ಈ ಮಾಲಯ Maalaya ಅನ್ನೋದು ಮಧ್ಯ ಮಳೆಗಾಲ ಸಮಯದಲ್ಲಿ ನಮ್ಮ ಮಲ್ನಾಡ್ Malnad ಬದಿ ಆಚರಿಸುವ ಒಂದು ರೀತಿಯ ಹಬ್ಬ ಅಂದ್ರು ತಪ್ಪಾಗಲ್ಲ, ಈ ಮಾಲಯದಲ್ಲಿ ನಮ್ಮ ಪಿತೃಗಳಿಗೆ ಅಂದ್ರೆ ನಮ್ಮ ಪೂರ್ವಜರಿಗೆ ಅನ್ನ ನೀರು ಕೊಡಕ್ ಅಂತನೇ ಒಂದು ವಿಶೇಷ ದಿನವಾದ ಆಚರಿಸುತ್ತೇವೆ, ನಾನ್ ಚಿಕ್ಕವ್ನನ್ ಇದ್ದಾಗ “ಯಾಕ್ ನಾವು ಮಾಲಯದಲ್ಲೇ ಪಿತೃಗಳಿಗೆ ಊಟ ಹಾಕ್ತಿವಿ, ಮಾಲಯ ಅಲ್ದೆ ಬೇರೆ ದಿನ ಪಾಪ ಅವ್ರು ಹಸ್ಕಂಡೆ ಇರುತ್ತಾರೆ” ಈ ತರ ಅದೇನೆನು ತಲೆ ಬುಡ ಇಲ್ದಿರೋ ಯೋಚನೆಗಳು ಮೂಡುತಿದ್ವು, ಆಗ ನಮ್ಮಪ್ಪ ನನಗೆ ಹೇಳಿದೆನಂದ್ರೆ “ಹಂಗಲ್ಲ ಮರೆಯಾ.. ಈ ಭಾದ್ರುಪದ Bhadrupada ಹುಣ್ಣಿಮೆ ಮಾರ್ನೆ ದಿನ್ದಿಂದ ಮಾಲಯ ಅಮಾವಾಸ್ಯೆ ದಿಂದವರೆಗೂ ಸತ್ತು ಸ್ವರ್ಗ Swarga ಸೇರಿರೋ ನಮ್ಮ ಅಜ್ಜ ಅಜೀರ್ನೆಲ್ಲ(ಪೂರ್ವಜರು/ಪಿತೃಗಳು) ದೈವಾನ್ ದೇವತೆಗಳು ಭೂಮಿಗೆ ಕಳಿಸಿರುತ್ತಾರೆ, ಅವ್ರ್ ನಮ್ಮುನ್ ನೋಡಕ್ ಭೂಮಿಗೆ ಬಂದಿದ್ ಖುಷಿಗೆ ನಾವು ಅವರಿಗೆ ಸಂತೃಪ್ತಿ ಮಾಡಬೇಕಲ್ಲ, ಹಂಗಾಗಿ ಮಾಲಯ ಮಾಡದ್ ಮಾರಾಯ” ಅಂತಿದ್ರು, ಈ ಒಂದು ಆಚರಣೆನ ಮಹಲಾಯ ಅಮಾವಾಸ್ಯೆ Amavasye, ಪಿತೃಪಕ್ಷದ ಸರ್ವ ಪಿತ್ರಿ ಅಮಾವಾಸ್ಯೆ ಅಂತನು ಕರೆಯುತ್ತಾರೆ. ಈ ದಿನ, ಪೂರ್ವಜರಿಗೆ ಆಹಾರವನ್ನು ದಾನ ಮಾಡುವುದು ಮತ್ತು ತರ್ಪಣ ಮಾಡುವುದು ಇತ್ಯಾದಿಗಳಿಂದ ಸಂತೋಷಪಡುತ್ತಾರೆ. ಹಾಗೆ ಮನೆಗೆ ಅತಿಥಿಗಳನ್ನು ಕರೆಯಿಸಿ ಅವರಿಗೆ ಉಪಚಾರ ಮಾಡುತ್ತಾರೆ..
