Categories
Author Blogs Books

ಆರು ಕಥೆಗಳು, ನೂರಾರು ಭಾವನೆಗಳು!

– ಅಭಿ ತೀರ್ಥಹಳ್ಳಿ Abbi Thirthahalli ರಕ್ಷಿತ್ ತೀರ್ಥಹಳ್ಳಿಯವರ “ಆರು ಎಸೆತಗಳು” ಕೇವಲ ಕಥೆಗಳ ಗುಚ್ಛವಲ್ಲ, ಅದು ಮನುಷ್ಯನ ಮನಸ್ಸಿನ ಆಳದ ಭಾವನೆಗಳನ್ನು ಶೋಧಿಸುವ ಒಂದು ಅಪರೂಪದ ಕಥಾಸಂಕಲನ. ಮನುಷ್ಯನು ತನ್ನ ಹೆಚ್ಚಿನ ಸಮಯವನ್ನು ಭಾವನೆಗಳ ಜೊತೆ ಕಳೆಯುತ್ತಾನೆ. ಆ ಸಾಂಗತ್ಯವೇ ಅವನ ಬದುಕಿನ ಉನ್ನತಿ ಅಥವಾ ಅವನತಿಗೆ ಕಾರಣವಾಗುತ್ತದೆ. ಈ ಆಳವಾದ ಮಾನವೀಯ ತತ್ವವನ್ನು ಹೊತ್ತ ಈ ಆರು ಕತೆಗಳ ಭಾವಲೋಕದಲ್ಲಿ ನಾನೇ ಖುದ್ದಾಗಿ ನಡೆದು ಬಂದ ಅನುಭವವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಮೊದಲಿಗೆ ತುಂಗೇಬೈಲಿನ ಮಂಜಪ್ಪನ […]

Categories
Author Blogs Books Kannada

ಕುಪ್ಪಳಿಯ ಹಾದಿಯಲ್ಲಿ ಸಿಕ್ಕ ಅಪರೂಪದ ನೆನಪುಗಳ “ಮೈಸೂರ್ ಪಾಕ್”!!

– ಅಭಿ ತೀರ್ಥಹಳ್ಳಿ Abbi Thirthahalli ಕೆಲವೊಮ್ಮೆ ನಾವು ಅರಸಿ ಹೊರಟದ್ದಕ್ಕಿಂತ, ಅನಿರೀಕ್ಷಿತವಾಗಿ ಸಿಗುವ ಒಡನಾಟ ಮತ್ತು ಪುಸ್ತಕಗಳು ಮನಸ್ಸಿಗೆ ಹೆಚ್ಚು ಆಪ್ತವಾಗುತ್ತವೆ. ಕೆಲವು ತಿಂಗಳುಗಳ ಹಿಂದೆ ಪುಸ್ತಕದ ಹುಡುಕಾಟದಲ್ಲಿ ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರಕ್ಕೆಂದು ಹೋದವನು, ಅಲ್ಲೇ ಸಮೀಪದಲ್ಲಿದ್ದ ಕುವೆಂಪುರವರ ಅಜ್ಜಿ ಮನೆ, ಅವರು ಹುಟ್ಟಿದ ಸ್ಥಳವಾದ ಹಿರೇಕೊಡಿಗೆಗೆ ಭೇಟಿ ನೀಡಿದ್ದೆ. ನಾನು ಪದವಿ ಓದುತ್ತಿರುವಾಗ ಒಮ್ಮೆ ಅಲ್ಲಿಗೆ ಭೇಟಿ ಕೊಟ್ಟದ್ದು ನೆನಪಿದೆ. ತೇಜಸ್ವಿಯವರು ಮೀನು ಹಿಡಿಯಲೆಂದು ಕಾಡೊಳಗೆ ಹೊಕ್ಕು, ನೀರವ ಮೌನದಲ್ಲಿ ಗಾಳ ಹಿಡಿದು […]

Categories
Author Blogs Books Kannada

ಶೀರ್ಷಿಕೆಯಲ್ಲಿ ಓದಿದ್ದೇ ಒಂದು, ಪುಸ್ತಕ ಹೇಳಿದ್ದೇ ಇನ್ನೊಂದು: “ಕಾಡು ಹಾದಿಯ ಜಾಡು ಹತ್ತಿ” ನೀಡಿದ ಅಚ್ಚರಿ!

