ಜೇನುತುಪ್ಪ ಹರಳುಗಟ್ಟುವುದು – Honey Crystallisation ಬಾಟಲಿಯಲ್ಲಿ ಶೇಖರಿಸಿಟ್ಟ ಜೇನು, ವಾತಾವರಣ ತಂಪಾಗುತ್ತಿದ್ದಂತೆ ಹರಳುಗಟ್ಟುವುದನ್ನು (crystallization) ಸಾಮಾನ್ಯವಾಗಿ ನೀವೆಲ್ಲರೂ ನೋಡಿರುತ್ತೀರಿ. ಜನಸಾಮಾನ್ಯರ ತಿಳುವಳಿಕೆಯಲ್ಲಿ ಜೇನುತುಪ್ಪ ಹರಳುಗಟ್ಟಿತೆಂದರೆ ಅದು ಕೃತಕ “ಸಕ್ಕರೆ ದ್ರಾವಣ” ಸೇರಿಸಿ “ಕಲಬೆರಕೆ” ಮಾಡಿದ ಜೇನು ಎಂದು ಪರಿಗಣಿಸಲಾಗುತ್ತದೆ. ಆಗ ಖರೀದಿ ಮಾಡಿದ ಗ್ರಾಹಕರಿಗೂ, ವ್ಯವಹರಿಸಿದ ಜೇನು ಕೃಷಿಕರಿಗೂ ಮಾತಿನ ಚಕಮಕಿ ನಡೆದು ಅಂತಿಮವಾಗಿ ಜೇನು ಕೃಷಿಕನಿಗೆ ‘ನಂಬಿಕೆ ದ್ರೋಹಿ’ ಪಟ್ಟ ಲಭಿಸಿಬಿಡುತ್ತದೆ. ಅಸಲಿಯತ್ತು ತಿಳಿದೂ, ಅದನ್ನು ಗ್ರಾಹಕರಿಗೆ ವಿವರಿಸಲಾಗದ ಪರಿಸ್ಥಿತಿಯಲ್ಲಿ ಜೇನು ಕೃಷಿಕರು ಮಾತ್ರ […]
