Categories
Author Blogs Small Stories

ಸುಧನ್ವ ಗಡಿಕಲ್ ಸಣ್ಣ ಕಥೆಗಳು – Sudhanva Gadikal Small Stories

ನಮ್ಮನೆ ಒಲೆ

ನಾವು ಚಿಕ್ಕವರಿದ್ದಾಗ ಎದ್ದು ಹಲ್ಲುಜ್ಜಿ ಮೊದ್ಲು ಬರ್ತಿದ್ದ ಜಾಗನೇ ಈ ಒಲೆ ದಂಡೆ ಬುಡ. ಈ ‘ಒಲೆ’ದಂಡೇಲಿ ಚಳಿ ಕಾಸ್ತ, ಕಾಫಿ ಚರ್ಗಿಲಿ ಕಾಫಿನ ಲೋಟಕ್ಕೆ ಬಗ್ಗಿಸ್ಕೊಂಡು, ಲೋಟದಲ್ಲಿ ಕಾಫಿ ಖಾಲಿ ಆಗೋತನಕ ಕಾಫಿ ಕುಡಿದು, ಅಮ್ಮ ಹೊರಗೆ ಹೋಗ್ತಿದ್ದಂಗೆ ಬೇಗ ಬೇಗ ಮತ್ತೆ ಕಾಫಿ ಬಕ್ಸ್ ಕಂಡು ಅಮ್ಮ ಬರೋ ಮುಂಚೆ ಆ ಕಾಫಿನ ಕುಡಿದು ಮುಗಿಸಿ ಬಿಡ್ತಿದ್ವಿ, ಅಮ್ಮಂಗೆ ಗೊತ್ತಿಲ್ದೆ ಇದ್ದಂಗೆ ಹಿಂಗ್ ಎಷ್ಟು ಸಲ ಕಾಫಿ ಬಕ್ಸ್ ಕಂಡು ಚಳಿ ಕಾಸ್ತ ಕದ್ದು ಮುಚ್ಚಿ ಕಾಫಿ ಕುಡಿತಿದ್ವಿ..! ಈಗ ಯಾವಾಗ ಒಲೆ ದಂಡೆ ಬುಡ ನೋಡುದ್ರು ಅವೆಲ್ಲ ನೆನಪಾಗುತ್ತೆ…

ಕಬ್ಳೆ ಹಣ್ಣು

ಬೇಸಿಗೆಯ ಶುರುವಾಗಿದೆ, ಒಂದ್ ಕಡೆಯಿಂದ ಬಿರುಬಿಸ್ಲು, ಇನ್ನೊಂದು ಕಡೆಯಿಂದ ಶಾಲೆಗೆ ನಾಳೆಯಿಂದ ಬೇಸ್ಗೆ ರಜಾ ಅಂತ ಹೇಳಿ ಮನೆಗೆ ಕಳಿಸಿದ್ರೆ, ನಾವುಗಳು ರಜಾ ಅನ್ನೋ ಖುಷಿಯಲ್ಲಿ ರಸ್ತೆ ಸರ್ವೆ ಮಾಡಿಕೊಂಡು ಮನೆಗೆ ಬರುತ್ತಿರಬೇಕಾದರೆ, ರಸ್ತೆ ಬದಿಯಲ್ಲಿ ಇರ್ತಿದ್ದ ಅಪರೂಪವಾದ ಮುಳ್ಳಿನ ಗಿಡಗಳ ಹಿಂಡು, ಆ ಗಿಡಗಳಲ್ಲಿ ಮುತ್ತು ಪೋಣಿಸಿದಂತೆ ಹಸಿರು ಕಾಯಿಗಳು, ಕಪ್ಪು ಹಣ್ಣುಗಳು ಅವೇ “ಕಬಳೆ ಹಣ್ಣುಗಳು”.

ಇವು ನಮ್ಮ ಕಣ್ಣಿಗೆ ಬಿದ್ರೆ ಸಾಕು ನಾವು ಗೆಳೆಯರೆಲ್ಲ ಒಟ್ಟಾಗಿ ಸೇರಿಕೊಂಡು ಕಬಳೆ ಹಣ್ಣನ್ನು ಕೀಳುತ್ತಿದ್ದೆವು, ಕೀಳುವಾಗ ಕೈಗೆ ಮುಳ್ಳು ಚುಚ್ಚುತ್ತಿತ್ತು ಆದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರೂ ಒಟ್ಟು ಸೇರಿ ಕಿತ್ತಂತ ಹಣ್ಣನ್ನು ಹಂಚಿಕೊಂಡು ತಿನ್ನುತ್ತಿದ್ದೆವು, ಆ ಹಣ್ಣನ್ನು ಸವಿಯುತ್ತಿದ್ದಾಗ ಮುಳ್ಳು ಚುಚ್ಚಿದ ನೋವೆಲ್ಲಾ ಮರೆತೇ.. ಹೋಗುತ್ತಿತ್ತು.

Advertisement
Advertisement Advertisement
Advertisement
Advertisement Advertisement
Advertisement
Advertisement Advertisement