ಹಬ್ಬದ ಆಚರಣೆ ಮಲೆನಾಡಿನ ಜನರು ವಿಶಿಷ್ಟವಾಗಿ ಮಾಡುತ್ತಾರೆ. ಈ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ಸಾಮಗ್ರಿ. ಇದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ ಇದನ್ನು ಪೂಜೆಗೆ ಬಳಸಲಾಗುತ್ತದೆ. ಭೂದೇವಿಗೆ ಪೂಜೆ ಮಾಡಿ, ಮಡಿಲು ತುಂಬುವ ಭಾವನಾತ್ಮಕತೆ ಹಿನ್ನೆಲೆಯ ಹಬ್ಬ ಇದಾಗಿದ್ದು, ಭೂಮಿತಾಯಿಗೆ ಮಡಿಲು ತುಂಬಲು ಮತ್ತು ನೈವೇದ್ಯ ಸಾಮಗ್ರಿಯನ್ನು ಹೊಲಕ್ಕೆ ಒಯ್ಯಲು ಬಿದಿರಿನಿಂದ ಮಾಡಿದ ಬುಟ್ಟಿಗಳನ್ನು ಬಳಸಲಾಗುತ್ತದೆ. ಇದಕ್ಕೆ ‘ಭೂಮಣ್ಣಿ ಬುಟ್ಟಿ’ ಎಂದು ಗ್ರಾಮ್ಯ ಭಾಷೆಯಲ್ಲಿ ಕರೆಯುವುದು ವಾಡಿಕೆ. ಈ ಬುಟ್ಟಿಗಳನ್ನು ಹಬ್ಬಕ್ಕೆ ಬಳಸಲು […]
