Categories
Author Kannada Malnad Rain

Pramod VK Lines About Malnad Nature

ಮಲ್ನಾಡ್ ಬದ್ಕು… ಯತ್ ನೋಡುದ್ರು. ಮನ್ಸಿಗ್.. ಹಿತ ತರುವ ವಾತವರ್ಣ.. ಮಳಿಗ್ ಏನ್ ಕಮ್ಮಿಲ್ಲ… ಬಿಸ್ಲಿಗ್ ಏನ್ ಕಮ್ಮಿಲ್ಲ… ಹಂಗಂತ ಸುಮ್ನೆ.. ಕುಂತ್ರೆ.. ಬದ್ಕ್ ಏನ್ ನಡೆದ್ಲಾ…ಮಳ್ಗಾಲ್ ಬಂದ್ರೆ… ಸಸ್ ನಟ್ಟಿ..ಬೇಸ್ಗೆ.. ಬಂದ್ರೆ ಗದ್ದೆ ಕೊಯ್ಲು ಒಕ್ಲಾಟ.. ಚಳಿಗಾಲ್.. ಬಂದ್ರೆ ಅಡ್ಕೆ ಕೊಯ್ಲು…ಹಿಂಗೆ ಒಂದ್ರು ಮೇಲೊಂದ್ ಕೆಲ್ಸ… ಯಂತಕ್ಕು.. ಪೂರ್ಸೋತ್ತಿಲ್ದು ಬದ್ಕ್… ನಮ್ ಮಲ್ನಾಡ್ ಬದ್ಕ್… ಹಂಗೆ.. ಊಟ್ ಉಪ್ಚಾರ್ಕೆ ಬಂದ್ರೆ.. ಹೊಟ್ಟೆಗ್ ಏನ್ ಕಮ್ಮಿ ಇರುದ್ಲಾ… ಹೊಳೆ ಬದಿ ಗಾಣ ಕಟ್ ಬಂದ್ರೆ.. ಅಪ್ರೂಪಕ್ಕೆ ಗಾಣಕ್ […]

Categories
Adike Blogs Kannada Malnad Rain

Sinchana Gadikal Lines About Malnad Nature

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಮ್ಮ ಈ ಮಲೆನಾಡಿನಲಿ..ಕಾಡುಮೇಡುಗಳೇ ಆವರಿಸಿಕೊಂಡಿರುವ ಈ ಪ್ರಕೃತಿಯಲಿ..ಮನಸಿಗೆ ಹಿತ ಸಿಗುವುದು ಈ ಪ್ರಕೃತಿ ಮಾತೆಯ ಮಡಿಲಲಿ..ಹಕ್ಕಿಯ ಕಲರವದಿಂದ ಮೊಳಗುವ ಆ ಮುಸ್ಸಂಜೆಯಲಿ..ಅದೆಷ್ಟೊ ಪ್ರಾಣಿ ಪಕ್ಷಿಗಳು ತಾಣವನ್ನಾಗಿಸಿಕೊಂಡಿವೆ ಈ ಭುವಿಯಲಿ..ಮಳೆಗಾಲದಲ್ಲಿ ಭೂಮಿಗೆ ಚುಂಬಿಸುವ ಆ ಹನಿಗಳ ಸ್ಪರ್ಶದಲಿ..ಮೈ ಮರೆಯುವುದು ಆ ಮಣ್ಣಿನಿಂದ ಹೊರಹೊಮ್ಮುವ ಸುವಾಸನೆಯಲಿ..ಸೂರ್ಯನ ಕಿರಣಗಳು ಭುವಿಗೆ ಮುತ್ತಿಕ್ಕುವ ಮುಂಜಾನೆಯಲಿ..ಸ್ವರ್ಗವೇ ಧರೆಗಿಳಿದಂತಿರುತ್ತದೆ ನಮ್ಮ ಈ ಮಲೆನಾಡಿನಲಿ… ಮಳೆಯ ಬರುವಿಕೆಗಾಗಿ ಕಾದಂತಹ ಇಳೆಗೆಮಳೆಯ ಹನಿಗಳು ಸ್ಪರ್ಶಿಸುವ ಆ ಘಳಿಗೆಗಿಡ ಮರಗಳೆಲ್ಲ ಹಸಿರಾಗಿ ಮಡಿಲ್ಲೆಲ್ಲ ತಂಪಾಗಿದೆ ಭುವಿಗೆಮಳೆಯ […]

Categories
Author Blogs Books Kannada

ಕುಪ್ಪಳಿಯ ಹಾದಿಯಲ್ಲಿ ಸಿಕ್ಕ ಅಪರೂಪದ ನೆನಪುಗಳ “ಮೈಸೂರ್ ಪಾಕ್”!!

