Categories
Info Malnad information Thirthahalli

ಶ್ರೀ ಮಾರಿಕಾಂಬಾ ದೇವಸ್ಥಾನ, ತೀರ್ಥಹಳ್ಳಿ – Sri Marikamba Temple, Thirthahalli

ಸಹಜ ಸುಂದರ ಮಲೆನಾಡಿನ ಮಡಿಲಲ್ಲಿರುವ ತೀರ್ಥಹಳ್ಳಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಮ್ಮೆಯೇ ಶ್ರೀ ಮಾರಿಕಾಂಬಾ ದೇವಸ್ಥಾನ. ಭವ್ಯ ಇತಿಹಾಸವನ್ನು ಹೊಂದಿರುವ ಈ ಪುಣ್ಯಕ್ಷೇತ್ರವು ಜಿಲ್ಲೆಯ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ತನ್ನ ಭಕ್ತರ ದೃಢ ನಂಬಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ನೆಲೆಸಿರುವ ಜಗನ್ಮಾತೆ ಮಾರಿಕಾಂಬೆಯು ಸರ್ವ ಸಂಕಷ್ಟಗಳನ್ನು ಹರಿಸುವ ಮಹಾತಾಯಿಯಾಗಿ ಭಕ್ತರ ಮನದಲ್ಲಿ ನೆಲೆಸಿದ್ದಾಳೆ.

ಈ ದೇವಸ್ಥಾನದ ವೈಭವವು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ’ಯ ಸಮಯದಲ್ಲಿ ಮುಗಿಲು ಮುಟ್ಟುತ್ತದೆ. ಮುಂಬರುವ 2026ರ ಫೆಬ್ರವರಿ 17 ರಿಂದ 25 ರವರೆಗೆ ಈ ಸಂಭ್ರಮವು ವಿಜೃಂಭಣೆಯಿಂದ ನಡೆಯಲಿದ್ದು, ಒಂಬತ್ತು ದಿನಗಳ ಕಾಲ ಪಟ್ಟಣವೇ ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ದೇವಿಯ ಪೂಜೆ ಪುನಸ್ಕಾರದಿoದ ಹಿಡಿದು, ತುಂಗಾ ನದಿಯ ಪವಿತ್ರ ಸನ್ನಿಧಿಯಲ್ಲಿ ನಡೆಯುವ ವಿಸರ್ಜನೆಯವರೆಗೂ ನಡೆಯುವ ಪ್ರತಿ ವಿಧಿವಿಧಾನಗಳು ನೋಡುಗರ ಕಣ್ಮನ ಸೆಳೆಯುತ್ತವೆ.

ಮಲೆನಾಡಿನ ಸಂಪ್ರದಾಯದ ಸೊಗಡು, ವಿವಿಧ ಸಾಂಸ್ಕೃತಿಕ ಕಲೆಗಳ ಸಂಗಮವೇ ಈ ಜಾತ್ರೆ. ಶ್ರೀ ರಾಮೇಶ್ವರನ ದರ್ಶನದೊಂದಿಗೆ ಮಾರಿಕಾಂಬೆಯ ಕೃಪೆಗೆ ಪಾತ್ರರಾಗಲು ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ಇದು ಸುಸಮಯ. ನೀವು ಅಧ್ಯಾತ್ಮದ ಜೊತೆಗೆ ಮಲೆನಾಡಿನ ಅತಿಥ್ಯವನ್ನು ಸವಿಯಲು ಇಚ್ಛಿಸಿದರೆ, ತೀರ್ಥಹಳ್ಳಿಯ ಈ ಶಕ್ತಿ ದೇವತೆಯ ಸನ್ನಿಧಿಗೆ ಒಮ್ಮೆ ಭೇಟಿ ನೀಡಿ.

Advertisement
Advertisement Advertisement

Thirthahalli Sri Marikamba Temple Photos

ತೀರ್ಥಹಳ್ಳಿ ಶ್ರೀ ಮಾರಿಕಾಂಬಾ ಜಾತ್ರೆ ಚಿತ್ರಗಳು – Thirthahalli Sri Marikamba Jathre Photos

