ನಮ್ಮನೆ ಒಲೆ ನಾವು ಚಿಕ್ಕವರಿದ್ದಾಗ ಎದ್ದು ಹಲ್ಲುಜ್ಜಿ ಮೊದ್ಲು ಬರ್ತಿದ್ದ ಜಾಗನೇ ಈ ಒಲೆ ದಂಡೆ ಬುಡ. ಈ ‘ಒಲೆ’ದಂಡೇಲಿ ಚಳಿ ಕಾಸ್ತ, ಕಾಫಿ ಚರ್ಗಿಲಿ ಕಾಫಿನ ಲೋಟಕ್ಕೆ ಬಗ್ಗಿಸ್ಕೊಂಡು, ಲೋಟದಲ್ಲಿ ಕಾಫಿ ಖಾಲಿ ಆಗೋತನಕ ಕಾಫಿ ಕುಡಿದು, ಅಮ್ಮ ಹೊರಗೆ ಹೋಗ್ತಿದ್ದಂಗೆ ಬೇಗ ಬೇಗ ಮತ್ತೆ ಕಾಫಿ ಬಕ್ಸ್ ಕಂಡು ಅಮ್ಮ ಬರೋ ಮುಂಚೆ ಆ ಕಾಫಿನ ಕುಡಿದು ಮುಗಿಸಿ ಬಿಡ್ತಿದ್ವಿ, ಅಮ್ಮಂಗೆ ಗೊತ್ತಿಲ್ದೆ ಇದ್ದಂಗೆ ಹಿಂಗ್ ಎಷ್ಟು ಸಲ ಕಾಫಿ ಬಕ್ಸ್ ಕಂಡು ಚಳಿ […]
Tag: Sudhanva Gadikal
– ಸುಧನ್ವ ಗಡಿಕಲ್ ಬೇಸಿಗೆ ಬಿಸಿಯಲಿ ಬೆಂದ ಇಳೆಯನ್ನು ತಂಪೆರೆವ ಸಮಯ,ಬಿಸಿಲ ಕಾವಿಗೆ ತಾಕಿತ್ತು ಪ್ರಕೃತಿಯ ವಿನಯ..ಗಾಳಿಯ ಚಾಮರವು ಒಂದೆಡೆ ಬೀಸಲು,ಗುಡುಗು ಸಿಡಿಲ ನಾದವು ಮುಗಿಲಲ್ಲಿ ಮೊಳಗಲು… ಆಕಾಶದ ಅಂಗಳದಿ ಪನ್ನೀರಿನ ಮಾಲೆ,ಧರೆಗೆ ಇಳಿದಂತೆ ಆನಂದದ ಲೀಲೆ…ಪ್ರತಿ ಹನಿಯ ಸ್ಪರ್ಶಕೆ ಮಣ್ಣಿನ ಘಮಲು,ಹಸಿರ ಕಾಂತಿ ಹಬ್ಬಿತ್ತು ವನದೊಳು ಪಸರಿಸಲು… ಬಣಗುಟ್ಟಿದ ಮರಗಿಡಗಳು ಇಂದು ನಲಿದಿವೆ,ಮಳೆಯ ಮುತ್ತಿಗೆ ಮೈಮರೆತು ಓಲಾಡಿವೆ…ತಣಿದ ಭೂಮಿ ಮೆಲ್ಲಗೆ ಕಣ್ಣು ತೆರೆದಿದೆ,ಒಣಗಿದ ಕನಸಲಿ ಹಸಿರ ಚಿಗುರು ಮೂಡಿದೆ..!
ನನ್ನೂರು ಮಲೆನಾಡು ಮೋಡ ಮುಸುಕಿರಲು ಬಾನಿಗೆ…ಶುರು ಮಳೆ ಹನಿಯ ದಿಬ್ಬಣ ಭೂಮಿಗೆ,ಜೀರುಂಡೆಗಳ ಸದ್ದಿನ ನಡುವಲ್ಲಿ…ನಾಚುತ್ತಿದೆ ಕಾನನ ತಂಗಾಳಿಯಲ್ಲಿ,ಸಿಡಿಲು ಮಿಂಚುಗಳ ರೌದ್ರ ನರ್ತನ…ಮಲೆನಾಡಿಗೆ ಮಳೆಯ ಸಿಂಚನ..!– ಸುಧನ್ವ ಗಡಿಕಲ್ ಮಲ್ನಾಡ್ ಜೀವ್ನ ಮಂಡೆಗ್ ಹಾಕಿರೋ ಮಂಡಾಳೆ ಜಾರಲ್ಲ…ಮಲೆನಾಡಿಗರಿಗೆ ಮಳೆಗಾಲವೆಂದರೆ ಬೇಜಾರಾಗಲ್ಲ,ಮಳೆಗಾಲದ ನಡುವೆ ಬರುತ್ತೆ ಕಪ್ಪೆ ಹುಳ ಸತ್ತ ದುರ್ಗಂಧ…ಆದರೂ ನಂಗ್ ನನ್ನ ಮಲ್ನಾಡೆ ಚಂದ..ಮಲೆನಾಡಿನ ಆಚರಣೆಗಳು ಹೋಗುತ್ತಿದವೇ ಮರೆತು…ಮರ ಗಿಡನೆಲ್ಲ ಕಡೆದು ಪ್ರಾಣಿ ಪಕ್ಷಿನೆಲ್ಲ ಕೊಂದು ನಾವಾಗಿ ನಾವೇ ತಯಾರು ಮಾಡ್ತಿದ್ದೀವಾ ಮಲೆನಾಡಿಗೆ ಚಿತೆ..!– ಸುಧನ್ವ ಗಡಿಕಲ್ ಮಧ್ಯಾಹ್ನದ […]
