Categories
Info Malnad information

ಸಹ್ಯಾದ್ರಿ ಸಂಘ ಬೆಂಗಳೂರು ವತಿಯಿಂದ ಜ.18 ರಂದು 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ

  • ಸಹ್ಯಾದ್ರಿ ಸಂಘ ಬೆಂಗಳೂರು ವತಿಯಿಂದ ಜ.18 ರಂದು 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ
  • ಮಲೆನಾಡಿಗರಿಂದ ಮಲೆನಾಡಿಗರಿಗೋಸ್ಕರ ಕ್ರೀಡಾಕೂಟ
  • ಕ್ರೀಡಾ ಚೈತನ್ಯ ತುಂಬಲು ಬಗೆಬಗೆಯ ಸ್ಪರ್ಧೆಗಳು
22nd Annual Sports Meet organized by Sahyadri Sangha, Bangalore

ಬೆಂಗಳೂರು: ಬೆಂಗಳೂರಿನ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ “ಸಹ್ಯಾದ್ರಿ ಸಂಘ ಬೆಂಗಳೂರು” ಇದರ 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ, ದಿ. ಶ್ರೀ. ಹೆಚ್.ಟಿ. ರತ್ನಾಕರ್ ಇವರ ಸ್ಮರಣಾರ್ಥ, ಜನವರಿ 18 ರಂದು ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ, ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಹ್ಯಾದ್ರಿ ಸಂಘ ಬೆಂಗಳೂರು ಇದರ ಅಧ್ಯಕ್ಷರು ಜಿ.ಎ.ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಸಾಯಂಕಾಲ 6 ಗಂಟೆಗೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ, ಉಪಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಜಿ.ಎಸ್ ಶ್ರೀಧರ್, ರಾಜ್ಯ ಒಕ್ಕಲಿಗರ ಸಂಘ, ಬೆಂಗಳೂರು, ಕಾಮಗಾರಿ ಸಮಿತಿ, ಶಿವಮೊಗ್ಗ ಜಿಲ್ಲೆ ಇಲ್ಲಿನ ಅಧ್ಯಕ್ಷರಾದ ಧರ್ಮೇಶ್ ಸಿರಿಬೈಲ್, ಅಡಿಷನಲ್ ಸೂಪರಿಟೆಂಡೆಂಟ್ ಆಫ್ ಪೋಲೀಸ್ ರಾಮನಗರ, ಇಲ್ಲಿನ ರಾಜೇಂದ್ರ ತೂದೂರು. ಖ್ಯಾತ ಚಲನಚಿತ್ರನಟಿ ಅಮೂಲ್ಯ, ಉದ್ಯಮಿಗಳಾದ ಜಗದೀಶ್ ಆರ್ ಚಂದ್ರ, ಭಾಗವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ಸಹ್ಯಾದ್ರಿ ಸಂಘ ಬೆಂಗಳೂರು ಇದರ ಅಧ್ಯಕ್ಷರು ಜಿ.ಎ.ಪುರುಷೋತ್ತಮ ಗೌಡ ವಹಿಸಲಿದ್ದಾರೆ.

ಯಾವೆಲ್ಲಾ ಕ್ರೀಡಾಕೂಟಗಳು:

5 ವರ್ಷದವರೆಗಿನ ಗಂಡು ಮಕ್ಕಳಿಗೆ ಬೌಲಿಂಗ್ ಫ್ರಾಗ್ ಜಂಪ್, ಬಕೆಟ್ ಒಳಗೆ ಚೆಂಡು ಹಾಕುವುದು, 5 ವರ್ಷದವರೆಗಿನ ಹೆಣ್ಣು ಮಕ್ಕಳಿಗೆ ಬೌಲಿಂಗ್ ಫ್ರಾಗ್ ಜಂಪ್ ಬಕೆಟ್ ಒಳಗೆ ಚೆಂಡು ಹಾಕುವುದು, 6 ರಿಂದ 10 ವರ್ಷದವರೆಗಿನ ಗಂಡು ಮಕ್ಕಳಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವ ಸರ್ಧೆ, ಬಕೆಟ್ ಒಳಗೆ ಚೆಂಡು ಹಾಕುವುದು 50 ಮೀ. ಓಟದ ಸ್ಪರ್ಧೆ, 6 ರಿಂದ 10 ವರ್ಷದವರೆಗಿನ ಹೆಣ್ಣು ಮಕ್ಕಳಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವ ಸರ್ಧೆ, ಬಕೆಟ್ ಒಳಗೆ ಚೆಂಡು ಹಾಕುವುದು 50 ಮೀ. ಓಟದ ಸ್ಪರ್ಧೆ, 11 ರಿಂದ 15 ವರ್ಷದವರೆಗಿನ ಗಂಡು ಮಕ್ಕಳಿಗೆ 100 ಮೀ. ಓಟದ ಸ್ಪರ್ಧೆ, 200 ಮೀ. ಓಟದ ಸ್ಪರ್ಧೆ, 11 ರಿಂದ 15 ವರ್ಷದವರೆಗಿನ ಹೆಣ್ಣು ಮಕ್ಕಳಿಗೆ 100 ಕಿ.ಮೀ ಓಟದ ಸ್ಪರ್ದೆ, 200 ಮೀ ಓಟದ ಸ್ಪರ್ದೆ, 16-25 ವರ್ಷದವರೆಗಿನ ಗಂಡು ಮಕ್ಕಳಿಗೆ 200 ಮೀ. ಓಟದ ಸ್ಪರ್ಧೆ, 400 ಮೀ. ಓಟದ ಸ್ಪರ್ಧೆ, 16-25 ವರ್ಷದವರೆಗಿನ ಹೆಣ್ಣು ಮಕ್ಕಳಿಗೆ 100ಮೀ. ಓಟದ ಸ್ಪರ್ಧೆ, 200 ಮೀ. ಓಟದ ಸ್ಪರ್ಧೆ, 26 ರಿಂದ 35 ವರ್ಷದವರೆಗಿನ ಮಹಿಳೆಯರಿಗೆ 100 ಮೀ. ಓಟದ ಸ್ಪರ್ಧೆ, 200 ಮೀ. ಓಟದ ಸ್ಪರ್ಧೆ 26 ರಿಂದ 35 ವರ್ಷದವರೆಗಿನ ಪುರುಷರಿಗೆ 100 ಮೀ. ಓಟದ ಸ್ಪರ್ಧೆ, 200 ಮೀ. ಓಟದ ಸ್ಪರ್ಧೆ ನಡೆಯಲಿದೆ.

ವಿಶೇಷ ಕ್ರೀಡೆಗಳೂ ಇವೆ:

ಕಬಡ್ಡಿ (ಪುರುಷರಿಗೆ), ವಾಲಿಬಾಲ್ (ಪುರುಷರಿಗೆ) ಥ್ರೋಬಾಲ್ (ಮಹಿಳೆಯರಿಗೆ) ಪಂದ್ಯಾಟಗಳು ನಡೆಯಲಿದ್ದು ವಿಜೇತರಿಗೆ ವಿಶೇ‍‍‍‍‍‍‍‍ಷ ನಗದು ಬಹುಮಾನ ಕಾದಿದೆ. ಅಲ್ಲದೇ ವಿಶೇಷ ವಿಭಾಗದಲ್ಲಿ ಮನರಂಜನಾ ಸ್ಪರ್ಧೆಗಳೂ ಇವೆ.

Advertisement
Advertisement Advertisement

ಕೂಡಲೇ ನೊಂದಾಯಿಸಿ:

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಯಸುವವರು ತಮ್ಮ ತಂಡದಲ್ಲಿ ಮಲೆನಾಡಿನ ಸದಸ್ಯರನ್ನಷ್ಟೇ ಸೇರಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:

  • ಶಶಿಕಾಂತ್ ಅತ್ತಿಕೊಡಿಗೆ, ತೀರ್ಥಹಳ್ಳಿ- 9900064594,
  • ಪ್ರಸಾದ್‌ ಕೆ.ಎಲ್ – 9845323526
Advertisement
Advertisement Advertisement
Advertisement
Advertisement Advertisement