ಆಡಳಿತ ಮಂಡಳಿ

ಸದಸ್ಯರ ಹೆಸರುಹುದ್ದೆ
ಶ್ರೀ ನಾಗರಾಜ ಶೆಟ್ಟಿಅಧ್ಯಕ್ಷರು
ಶ್ರೀ ಮುಂಜುನಾಥ ಜೆ. ಶೆಟ್ಟಿಉಪಾಧ್ಯಕ್ಷ
ಶ್ರೀ ಜಿ. ಸತ್ಯನಾರಾಯಣಕಾರ್ಯದರ್ಶಿ
ಶ್ರೀ ಕೆ. ಸಿ. ಚಂದ್ರಶೇಖರ್ಸಹಕಾರ್ಯದರ್ಶಿ
ಶ್ರೀ ಟಿ. ಕೆ. ಜಯರಾಮ ಶೆಟ್ಟಿಖಜಾಂಚಿ
ಶ್ರೀ ಎಂ. ಎಸ್. ಧನಂಜಯಧರ್ಮದರ್ಶಕರು
ಶ್ರೀ ಎಂ. ವಿ. ಪ್ರಕಾಶಧರ್ಮದರ್ಶಕರು
ಶ್ರೀ ವಿ. ಶಿವಾನಂದಧರ್ಮದರ್ಶಕರು
ಶ್ರೀ ಬಸವರಾಜ ಶೆಟ್ಟಿಧರ್ಮದರ್ಶಕರು
ಶ್ರೀ ಕೆ. ಜಯರಾಮ ಶೆಟ್ಟಿಧರ್ಮದರ್ಶಕರು
ಶ್ರೀ ಬಾಳಕೃಷ್ಣ ರಾಮಚಂದ್ರಧರ್ಮದರ್ಶಕರು
ಶ್ರೀ ನಾಗಪ್ಪ ಆಚಾರ್ಧರ್ಮದರ್ಶಕರು
ಶ್ರೀ ಬಿ. ಆರ್. ರಾಮಚಂದ್ರ ಶೆಟ್ಟಿಧರ್ಮದರ್ಶಕರು
ಶ್ರೀ ನರಸಿಂಹ ಬಂಟಧರ್ಮದರ್ಶಕರು
ಶ್ರೀ ಬಿ. ನಾಗರಾಜಧರ್ಮದರ್ಶಕರು
ಶ್ರೀ ಎಂ. ಎಸ್. ಅನಿಲ್ ಭಟ್ಧರ್ಮದರ್ಶಕರು

ಸೇವಾ ವಿವರ

ಸೇವೆಯ ಹೆಸರುದರ (ರೂ.)
ಒಂದು ದಿನದ ವಿಶೇಷ ಸೇವೆ5005/- ರೂ.
ರಂಗಪೂಜೆ3505/- ರೂ.
ಸಹಸ್ರಲಂಕಾರ ಸೇವೆ1005/- ರೂ.
ಅಲಂಕಾರ ಸೇವೆ505/- ರೂ.
ತುಳಾಭಾರ300/- ರೂ.
ಸರ್ವಸೇವೆ200/- ರೂ.
ಹೋವನಪೂಜೆ150/- ರೂ.
ದರ್ಶನದಲ್ಲಿ ಕೈಂಕರ್ಯ100/- ರೂ.
ಗದ್ದುಗೆ ಪೂಜೆ150/- ರೂ.
ಹಣ್ಣು ಕಾಯಿ120/- ರೂ.
ನೀರೆ ಅಭಿಷೇಕ50/- ರೂ.
ಮಧು ತುಲಾಭಾರ30/- ರೂ.
ಕುಂಕುಮಾರ್ಚನೆ20/- ರೂ.
ಕಾಯಿ ಮಂತ್ರಪುಷ್ಪ10/- ರೂ.
ಮಂತ್ರಪುಷ್ಪ5/- ರೂ.

