Categories
Culture Lyrics Malnad information Quotes

ಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು..!

ಮೂಡಣ ಪಡುವಣ ನಿತ್ಯವೂ ನೂತನ
ಸಗ್ಗದ ಬಾಗಿಲ ಹಸಿರ ಬನ
ಹೃದಯದ ಸಿರಿತನ ನಮ್ಮಯ ಹಿರಿತನ
ಪ್ರಕೃತಿ ಕೊಟ್ಟ ವರದಾನ
ಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು
ಹೆಮ್ಮೆಯಲಿ ಹೇಳು ಮಲೆನಾಡಿಗ ನಾನೆಂದು

ಮನದ ಒಳಗಿನ ಹರಿವು ನೀ
ನುಡಿಯ ಸಿರಿಯ ಗುರುವು ನೀ
ಓ ತುಂಗೆ ತಾಯೇ…
ಮಳೆಯ ಹನಿಯ ಜನನಿ ನೀ
ಮೌನದಿ ಬರೆಸೊ ಕವನ ನೀ
ಸಹ್ಯಾದ್ರಿ ತಾಯೇ..
ಎದೆ ಬಾರ ಇಳಿಸೋ ಬೃಂದಾವನ
ನೆಮ್ಮದಿಯ ದಾರಿಗೆ ಆಮಂತ್ರಣ
ನನ್ನೂರು…

ಸತತ ಲಹರಿ ಮನದಲಿ ನುಡಿದಿದೆ
ಖಗಗಳ ವಾದ್ಯದಲಿ ಹಗಲು ಇರುಳು
ಬೆಸುಗೆಯ ಹಾಡಿವೆ ತಂಗಾಳಿ ನಾದದಲಿ
ಬೊಗಸೆ ಕೇಳಲು ಆಗಸ ನೀಡುವ ಹಸಿರಿನವನ ರಾಣಿ
ಹಸಿದು ಬರುವ ಬೆವರಿನ ಹನಿಯ
ಸಲಹೊ ಮಳೆಯ ಹನಿ

Advertisement
Advertisement Advertisement

ಅಡೆತಡೆಯ ಹಂಗಿಲ್ಲದ ಸಿಹಿಗಾಳಿ ರಂಗಾಗಿದೆ
ಗಿರಿ ಜಾರಿಯು ಗುನುಗುತ್ತಿವೆ
ಗಡಿ ಇರದ ಸೊಗಸೆಲ್ಲವ
ಮಳೆ ಹನಿಯೇ ಇಲ್ಲಿ ಒಡವೆಯಾಗಿದೆ…
ಇ ನೆಲವ ಸಿಂಗರಿಸಿ ನಲಿದಿದೆ

ಸತತ ಲಹರಿ ಮನದಲಿ ನುಡಿದಿದೆ
ಖಗಗಳ ವಾದ್ಯದಲಿ ಹಗಲು ಇರುಳು
ಬೆಸುಗೆಯ ಹಾಡಿವೆ ತಂಗಾಳಿ ನಾದದಲಿ
ಬೊಗಸೆ ಕೇಳಲು ಆಗಸ ನೀಡುವ ಹಸಿರಿನವನ ರಾಣಿ
ಹಸಿದು ಬರುವ ಬೆವರಿನ ಹನಿಯ
ಸಲಹೊ ಮಳೆಯ ಹನಿ

-ರಕ್ಷಿತ್ ತೀರ್ಥಹಳ್ಳಿ

Advertisement
Advertisement Advertisement
Advertisement
Advertisement Advertisement