ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ ಉತ್ತರ ಹೇಳಬೇಕೇ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನನ್ನ ಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ
Category: Quotes
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪು
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?– ಕುವೆಂಪು ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.– ಕುವೆಂಪು ಸೃಷ್ಟಿಯ ವ್ಯೂಹದಲ್ಲಿ ಮರದ ತುದಿಯ ಹೂವೆಷ್ಟು ಮುಖ್ಯವೊ ಗೊಬ್ಬರವೂ ಅಷ್ಟೇ ಮುಖ್ಯ.– ಕುವೆಂಪು ಹಸಿದವರಿಗೆ ಬೇಕಾದುದು ಅನ್ನ; ಮತ, ತತ್ವ ಮತ್ತು ಕಲೆಗಳ ಕನಸಿನುಣಿಸಲ್ಲ.– ಕುವೆಂಪು
ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ.– ಕುವೆಂಪು ಹಕ್ಕಿಗಳ ಸಂಗದಲ್ಲಿ ರೆಕ್ಕೆ ಮೂಡುವುದೆನಗೆಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ– ಕುವೆಂಪು ಮನುಜ ಮತ, ವಿಶ್ವ ಪಥ, ವಿಜ್ಞಾನ ದೃಷ್ಟಿ, ವಿಚಾರ ಬುದ್ದಿ – ಇವು ನಮ್ಮ ಹೃದಯದ ನಿತ್ಯಮಂತ್ರಗಳಾಗಬೇಕು.– ಕುವೆಂಪು ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.– ಕುವೆಂಪು ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ (The answer is silent for a meaningless question)– ಕುವೆಂಪು ಓ ನನ್ನ ಚೇತನ, […]
ಕನ್ನಡಕೆ ಹೋರಾಡು, ಕನ್ನಡದ ಕಂದಕನ್ನಡವ ಕಾಪಾಡು, ನನ್ನ ಆನಂದಾಜೋಗುಳದ ಹರಕೆಯಿದು ಮರೆಯದಿರು, ಚಿನ್ನಮರೆತೆಯಾದರೆ ಅಯ್ಯೊ ಮರೆತಂತೆ ನನ್ನ– ಕುವೆಂಪು ಜಯ ಭಾರತ ಜನನಿಯ ತನುಜಾತೆಜಯ ಹೇ ಕರ್ನಾಟಕ ಮಾತೆ’– ಕುವೆಂಪು ಕನ್ನಡಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದಾ– ಕುವೆಂಪು ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು– ಕುವೆಂಪು ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ.– ಕುವೆಂಪು ಬಾರಿಸು […]
Swathi Rajesh Quotes about malnad
ಈ ಸಲ ಕಾರ್ತಿಕ ಮಾಸದ ಕೊನೆಯಲ್ಲಿಕೊಟ್ಟೆಮಣೆಗೆ ಕಾಲು ಕೊಟ್ಟುಕೊನೆ ತೆಗಿಬೇಕಂದ್ರೆ ಕತ್ತಲೆಗಟ್ಟೋಮಳೆಯ ಕಡೆಗಣಿಸಿ ಔಷಧಿ ಹೊಡೀಬೇಕಲ್ಲಾ….. ಮಳೆಯ ಚೇಷ್ಟೆಯ ನಡುವೆಯೂ ನಮ್ಮ ಇಸ್ಕೂಲಿನ ಗೇಟನ್ನು ಕಂಡಾಗ ಸವಾರಿ ಹೊರಟ ದಾರಿ ಒಮ್ಮೆಲೆ ಮರೆತಂದಿದೆ …… ಹಸಿರ ಉಸಿರಲಿ ರಾಮನ ಮಂಟಪ……….ತುಂಗೆಯ ಶ್ರೇಯಕ್ಕೆ ಬಿಳಿಗೆಂಪು ಕೇಂದ್ರವಿದು……..ಕಂಡು ಕಣ್ತುಂಬಿಕೊಂಡಾಗ ಸೊಗಸುಗಳ ಹೂರಣವಿದು……… ಹಸಿರ ಚಾದರ ಹೊದ್ದ ಪುಟ್ಟ ಗೂಡಲ್ಲಿ ಕೂತು ಮಳೆನಾಡ ಮಳೆಹನಿಗಳ ಎಣಿಸುತ್ತಿರುವಂತೆ .. ಹೊಸ ಪದಮುತ್ತುಗಳ ಪೋಣಿಸುವ ಆಶಾಭಾವದಿ ಹನಿಗಳಲ್ಲಿ ಮಿಂದೇಳುತ್ತಿದ್ದಾರಲ್ಲ ನಮ್ಮ ಕನ್ನಡದ ಕವಿಸ್ವರ್ಣ ಮುಕುಟ […]
