ಹಸಿರಿನ ಮಧ್ಯೆ ನೆನೆದು ಸ್ವರ್ಗದಂತೆ ಕಾಣಿಸುತ್ತ, ಹಸಿರ ಸೌಂದರ್ಯದ ನಡುವೆ ಕಾಡುತ್ತ ಕೈಬೀಸಿ ಕರೆಯುವ ನಮ್ಮ ಕರುನಾಡಿನ ಸೊಬಗಿನ ಕೋಟೆ ಕವಲೇ ದುರ್ಗ. ಇಲ್ಲಿನ ಹಸಿರನ್ನು ಕೋಟೆಯ ಐತಿಹಾಸಿಕ ಚೆಂದವನ್ನು ಮಳೆಗಾಲದಲ್ಲಿ ನೋಡುವುದು ಸುಂದರ ಅನುಭೂತಿ. ಕೆಳದಿ ಸಂಸ್ಥಾನದ ಕೊನೆಯ ರಾಜಧಾನಿಯಾಗಿದ್ದ ಈ ಕೋಟೆಯನ್ನು ಮಲೆನಾಡಿನ ಮಳೆಕಾಡಿನಲ್ಲಿ ಮಳೆಗೆ ತೊಯ್ದು ತೊಪ್ಪೆಯಾಗಿ ನೋಡುವ ಖುಷಿಯೇ ಬೇರೆ. ಏಳು ಸುತ್ತಿನ ಕೋಟೆ ಭುವನಗಿರಿಯ ದುರ್ಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ Thirthahalli ಸುಮಾರು 18 ಕಿ ಮಿ ದೂರದಲ್ಲಿರುವ ಈ […]