– ಅಭಿ ತೀರ್ಥಹಳ್ಳಿ Abhi Thirthahalli ಸ್ವಪ್ನ ಪುಸ್ತಕ ಮಳಿಗೆಯ ಶೆಲ್ಫಿನಲ್ಲಿ ಎರಡು ಬಾರಿ ಕಣ್ಣಿಗೆ ಬಿದ್ದರೂ ಯಾಕೋ ಇದನ್ನು ತೆಗೆದುಕೊಳ್ಳುವ ಮನಸ್ಸಾಗಿರಲಿಲ್ಲ. ಆದರೆ ಮೂರನೇ ಬಾರಿಗೆ ಹೋದಾಗ ಸುಮ್ಮನೆ ತೆಗೆದು ಬ್ಯಾಸ್ಕೆಟ್ ಒಳಗೆ ಹಾಕಿಕೊಂಡೆ. ಇದಕ್ಕೆ ಮುಖ್ಯ ಕಾರಣ ಆ ಪುಸ್ತಕದ ಶೀರ್ಷಿಕೆ ಮತ್ತು ನನ್ನದೊಂದು ತಮಾಷೆಯ ಪ್ರಮಾದ. ನಾನು ಸಾಮಾನ್ಯವಾಗಿ ಪುಸ್ತಕದ ಮುಖಪುಟ ಹಾಗೂ ಶೀರ್ಷಿಕೆ ನೋಡಿ ಓದಲು ಆಯ್ಕೆ ಮಾಡುವ ಖಯಾಲಿ ಉಳ್ಳವನು. ಅಂದು ಕಾರ್ತಿಕಾದಿತ್ಯ ಬೆಳಗೋಡು ಅವರ “ಕಾಡು ಹಾದಿಯ ಜಾಡು […]

Categories
Author Blogs Books Kannada

ನಾವೆಲ್ಲರೂ “ಕಾಡಿನ ನೆಂಟರು”!!!

– ಅಭಿ ತೀರ್ಥಹಳ್ಳಿ Abhi Thirthahalli ರಕ್ಷಿತ್ ತೀರ್ಥಹಳ್ಳಿ Rakshith Thirthahalliಯವರ “ಕಾಡಿನ ನೆಂಟರು Kadina Nentaru” ಕಥಾಸಂಕಲನವು ಮಲೆನಾಡು ಎಂದರೆ ಕೇವಲ ಮಂಜು, ಮಳೆ ಮತ್ತು ದಟ್ಟ ಹಸಿರಿನ ರಮ್ಯಲೋಕವಲ್ಲ; ಅದರಾಚೆಗಿನ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ, ಅಸಹಾಯಕತೆ ಮತ್ತು ಬದಲಾಗುತ್ತಿರುವ ಬದುಕಿನ ಕಟು ವಾಸ್ತವಗಳ ತಾಣ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತದೆ. ಕುವೆಂಪು ಮತ್ತು ತೇಜಸ್ವಿಯವರ ಕಾಲದ ಮಲೆನಾಡಿನ ಚಿತ್ರಣಕ್ಕೂ, ಇಂದಿನ ಮಲೆನಾಡಿನ ವಾಸ್ತವಕ್ಕೂ ಇರುವ ಕಂದಕವನ್ನು ಈ ಕೃತಿ ನಿರ್ದಾಕ್ಷಿಣ್ಯವಾಗಿ ಕಟ್ಟಿಕೊಡುತ್ತದೆ. ರಕ್ಷಿತ್ […]

Categories
Author Books Poornachandra Tejaswi Thirthahalli

ಪ್ರಕೃತಿ, ವಿಜ್ಞಾನ ಮತ್ತು ಮಲೆನಾಡಿನ ಬದುಕಿನ ಮುಖಾಮುಖಿಯೇ ಕರ್ವಾಲೊ!

