭವಾಗಬಹುದು, ಆದರೆ ಕಾಳಿಂಗ ಸರ್ಪ ಮತ್ತು ಸಿಂಗಳೀಕಗಳ ಆವಾಸಸ್ಥಾನ ಹಾಳಾದರೆ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ಪರ್ಯಾಯವಾಗಿ ಹಳೆಯ ರಸ್ತೆಯನ್ನೇ ವೈಜ್ಞಾನಿಕವಾಗಿ ಸರಿಪಡಿಸುವುದು ಅಥವಾ ಬೇರೆ ಮಾರ್ಗಗಳನ್ನು ಬಳಸುವುದು ಸೂಕ್ತ. ಯೋಜನೆಯ ಪರವಾದ ಅಂಶಗಳು – […]

Categories
Author Blogs Malnad information

ಆಗುಂಬೆಯ ಅಳಲು: ಆಧುನಿಕತೆಯ ಅಬ್ಬರಕ್ಕೆ ಬಲಿಯಾಗುತ್ತಿದೆಯೇ ದಕ್ಷಿಣದ ಚೆರಾಪುಂಜಿ?

– ಅಭಿ ತೀರ್ಥಹಳ್ಳಿ ದಕ್ಷಿಣ ಭಾರತದ ಚೆರಾಪುಂಜಿ ಹಾಗೂ ಮಲೆನಾಡಿನ ಹೆಬ್ಬಾಗಿಲು ಎಂದೇ ಹೆಸರಾಗಿರುವ ನಮ್ಮ ಆಗುಂಬೆಯ ಅಸ್ತಿತ್ವ ಇಂದು ಭೀತಿಯಲ್ಲಿದೆ. ಸೋಮೇಶ್ವರ ವನ್ಯಜೀವಿ ಧಾಮದ ನಡುವೆ ಹಾದುಹೋಗುವ ಆಗುಂಬೆ ಘಾಟಿ ರಸ್ತೆ ಕೇವಲ ವಾಹನಗಳ ಓಡಾಟಕ್ಕಿರುವ ಸಂಪರ್ಕ ಮಾರ್ಗವಲ್ಲ, ಅದು ಅಸಂಖ್ಯಾತ ಜೀವಿಗಳ ಆವಾಸಸ್ಥಾನ ಮತ್ತು ಲಕ್ಷಾಂತರ ಜನರ ಬದುಕಿನ ಆಧಾರ. ಆದರೆ, ಈ ಸೂಕ್ಷ್ಮ ಪರಿಸರದಲ್ಲಿ ಸುರಂಗ ಮಾರ್ಗ, ದ್ವಿಪಥ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸುವ ಹೊಸ ಪ್ರಸ್ತಾವನೆಯು ಇದೀಗ ಪರಿಸರ ಪ್ರೇಮಿಗಳನ್ನು […]

Categories
Author Blogs Malnad information

ನಿಸರ್ಗದ ಸಾಕ್ಷಾತ್ ದೇವರಂತಿರುವ ಆಗುಂಬೆಯನ್ನು ಉಳಿಸಿಕೊಳ್ಳೋಣ, ಉಸಿರು ಬದುಕು ನೀಡಿದ ತಾಯಿಗೆ ಸಲ್ಲಿಸಬೇಡವೇ ಕೃತಜ್ಞತೆ

-ಪ್ರಸಾದ ಶೆಣೈ ಆರ್.ಕೆ. ಕೆಲವು ವರ್ಷಗಳಲ್ಲಿ ಸಣ್ಣ ಪುಟ್ಟ ಭೂಕುಸಿತ, ಹವಾಮಾನ ಬದಲಾವಣೆಗಳಿಂದ ಆಗುಂಬೆ ಪರಿಸರ ಒಳಗೊಳಗೇ ಬದಲಾಗುತ್ತಿದೆ. ಎಲ್ಲಾ ಘಾಟಿ ರಸ್ತೆಗಳನ್ನು ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಬೇಕು ಎನ್ನುವ ಜನಪ್ರತಿನಿಧಿಗಳ ಯೋಚನೆಗಳು ಜಾಸ್ತಿಯಾಗುತ್ತಿದೆ. ಕೆಲವೊಂದು ಅಭಿವೃದ್ಧಿಗಳು ಅನಿವಾರ್ಯವಾದರೂ ಪರಿಸರವನ್ನು ಉಳಿಸಿ ಅಭಿವೃದ್ಧಿ ಮಾಡುವ ಗೋಜಿಗೆ ಯಾವ ಸರಕಾರಗಳೂ ಹೋಗುತ್ತಿಲ್ಲ. ಹೀಗಿರುವಾಗ “ಆಗುಂಬೆಗೆ ಸುರಂಗ ಮಾರ್ಗ” ಬೇಕು ಎನ್ನುವ ಬೇಡಿಕೆಯೊಂದನ್ನು ಸ್ಥಳೀಯ ಜನಪ್ರತಿನಿಧಿಗಳು ಹುಟ್ಟು ಹಾಕಿದ್ದಾರೆ. ಆಗುಂಬೆಯಲ್ಲಿ ದ್ವಿಪಥ ಸುರಂಗಮಾರ್ಗ, ದ್ವಿಪಥ ಹೆದ್ದಾರಿ ನಿರ್ಮಿಸಲು ಇದೀಗ ಕೇಂದ್ರ ಸರಕಾರ […]