Sri Marikamba Temple Thirthahalli Photos

Read: Thirthahalli Sri Marikamba Devotional Song Lyrics

ಶ್ರೀ ಮಾರಿಕಾಂಬಾ ಜಾತ್ರೆ – 2026

ಹೊರಕಾಣಿಕೆ ಮಾರ್ಗಗಳು

ದಿನಾಂಕವಾರಹೊರಕಾಣಿಕೆ ನಡೆಯುವ ಸ್ಥಳಗಳು
17-02-2026ಮಂಗಳವಾರಶ್ರೀ ಕವಲೆದುರ್ಗ ಮಾರಿಕಾಂಬ ದೇವಸ್ಥಾನ, ಸಾಲೂರು, ಮಾರಿಗುಣಿ, ತೆಂಕಬೈಲು, ಜಿಗಣೆಗೂಡು, ಬೊಬ್ಬಿ, ರಂಜದಕಟ್ಟೆ, ಶಿವರಾಜಪುರ, ಮೀನುಗುಂದ
18-02-2026ಬುಧವಾರಅರಳುಸುರಳಿ, ನೊಣಬೂರು, ಆರಗ, ಆರಗ ಗೇಟ್, ಸರಳ, ಸುರಾನಿ, ಸಂಕದಹೊಳೆ
19-02-2026ಗುರುವಾರಬೆಜ್ಜವಳ್ಳಿ, ತಂದೂರು, ಮಂಡಗದ್ದೆ, ಕುಡಮಲ್ಲಿಗೆ, ಬಾಳಗಾರು, ಬೈನೇಸರ, ಹಾರೋಕೊಪ್ಪ, ದಬ್ಬಣಗದ್ದೆ, ಮಹಿಶಿ, ತಡ್ಕಿ, ಬದನೆಹಿತ್ತಲು, ಇಂದಾವರ, ಭಾರತಿಪುರ
20-02-2026ಶುಕ್ರವಾರಮೃಗಾವದೆ, ಸಾಲ್ಗಡಿ, ಶೇಡ್ಗಾರು, ಹೆದ್ದೂರು, ಕೂಳೂರು, ಮೇಳಿಗೆ, ಮೇಲಿನ ಕುರುವಳ್ಳಿ
21-02-2026ಶನಿವಾರದೇವಂಗಿ, ವಾಟಗಾರು, ಗಡಿಕಲ್ಲು, ಬಸವಾನಿ, ಹಾರೋಗಳಿಗೆ, ಹರಳಿಮಠ, ಹುಣಸವಳ್ಳಿ, ಮುನ್ನೂರು, ವಿಠಲನಗರ, ಕುರುವಳ್ಳಿ
22-02-2026ಭಾನುವಾರತೀರ್ಥಹಳ್ಳಿ ನಗರ, ಬುಕ್ಲಾಪುರ, ಹೊರಣಿಬೈಲು, ಬಾಳೆಬೈಲು, ಸಿದ್ದೇಶ್ವರ ಬಡಾವಣೆ, ಬೆಟ್ಟಮಕ್ಕಿ
23-02-2026ಸೋಮವಾರರಾಮಕೃಷ್ಣಪುರ, ತೀರ್ಥಮುತ್ತೂರು, ಕಮ್ಮರಡಿ, ಚೊಕ್ಕಡಬೈಲು, ಹೆಗ್ಗೋಡು, ಕೈಮರ, ನಾಲೂರು, ಆಗುಂಬೆ, ಗುಡ್ಡೇಕೆರೆ, ಕಲ್ಮನೆ, ಬೀಳಲುಕೊಪ್ಪ
24-02-2026ಮಂಗಳವಾರಹಾದಿಗಲ್ಲು, ಜಯಪುರ, ಕೋಣಂದೂರು, ಗುಡ್ಡೆಕೊಪ್ಪ, ಮೊದಲ, ಅರಳಾಪುರ, ಕಿತ್ತನಗದ್ದೆ, ಚಿಟ್ಟೆಬೈಲು

ಶ್ರೀ ಮಾರಿಕಾಂಬಾ ದೇವಸ್ಥಾನ, ತೀರ್ಥಹಳ್ಳಿ

ಶ್ರೀ ಮಾರಿಕಾಂಬಾ ಜಾತ್ರೆ – 2026

ಶ್ರೀ ಮಾರಿಕಾಂಬಾ ದೇವಿಯ ಕೃಪೆಯಿಂದ
ನಮ್ಮ ಊರಿನ ಹಾಗೂ ಸುತ್ತಮುತ್ತಲ ಗ್ರಾಮಗಳ
ಭಕ್ತಾದಿಗಳಿಗೆ ತಿಳಿಯಪಡಿಸುವುದೇನೆಂದರೆ

ದಿನಾಂಕ 17-02-2026 ರಿಂದ ಮಾರ್ಗಶಿರ ಮಾಸದ
ದಿನಾಂಕ 25-02-2026 ರವರೆಗೆ
ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು
ಅತಿ ವಿಜೃಂಭಣೆಯಿಂದ ನಡೆಯಲಿದೆ.

ಪ್ರತಿದಿನ “ಧಾರ್ಮಿಕ ಕಾರ್ಯಕ್ರಮ” ಮತ್ತು
ಸಂಜೆ “ಸಾಂಸ್ಕೃತಿಕ ಕಾರ್ಯಕ್ರಮ” ನಡೆಯಲಿದೆ.

ದಿನಾಂಕ 21-02-2026 ರಂದು ಶನಿವಾರ “ಚಂಡಿಕಾ ಹೋಮ”
ಮಧ್ಯಾಹ್ನ 12-00 ಕ್ಕೆ “ಮಹಾಪೂಜೆ, ತೀರ್ಥ ಪ್ರಸಾದ”
ಜಾತ್ರೆಯ ಅಂಗವಾಗಿ ಒಂಭತ್ತು ದಿನವೂ
“ಧಾರ್ಮಿಕ ಕಾರ್ಯಕ್ರಮಗಳು”
ಪ್ರತಿ ದಿನ ಮಧ್ಯಾಹ್ನ “ಅನ್ನ ಸಂತರ್ಪಣೆ” ನಡೆಯಲಿದೆ.

ಶ್ರೀದೇವಿಯ ದರ್ಶನಕ್ಕೆ ಎಲ್ಲರೂ
ಹಾರ್ದಿಕವಾಗಿ ಸ್ವಾಗತ.

Advertisement
Advertisement Advertisement
Advertisement
Advertisement Advertisement