ಕಾಡು ಮುತ್ತು ಕೊಡುತಲಿರುವಸೊಬಗವೀಡು ನನ್ನ ಮನೆ.– ಕುವೆಂಪು ಕುವೆಂಪು ಅವರ ಪೂರ್ವಜರು ಕಟ್ಟಿಸಿದ್ದ 200 ವರ್ಷಗಳ ಹಳೆಯ ತೊಟ್ಟಿಮನೆಯನ್ನು ನವೀಕರಿಸಲಾಗಿದೆ. ಎರಡು ಮಹಡಿಗಳು, ಮಧ್ಯ ಒಳ ಅಂಗಳ ಇರುವ ಈ ಮನೆ, ಆ ಕಾಲದ ಮಲೆನಾಡಿನ ಜಮೀನ್ದಾರರ ಮನೆಯ ಮಾದರಿಯಾಗಿದೆ. ಭೀಮಗಾತ್ರದ ಮುಂಡಿಗೆಗಳು ಕೆತ್ತನೆಕೆಲಸದಿಂದ ಕೂಡಿದ್ದು, ಮಲೆನಾಡಿನ ಪ್ರಾಚೀನ ಕಾಷ್ಠಶಿಲ್ಪ ವೈಭವವನ್ನು ನೆನಪಿಸುವಂತಿವೆ. ಕುವೆಂಪು ಅವರು ಕುಪ್ಪಳಿಯಲ್ಲಿದ್ದಾಗ ಬಳಸುತ್ತಿದ್ದ ಅಧ್ಯಯನ ಕೊಠಡಿ, ಅವರು ಸೂರ್ಯೋದಯವನ್ನು ವೀಕ್ಷಿಸುತ್ತಿದ್ದ ಪೂರ್ವದಿಕ್ಕಿಗೆ ತೆರೆದುಕೊಂಡಿರುವ ಮಹಡಿ, ‘ಮನೆಯ ಶಾಲೆ’ ನಡೆಯುತ್ತಿದ್ದ ಸ್ಥಳ, ‘ಅಜ್ಜಯ್ಯನ […]