Categories
Malnad information Malnad photos Thirthahalli

ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಜಾತ್ರೆ ಚಿತ್ರಗಳು – Thirthahalli Sri Marikamba Jathre Photos

ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸೌಂದರ್ಯದ ನಡುವೆ ಇರುವ ತೀರ್ಥಹಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನವು ಈ ಭಾಗದ ಭಕ್ತರ ಆರಾಧ್ಯ ದೈವವಾಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಈ ಸುಂದರ ದೇವಸ್ಥಾನವು ತಾಯಿ ಮಾರಿಕಾಂಬೆಯ ಶಕ್ತಿ ರೂಪಕ್ಕೆ ಸಾಕ್ಷಿಯಾಗಿದೆ. ಈ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಪ್ರತಿದಿನ ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಅದ್ಧೂರಿ ಮಾರಿಕಾಂಬಾ ಜಾತ್ರೆ. ಈ ಮಹೋತ್ಸವವು ಒಂಬತ್ತು ದಿನಗಳ ಕಾಲ […]

Categories
Info Malnad information Thirthahalli

Sri Marikamba Temple Thirthahalli – ಶ್ರೀ ಮಾರಿಕಾಂಬಾ ದೇವಸ್ಥಾನ, ತೀರ್ಥಹಳ್ಳಿ

ಸಹಜ ಸುಂದರ ಮಲೆನಾಡಿನ ಮಡಿಲಲ್ಲಿರುವ ತೀರ್ಥಹಳ್ಳಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಮ್ಮೆಯೇ ಶ್ರೀ ಮಾರಿಕಾಂಬಾ ದೇವಸ್ಥಾನ. ಭವ್ಯ ಇತಿಹಾಸವನ್ನು ಹೊಂದಿರುವ ಈ ಪುಣ್ಯಕ್ಷೇತ್ರವು ಜಿಲ್ಲೆಯ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ತನ್ನ ಭಕ್ತರ ದೃಢ ನಂಬಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ನೆಲೆಸಿರುವ ಜಗನ್ಮಾತೆ ಮಾರಿಕಾಂಬೆಯು ಸರ್ವ ಸಂಕಷ್ಟಗಳನ್ನು ಹರಿಸುವ ಮಹಾತಾಯಿಯಾಗಿ ಭಕ್ತರ ಮನದಲ್ಲಿ ನೆಲೆಸಿದ್ದಾಳೆ. ಈ ದೇವಸ್ಥಾನದ ವೈಭವವು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ’ಯ ಸಮಯದಲ್ಲಿ ಮುಗಿಲು ಮುಟ್ಟುತ್ತದೆ. ಮುಂಬರುವ 2026ರ ಫೆಬ್ರವರಿ 17 ರಿಂದ 25 ರವರೆಗೆ ಈ […]

Categories
Malnad information

ಬೆಂಗಳೂರಿನಲ್ಲಿ ಫೆ.1ರಂದು ಮಲೆನಾಡ ಸಂಗಮದ ಸಂಭ್ರಮ

ಸುವರ್ಣ ಮಲೆನಾಡು ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಫೆಬ್ರವರಿ 1 ರಂದು ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಅದ್ದೂರಿಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಕಂಪು ರಂಗೇಳಲಿದೆ. ಕ್ರೀಡಾಕೂಟ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮಲೆನಾಡಿನವರಿಗೋಸ್ಕರ ಆಯೋಜನೆಯಾಗಿದ್ದು ಇದೊಂದು ಮಲೆನಾಡಿಗರ ಸಂಭ್ರಮದ ಸಂಗಮವಾಗಲಿದೆ. ಗಣ್ಯರ ಸಮಾಗಮ: ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಕಾರ್ತಿಕೇಯ ಸಾರಗನ ಜೆಡ್ಡು ಶ್ರೀ ಶ್ರೀ ಶ್ರೀ ಅವಧೂತ ಯೋಗೇಂದ್ರ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. […]