ಧೋ…. ಎಂದು ಸುರಿಯುವ ಮಳೆ, ಮಳೆಯ ರುದ್ರನರ್ತನಕ್ಕೆ ಬೆಚ್ಚಿ ಬೆರಗಾಗಿರುವ ಮಳೆನಾಡು(ಮಲೆನಾಡು), ಕತ್ತಲೆಯ ಸಮಯ, ಮಲೆನಾಡಿನ ಮನೆ, ಆ ಮನೆಯಲ್ಲಿ ಸಂಭ್ರಮದ ವಾತಾವರಣ, ಆ ಮನೆ ಹೆಂಗಸರೆಲ್ಲ ಮಧ್ಯಾಹ್ನನೇ ಮನೆ ಅಡಿಗೆ ಕೋಣೆ ಸೇರಿಕೊಂಡು ಬಗೆ ಬಗೆ ಅಡಿಗೆ ಮಾಡಿ ಹಾಕುತ್ತಿದ್ದರೆ ಮನೆ ಗಂಡಸರೆಲ್ಲ ಏನೋ ಒಂಥರಾ ಗಡಿಬಿಡಿಲೇ ಓಡಾಡ್ಕೊಂಡು ಆ ಕೆಲಸ ಆಗೇದ ಈ ಕೆಲಸ ಆಗೇದ, ಅವರು ಬಂದ್ರಾ ಇವ್ರ್ ಬಂದ್ರಾ, ಅದು ಇದು ಅನ್ಕೊಂಡು ಗಡಿಬಿಡಿಯ ಸಂಭ್ರಮದಲ್ಲೇ ಮನೆ ತುಂಬಾ ಓಡಾಡ್ತಿದ್ರೆ, ಮನೆ ಮಕ್ಳು ಊಟ ಎಷ್ಟೊತ್ತಿಗೆ ಹಾಕ್ತಾರೆ ಏನ್ ಅಡಿಗೆ ಮಾಡ್ಯಾರೆ ಅನ್ಕೊಂಡಿರುವಾಗ ಒಂದು ಕಡೆ ನೋಡಿದರೆ ಮಳೆಲಿ ನೆನೆದ್ಕೊಂಡು ಕಾಲ್ ತುಂಬಾ ಇಬ್ಳಾ ಹಚ್ಕೊಂಡು ಕೈಯಲ್ ಒಂದ್ ಬ್ಯಾಟರಿ ಹಿಡ್ಕೊಂಡು ಒಬ್ಬೊಬ್ರೆ ನೆಂಟ್ರು ಆ ಮನೆಗೆ ಬರುತ್ತಿರುತ್ತಾರೆ, ಮನೆಯವ್ರು ಕಾಲ್ ತೊಳ್ಕೊಣಕ್ಕೆ ನೀರು ಕೊಟ್ಟು ಅವರನ್ನು ವಿಚಾರ್ಸ್ಕೊಂಡು, ಕೊಲೆಗಿಟ್ಟಿರೋ ಮಣೆ ಮುಂದಿರೋ ಬಳ್ಳೆಗೆ (ಬಾಳೆದೆಲೆ) ಧೂಪ ಹಾಕ್ಕೊಳ್ಳಕ್ಕೆ ಕಳಿಸ್ತಾರೆ, ಧೂಪ ಹಾಕ್ಕೋಣೋರೆಲ್ಲಾ ಹಾಕೊಂಡಾದ್ಮೇಲೆ ಕೊಲೆಗಿಟ್ಟಿರೋ ಬಳ್ಳೆನಾ ಹೊರಗಿಟ್ಟು ಬಂದು ಎಲ್ಲರೂ ಮನಿಗೆ ಬಂದವರಿಗೆಲ್ಲ ಊಟ ಇಕಿ ಮನೆಯವರೆಲ್ಲ ಖುಷಿ ಪಡುತ್ತಾರೆ, ಸಸ್ಯಹಾರಿಗಳು ಸಸ್ಯಹಾರಿ ಅಡುಗೆ ಮಾಡುತ್ತಾರೆ ಮಾಂಸಹಾರಿಗಳು ಮಾಂಸಹಾರಿ ಅಡಿಗೆ ಮಾಡ್ತಾರೆ.
ಈ ಮಾಲಯವನ್ನು ಕೆಲವು ಕಡೆ ಮದ್ಯಾಹ್ನ ಹಾಗೂ ಕೆಲವು ಕಡೆ ರಾತ್ರಿ ಆಚರಿಸುತ್ತಾರೆ..

