Categories
Info

ಸಹ್ಯಾದ್ರಿ ಸಂಘದ 21ನೆಯ ವಾರ್ಷಿಕ ಕ್ರೀಡಾಕೂಟ ಭಾನುವಾರ ಸುಂಕದ ಕಟ್ಟೆಯಲ್ಲಿ

ಹೋಗುವೆನು ನಾ
ಹೋಗುವೆನು ನಾ… ನನ್ನ ಒಲುಮೆಯ ಗೂಡಿಗೆ.
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ.
ಬೇಸರವಾಗಿದೆ ಬಯಲು
ಹೋಗುವೆ ಮಲೆಯ, ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ.!

ಎಂಬ ರಸಋಷಿಯ ಸಾಲುಗಳಂತೆ ಸಿಲಿಕಾನ್ ಸಿಟಿಯಲ್ಲಿರುವ ಮಲೆನಾಡಿಗರನ್ನು ಕ್ರೀಡೆ, ಕಲೆ, ಸಾಹಿತ್ಯ, ಚರ್ಚೆ, ಸಂವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಒಂದುಗೂಡಿಸುವ ವೇದಿಕೆಯೇ ಸಹ್ಯಾದ್ರಿ ಸಂಘ.

ಈ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆಯಾದ ಸಹ್ಯಾದ್ರಿ ಸಂಘವು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯ ವಾಕ್ಯವನ್ನು ಹೊತ್ತು ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ ವಾರ್ಷಿಕ ಕ್ರೀಡಾಕೂಟವನ್ನು 2025 ಜ.5ರ ಭಾನುವಾರ ಬೆಳಗ್ಗೆ 10.00 ರಿಂದ ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ಆಯೋಜಿಸಿದೆ.

ನೀವು ಬನ್ನಿ… ನಿಮ್ಮವರನ್ನು ಕರೆತನ್ನಿ. ಬೆಂಗಳೂರಿನಲ್ಲಿರುವ ಮಲೆನಾಡಿಗರು ಒಂದೆಡೆ ಸೇರೋಣ..ಆಡೋಣ..ಕಲೆಯೋಣ.. ಸವಿಯೋಣ..ಸಂಭ್ರಮಿಸೋಣ.. ಎನ್ನುವುದೇ ಸಂಘಟಕರ ಆಶಯ.

Advertisement
Advertisement Advertisement

ಎಲ್ಲರೂ ಜೊತೆಯಾಗೋಣ.

ನಿಮ್ಮ ನಿರೀಕ್ಷೆಯಲ್ಲಿ…
ಜಿ. ಎ ಪುರುಷೋತ್ತಮ ಗೌಡ
ಗೌರವ ಅಧ್ಯಕ್ಷರು
ಹೆಚ್. ಸಿ. ಜಯಪ್ರಕಾಶ್
ಕಾರ್ಯದರ್ಶಿ

ಕನ್ನಡ ಚಲನ ಚಿತ್ರರಂಗದಲ್ಲಿ ಅಪ್ಪು ಎಂದೇ ಪ್ರಸಿದ್ಧಿರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು 1999 ರ ಸಹ್ಯಾದ್ರಿ ಕ್ರೀಡಾಕೂಟದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
Photo Gallery :
Advertisement
Advertisement Advertisement
Advertisement
Advertisement Advertisement