ಮಲೆನಾಡಿನ ಭಾಗದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಜನಪದ ಸಂಪ್ರದಾಯವನ್ನು ನಡೆಸಲಾಗುತ್ತದೆ. ದೀಪಾವಳಿ(ಪಾಡ್ಯದಿಂದ) ಹಬ್ಬದ ಮೂರು ರಾತ್ರಿಗಳಲ್ಲಿ ಹೀಗೆ ಮನೆ ಮನೆಗೆ ಹಾಡು ಹೇಳಿಕೊಂಡು, ದೀಪ ಹಿಡಿದು ಹೊರಡುತ್ತಾರೆ. ದೀಪ ಹಚ್ಚುವುದು, ಎಣ್ಣೆ ಹೊಯ್ಯುವುದು, ಗರತಿ ಬರುವುದು, ಹೀಗೆ ಎಲ್ಲವಕ್ಕೂ ಒಂದೊಂದು ಹಾಡು, ಒಂದೊಂದು ಪದ. ಕೆಲವು ಹಿರಿಯರು ಅಲ್ಲೇ ಪದಕಟ್ಟಿ ಹಾಡುತ್ತಾರೆ. ಜ್ಯೋತಿ ಹಾಡು : ಸತ್ಯಳು ಸ್ವಾಮಿಯ ಶರಣು ಮಾಡಲು ಬಂದು ಶರನೆಂದರ ಕೈಯ ಮುಗುದೆವು……ಕಟ್ಟೆ ಕಟ್ಟಿಸೆವು ಬಟ್ಟರಾ ಕರಾಸೆವು ಈ ಕಟ್ಟೆಗೂ ಪೂಜೆ……ಜೋಯ್ಸರ […]