-ಅಭಿ ತೀರ್ಥಹಳ್ಳಿ Abhi Thirthahalli “ಕರ್ವಾಲೊ Karvalo”, ಪೂರ್ಣಚಂದ್ರ ತೇಜಸ್ವಿ Purnachandra Tejaswi ಯವರ ಕೇವಲ ಒಂದು ರೋಚಕ ಕಾದಂಬರಿಯಲ್ಲ, ಬದಲಾಗಿ ಮಲೆನಾಡಿನ ಸಾಮಾಜಿಕ, ಪಾರಿಸರಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡುವ ಒಂದು ಮಹತ್ವದ ಕೃತಿ. ತೇಜಸ್ವಿಯವರ ಕೃತಿಗಳಲ್ಲಿ ನಾನು ಮೊದಲು ಓದಿದ ಹಾಗೂ ನನ್ನನ್ನು ಅತಿ ಹೆಚ್ಚು ಕಾಡಿದ ಪುಸ್ತಕವಿದು. ಇದನ್ನು ನಾನು ಐದು ಬಾರಿ ಓದಿರುವೆ. ಪ್ರತಿ ಬಾರಿಯೂ ಕೃತಿಯು ಹೊಸದೊಂದು ದೃಷ್ಟಿಕೋನವನ್ನು ತೆರೆದಿಡುತ್ತಲೇ ಹೋಗುತ್ತದೆ. ಕೇವಲ ಮಲೆನಾಡನ್ನು ರಮ್ಯವಾಗಿ, ಆದರ್ಶಮಯವಾಗಿ […]

Categories
Books

ಒಂದು ಕಾಡಿನ‌ ಪುಷ್ಪಕ ವಿಮಾನ – Ondu Kadina Puspaka Vimana Book

ಪಶ್ಚಿಮಘಟ್ಟದ ತಪ್ಪಲಿನ ಸ್ವರ್ಗದಂತಹಾ ಮಾಳ, ದುರ್ಗ, ಮಲೆಬೆಟ್ಟು ಇಂತಹಾ‌ ಪುಟ್ಟ ಪುಟ್ಟ ಊರುಗಳಲ್ಲಿ ಕಾಡು, ಹಸಿರು ಪರಿಸರದ ನಡುವಿನ ಸುತ್ತಾಟ, ಅಲ್ಲಿನ ಹಿರಿ- ಕಿರಿಯ ಜೀವಗಳ ಜೀವನದ ಕತೆ ಮುಂತಾದವುಗಳನ್ನು ಕಾಡಿಸುವ ಪುಟ್ಟ ಪುಟ್ಟ ಪರಿಸರ ಕಥಾನಕಗಳ ಸಂಗ್ರಹದ ಪುಸ್ತಕವೇ “ಒಂದು ಕಾಡಿನ ಪುಷ್ಪಕ ವಿಮಾನ”. ನಾವೂ ಇಂತದ್ದೊಂದು ಊರಲ್ಲಿ ಬದುಕಬೇಕಿತ್ತು ಎಂದೆನ್ನಿಸುವ, ಓದುತ್ತಾ ಹೋದಂತೆ ನಾವೇ ಆ ಊರುಗಳ ದಾರಿಯಲ್ಲಿ ನಡೆದಂತೆ, ಅಲ್ಲಿನ ಜೀವಗಳ ಮಧ್ಯೆ ನಾವೂ ಒಬ್ಬರಾದಂತೆ ಭಾವ ಮೂಡಿಸುತ್ತಾ ಹೋಗುತ್ತದೆ ಈ ಪುಸ್ತಕದ […]