Madan Kolavadi Quotes about malenadu
ಮತ್ತೆ ಶುರುವಾಗಿದೆ ಮುಂಗಾರು…ಕುಡಿಯೊಡೆಯುತಿವೆ ಹಸುರೆಲೆ ಚಿಗುರು…ಮಲೆನಾಡಿನ ಮಳೆಗಾಲದ ಚಂದವ…ಬಣ್ಣಿಸಲು ಅಸಾಧ್ಯವೇ ಸರಿ….ಒಂದೆಡೆ ಇಂಬಳ ಜೀರುಂಡೆಗಳ ಕಿರುಕುಳವಾದರೆ…ಇನ್ನೊಂದೆಡೆ ಮನೆಯಲಿ ಹಲಸಿನ ದೋಸೆ ಮುಳುಕಗಳ ಪರಿಮಳ…ಜಡಿ ಮಳೆಗೆ ವಿದ್ಯುತ್ ಇಲ್ಲವಾದರೆಸೀಮೆ ಎಣ್ಣೆ ದೀಪಗಳ ನರ್ತನ ಒಂದೆಡೆಯಾದರೆ…ಮಳೆಯ ತಂಡಿಗೆ ಮುದುಡಿ ಕಂಬಳಿ ಹೊದ್ದು ಕೂರುವ ಹಿರಿಯರು ಇನ್ನೊಂದೆಡೆ…ಇದುವೇ ಮಳೆಯ ಸ್ವರ್ಗ ಮಲೆನಾಡಿನ ಸಾಮಾನ್ಯ ಚಿತ್ರಣ… ಮುಂಗಾರಿನ ಆಗಮನಕ್ಕೆ ದರಗೆಲ್ಲ ಕೊಳೆತಿತ್ತು…ಯಾವುದೋ ಒಂದು ಮನಸಿಗೆ ಗ್ರಹಿಸಲಾಗದ ಪರಿಮಳ ಅಡವಿಯಲ್ಲಾ ಮುತ್ತಿತ್ತು…ಕೊಳೆತ ದರಗಿನ ಅಡಿಯಲ್ಲಿ ಮಿಜುಗುಡುತಿತ್ತು ಇಂಬಳಗಳ ಗುಂಪು…ರಕ್ತವೋ ಎಲೆಗಳ ಪತ್ರವೋ ಹೊಟ್ಟೆಗೆ ಸಿಕ್ಕರೆ […]
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ– ಕುವೆಂಪು ಕೋಟಿ ಧನವಿದ್ದರೂ ಪಟ್ಟಣವು ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು– ಕುವೆಂಪು ಮಲೆನಾಡೆಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ಪರ್ಣಶಾಲೆ, ಅರಣ್ಯರಮಣಿಯ ವಿಲಾಸಕ್ಷೇತ್ರ.– ಕುವೆಂಪು ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ.– ಕುವೆಂಪು ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು ಕಟ್ಟುವುದಕ್ಕೆ ನಮಗೆ ದುಡ್ಡು ಇದೆ. ಆದರೆ ಹಳ್ಳಿಗಳಲ್ಲಿ ಬಾವಿ ತೋಡಲು ಹಣವಿಲ್ಲ.– ಕುವೆಂಪು
ನನಗಂತೂ ಕಾಡುಪ್ರಾಣಿಗಳ ಹೆದರಿಕೆ ಕೊಂಚವೂ ಇರಲಿಲ್ಲ. ಅಲ್ಲದೆ ಹೆದರುವುದರಿಂದ ಪ್ರಯೋಜನವೂ ಇರಲಿಲ್ಲ.– ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಮಳೆಗಾಗಿ ಕಾಡು ಬೇಕೇಬೇಕು ಅನ್ನೋ ಜನ ನಮ್ಮ ಒತ್ತುವರಿ ಮಾತ್ರ ಹಾಗೇ ಇರಲಿ ಎಂದು ಬಯಸುತ್ತಾರೆ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯಾರಿಗೆ ತಾವು ಇದ್ದಲ್ಲೇ ಎಲ್ಲವೂ ಕುತೂಹಲಕರವಾಗಿ ಇರುವುದಿಲ್ಲವೋ ಅವರು ಈ ಭೂಮಂಡಲದ ಮೇಲೆ ಎಲ್ಲಿ ಟೂರ್ ಹೋದರೂ, ಇಂಟರೆಸ್ಟಿಂಗ್ ಆಗಿ ಇರೋದಿಕ್ಕೆ ಆಗಲ್ಲ.– ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನನಗೂ […]