Categories
Malnad information

ಬೆಂಗಳೂರಿನಲ್ಲಿ ಫೆ.1ರಂದು ಮಲೆನಾಡ ಸಂಗಮದ ಸಂಭ್ರಮ

  • ಬೆಂಗಳೂರಿನಲ್ಲಿ ಫೆ.1ರಂದು ಮಲೆನಾಡ ಸಂಗಮದ ಸಂಭ್ರಮ
  • ಕ್ರೀಡಾಕೂಟದ ಜೊತೆಗೆ ಮಲೆನಾಡ ಅಭಿಮಾನ ಬಡಿದೆಬ್ಬಿಸುವ ವಿಶೇಷ ಸ್ಪರ್ಧೆಗಳು
  • ಸುವರ್ಣ ಮಲೆನಾಡು ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಅದ್ಧೂರಿ ಆಯೋಜನೆ

ಸುವರ್ಣ ಮಲೆನಾಡು ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಫೆಬ್ರವರಿ 1 ರಂದು ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಅದ್ದೂರಿಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಕಂಪು ರಂಗೇಳಲಿದೆ. ಕ್ರೀಡಾಕೂಟ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮಲೆನಾಡಿನವರಿಗೋಸ್ಕರ ಆಯೋಜನೆಯಾಗಿದ್ದು ಇದೊಂದು ಮಲೆನಾಡಿಗರ ಸಂಭ್ರಮದ ಸಂಗಮವಾಗಲಿದೆ.

Suvarna Malenadu Sangama Celebrations In Bangalore 2026

ಗಣ್ಯರ ಸಮಾಗಮ:

ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಕಾರ್ತಿಕೇಯ ಸಾರಗನ ಜೆಡ್ಡು ಶ್ರೀ ಶ್ರೀ ಶ್ರೀ ಅವಧೂತ ಯೋಗೇಂದ್ರ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣ ಮಲೆನಾಡು ಸಂಘದ ಅಧ್ಯಕ್ಷರಾದ ಪ್ರಶಾಂತ್ ಹಳಗುಂದ ಅವರು ವಹಿಸಲಿದ್ದು, ಕ್ರೀಡಾಕೂಟಕ್ಕೆ ವಿಶೇಷ ಆಹ್ವಾನಿತರಾಗಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ರಾಜಾಜಿನಗರ ಕ್ಷೇತ್ರದ ಶಾಸಕರು ಹಾಗೂ ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶೃಂಗೇರಿ ಶಾಸಕರಾದ ರಾಜೇಗೌಡ, ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಸಾಗರ ಕ್ಷೇತ್ರದ ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಮಲೆನಾಡು ಅಭಿವೃದ್ಧಿ ನಿಗಮ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ, ರಾಮಮಂದಿರ ವಾರ್ಡ್ ಮಾಜಿ ಕಾರ್ಪೊರೇಟರ್ ದೀಪಾ ನಾಗೇಶ್, ಸುವರ್ಣ ಮಲೆನಾಡು ಸಂಘದ ಗೌರವ ಸಂಸ್ಥಾಪಕ ಅಧ್ಯಕ್ಷರಾದ ನಾಗರಾಜ್ ಮಾಸ್ತಿಕಟ್ಟೆ ಸೇರಿ ಅನೇಕ ಗಣ್ಯರು ಭಾಗವಹಿಸಲಿರುವುದು ವಿಶೇಷ

ಮಲೆನಾಡ ಸಾಧಕರಿಗೆ ಅಭಿನಂದನೆ, ಗೌರವ, ಸನ್ಮಾನ ಕಾರ್ಯಕ್ರಮ

ಇದೇ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದಲ್ಲಿ ಹೆಮ್ಮೆಯ ಮಲೆನಾಡಿಗರೆಂದು ಭಾರತ ಮಹಿಳಾ ಅಂಧರ ಕ್ರಿಕೆಟ್ ತಂಡದ ವಿಶ್ವಕಪ್ ವಿಜೇತೆಯಾದ ರಿಪ್ಪನ್ ಪೇಟೆಯ ಕಾವ್ಯ ಎ, ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿಗಳು ಹಾಗೂ ನಿರ್ದೇಶಕರಾದ ಕವಿರಾಜ್ ಯಡೂರು, ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಜನಸಾಥಿ ಇನ್ನೋವೇಶನ್ಸ್ ಸಂಸ್ಥಾಪಕರಾದ ರಾಘವೇಂದ್ರ ತೀರ್ಥಹಳ್ಳಿ, ಜಿಲ್ಲಾ ಜಾನಪದ ಸಿರಿ ಪ್ರಶಸ್ತಿ ವಿಜೇತರು ಹಾಗೂ ಕೊಳಲು ವಾದಕರಾದ ಯೋಗೇಶ್ ಹೆಗಡೆಮನೆ ತೀರ್ಥಹಳ್ಳಿ ಅವರಿಗೆ ಸನ್ಮಾನ ಸಮಾರಂಭ ನಡೆಯಲಿದೆ.

Advertisement
Advertisement Advertisement

ಭರ್ಜರಿ ಕ್ರೀಡಾಕೂಟದ ಆಯೋಜನೆ:

ಕ್ರೀಡಾಳುಗಳಿಗೆ ಬಗೆಬಗೆಯ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, 5ರಿಂದ10 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ 50 ಮೀಟರ್ ಓಟದ ಸ್ಪರ್ಧೆಯನ್ನು, 5ರಿಂದ10 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬಕೆಟ್ ಗೆ ಬಾಲ್ ಹಾಕುವುದು ಸ್ಪರ್ಧೆಯನ್ನು, 5ರಿಂದ10 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಿಕೆಟ್ ಗೆ ಬಾಲ್ ಹೊಡೆಯುವ ಸ್ಪರ್ಧೆಯನ್ನು 5ರಿಂದ ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬಕೆಟ್ ಗೆ ಬಾಲ್ ಹಾಕುವ ಸ್ಪರ್ಧೆಯನ್ನು, 10 ರಿಂದ 15 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಿಕೆಟ್ ಗೆ ಬಾಲ್ ಹೊಡೆಯುವ ಸ್ಪರ್ಧೆಯನ್ನು, 10 ರಿಂದ 15 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಟಯರ್ ಓಡಿಸುವ ಸ್ಪರ್ಧೆಯನ್ನು, ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆಯನ್ನು, ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಮಡಿಕೆ ಒಡೆಯುವ ಸ್ಪರ್ಧೆಯನ್ನು, ಪುರುಷರಿಗೆ ವಿಕೆಟ್ ಗೆ ಬಾಲ್ ಹೊಡೆಯುವ ಸ್ಪರ್ಧೆಯನ್ನು, ಮಹಿಳೆಯರಿಗೆ ಥೋ ಬಾಲ್ ಸ್ಪರ್ಧೆಯನ್ನು, ಪುರುಷರಿಗೆ ಮ್ಯಾಟ್ ಕಬಡ್ಡಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಇನ್ನು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿಗರಿಗೆ ಮಾತ್ರ ಅದೃಷ್ಟವಂತ ಮಲೆನಾಡಿನ ದಂಪತಿಗಳು, ಅದೃಷ್ಟವಂತ ಮಲೆನಾಡಿನ ಹುಡುಗ ಮತ್ತು ಹುಡುಗಿ ಎನ್ನುವ ವಿಶೇಷ ವಿಭಾಗವನ್ನು ಏರ್ಪಡಿಸಲಾಗಿದೆ. ಎಲ್ಲಾ ಸ್ಪರ್ಧೆಗಳು ಮತ್ತು ಕ್ರೀಡೆಗಳು ಕ್ರೀಡಾಮನೋಭಾವವನ್ನು ಜೊತೆಗೆ ಮಲೆನಾಡಿನ ಪ್ರೀತಿಯನ್ನು ಹಬ್ಬಿಸಲು ರೆಡಿಯಾಗಿದೆ.

Advertisement
Advertisement Advertisement
Advertisement
Advertisement Advertisement