| ವಿಚಾರಣೆಗಳು | ಮಾಹಿತಿ |
|---|---|
| ಪೂರ್ಣ ಹೆಸರು | ಪ್ರಸಾದ್ ಶೆಣೈ ಆರ್.ಕೆ. |
| ಹುಟ್ಟಿದ ದಿನಾಂಕ | ಅಕ್ಟೋಬರ್ 1 -1991 |
| ಹುಟ್ಟಿದ ಸ್ಥಳ | ಉಡುಪಿ ಜಿಲ್ಲೆ ಕಾರ್ಕಳ |
| ತಂದೆಯ ಹೆಸರು | |
| ತಾಯಿಯ ಹೆಸರು | |
| ಉದ್ಯೋಗ | ಡಿಜಿಟಲ್ ಮಾಧ್ಯಮ, ಉಪನ್ಯಾಸಕ |
| ಶಿಕ್ಷಣ | ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ |
| ಹವ್ಯಾಸಗಳು | ಬರವಣಿಗೆ, ಕಾನನ ಅಧ್ಯಯನ, ಫೋಟೋಗ್ರಫಿ, ಚಾರಣ |
| ಪ್ರಕಟಿತ ಪುಸ್ತಕಗಳು | ಲೂಲು ಟ್ರಾವೆಲ್ಸ್, ಒಂದು ಕಾಡಿನ ಪುಷ್ಪಕ ವಿಮಾನ. ನೇರಳೆ ಐಸ್ ಕ್ರೀಂ |

ಪ್ರಸಾದ್ ಶೆಣೈ ಆರ್.ಕೆ. – Prasad Shenoy R.K. ಹುಟ್ಟಿದ್ದು, ಬೆಳೆದದ್ದು ಕರಾವಳಿಯ ಊರಾದ ಕಾರ್ಕಳದಲ್ಲಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರ. ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ನುಡಿಚಿತ್ರಗಳು, ಕತೆ, ಕವನ, ಬಹುಮುಖಿ ಲೇಖನಗಳು, ಪ್ರಬಂಧಗಳು, ಕನ್ನಡದ ಅವಧಿ, ಕೆಂಡಸಂಪಿಗೆ ಸಾಹಿತ್ಯಿಕ ಜಾಲತಾಣದಲ್ಲಿ ಅಂಕಣ ಬರಹಗಳು ಪ್ರಕಟಗೊಂಡಿವೆ. ತುಷಾರ, ಪ್ರಜಾವಾಣಿ, ವಿಜಯ ನೆಕ್ಟ್ಸ್, ವಿಜಯವಾಣಿ, ಸಂಕ್ರಮಣ, ಜನಮಿತ್ರ ಕಥಾಸ್ಪರ್ಧೆಗಳಲ್ಲಿ ಬಹುಮಾನ. 2019 “ಟೋಟೋ ಫಂಡ್ ದಿ ಆರ್ಟ್” ಕನ್ನಡ ಕಥಾ ವಿಭಾಗದಲ್ಲಿ “ಟೋಟೋ ಪ್ರಶಸ್ತಿ”ಗೆ ಭಾಜನರಾಗಿದ್ದಾರೆ.



“ಲೂಲು ಟ್ರಾವೆಲ್ಸ್” ಮೊದಲ ಕಥಾ ಸಂಕಲನ, “ಒಂದು ಕಾಡಿನ ಪುಷ್ಪಕ ವಿಮಾನ” ಮಲೆನಾಡಿನ ಪರಿಸರ ಕಥಾನಕಗಳ ಸಂಕಲನ. “ನೇರಳೆ ಐಸ್ ಕ್ರೀಂ” ಎರಡನೆಯ ಕಥಾ ಸಂಕಲನ. ಬರವಣಿಗೆಯಲ್ಲಿ ಮಲೆನಾಡಿನ ಪರಿಸರವೇ ಕೇಂದ್ರಬಿಂದು. ವಿಜಯ ಕರ್ನಾಟಕ, ಉದಯವಾಣಿ ಪತ್ರಿಕೆಯಲ್ಲಿ ಒಂದಷ್ಟು ವರ್ಷ ದುಡಿಮೆ. ಸ್ವಂತ ಡಿಜಿಟಲ್ ಮಾಧ್ಯಮದಲ್ಲಿ, ಕೃಷಿಬಿಂಬ ಕೃಷಿ ಪತ್ರಿಕೆಯಲ್ಲಿ, ಪದವಿ ಕಾಲೇಜಿನ ಉಪನ್ಯಾಸಕರಾಗಿಯೂ ಇವರು ಕಾರ್ಯನಿರತರು. ಫ್ರೀಲ್ಯಾನ್ಸ್ ಬರವಣಿಗೆ, ಕಾನನ ಅಧ್ಯಯನ, ಫೋಟೋಗ್ರಫಿ, ಚಾರಣ, ಇವೆಲ್ಲಾ ಇವರ ಬದುಕಿಗೆ ಸ್ಪೂರ್ತಿ ಶಕ್ತಿ. ಮಲೆನಾಡಿನ ಪರಿಸರ, ಜೀವವೈವಿದ್ಯ ಇವರ ಅಧ್ಯಯನದ ಮುಖ್ಯವಸ್ತು.