– ಅಭಿ ತೀರ್ಥಹಳ್ಳಿ Abbi Thirthahalli ಕೆಲವೊಮ್ಮೆ ನಾವು ಅರಸಿ ಹೊರಟದ್ದಕ್ಕಿಂತ, ಅನಿರೀಕ್ಷಿತವಾಗಿ ಸಿಗುವ ಒಡನಾಟ ಮತ್ತು ಪುಸ್ತಕಗಳು ಮನಸ್ಸಿಗೆ ಹೆಚ್ಚು ಆಪ್ತವಾಗುತ್ತವೆ. ಕೆಲವು ತಿಂಗಳುಗಳ ಹಿಂದೆ ಪುಸ್ತಕದ ಹುಡುಕಾಟದಲ್ಲಿ ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರಕ್ಕೆಂದು ಹೋದವನು, ಅಲ್ಲೇ ಸಮೀಪದಲ್ಲಿದ್ದ ಕುವೆಂಪುರವರ ಅಜ್ಜಿ ಮನೆ, ಅವರು ಹುಟ್ಟಿದ ಸ್ಥಳವಾದ ಹಿರೇಕೊಡಿಗೆಗೆ ಭೇಟಿ ನೀಡಿದ್ದೆ. ನಾನು ಪದವಿ ಓದುತ್ತಿರುವಾಗ ಒಮ್ಮೆ ಅಲ್ಲಿಗೆ ಭೇಟಿ ಕೊಟ್ಟದ್ದು ನೆನಪಿದೆ. ತೇಜಸ್ವಿಯವರು ಮೀನು ಹಿಡಿಯಲೆಂದು ಕಾಡೊಳಗೆ ಹೊಕ್ಕು, ನೀರವ ಮೌನದಲ್ಲಿ ಗಾಳ ಹಿಡಿದು […]

Categories
Author Blogs Books Kannada

ಶೀರ್ಷಿಕೆಯಲ್ಲಿ ಓದಿದ್ದೇ ಒಂದು, ಪುಸ್ತಕ ಹೇಳಿದ್ದೇ ಇನ್ನೊಂದು: “ಕಾಡು ಹಾದಿಯ ಜಾಡು ಹತ್ತಿ” ನೀಡಿದ ಅಚ್ಚರಿ!

– ಅಭಿ ತೀರ್ಥಹಳ್ಳಿ Abhi Thirthahalli ಸ್ವಪ್ನ ಪುಸ್ತಕ ಮಳಿಗೆಯ ಶೆಲ್ಫಿನಲ್ಲಿ ಎರಡು ಬಾರಿ ಕಣ್ಣಿಗೆ ಬಿದ್ದರೂ ಯಾಕೋ ಇದನ್ನು ತೆಗೆದುಕೊಳ್ಳುವ ಮನಸ್ಸಾಗಿರಲಿಲ್ಲ. ಆದರೆ ಮೂರನೇ ಬಾರಿಗೆ ಹೋದಾಗ ಸುಮ್ಮನೆ ತೆಗೆದು ಬ್ಯಾಸ್ಕೆಟ್ ಒಳಗೆ ಹಾಕಿಕೊಂಡೆ. ಇದಕ್ಕೆ ಮುಖ್ಯ ಕಾರಣ ಆ ಪುಸ್ತಕದ ಶೀರ್ಷಿಕೆ ಮತ್ತು ನನ್ನದೊಂದು ತಮಾಷೆಯ ಪ್ರಮಾದ. ನಾನು ಸಾಮಾನ್ಯವಾಗಿ ಪುಸ್ತಕದ ಮುಖಪುಟ ಹಾಗೂ ಶೀರ್ಷಿಕೆ ನೋಡಿ ಓದಲು ಆಯ್ಕೆ ಮಾಡುವ ಖಯಾಲಿ ಉಳ್ಳವನು. ಅಂದು ಕಾರ್ತಿಕಾದಿತ್ಯ ಬೆಳಗೋಡು ಅವರ “ಕಾಡು ಹಾದಿಯ ಜಾಡು […]

Categories
Author Blogs Books Kannada

ನಾವೆಲ್ಲರೂ “ಕಾಡಿನ ನೆಂಟರು”!!!

– ಅಭಿ ತೀರ್ಥಹಳ್ಳಿ Abhi Thirthahalli ರಕ್ಷಿತ್ ತೀರ್ಥಹಳ್ಳಿ Rakshith Thirthahalliಯವರ “ಕಾಡಿನ ನೆಂಟರು Kadina Nentaru” ಕಥಾಸಂಕಲನವು ಮಲೆನಾಡು ಎಂದರೆ ಕೇವಲ ಮಂಜು, ಮಳೆ ಮತ್ತು ದಟ್ಟ ಹಸಿರಿನ ರಮ್ಯಲೋಕವಲ್ಲ; ಅದರಾಚೆಗಿನ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ, ಅಸಹಾಯಕತೆ ಮತ್ತು ಬದಲಾಗುತ್ತಿರುವ ಬದುಕಿನ ಕಟು ವಾಸ್ತವಗಳ ತಾಣ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತದೆ. ಕುವೆಂಪು ಮತ್ತು ತೇಜಸ್ವಿಯವರ ಕಾಲದ ಮಲೆನಾಡಿನ ಚಿತ್ರಣಕ್ಕೂ, ಇಂದಿನ ಮಲೆನಾಡಿನ ವಾಸ್ತವಕ್ಕೂ ಇರುವ ಕಂದಕವನ್ನು ಈ ಕೃತಿ ನಿರ್ದಾಕ್ಷಿಣ್ಯವಾಗಿ ಕಟ್ಟಿಕೊಡುತ್ತದೆ. ರಕ್ಷಿತ್ […]

Categories
Author Blogs Small Stories

ಸುಧನ್ವ ಗಡಿಕಲ್ ಸಣ್ಣ ಕಥೆಗಳು – Sudhanva Gadikal Small Stories

ನಮ್ಮನೆ ಒಲೆ ನಾವು ಚಿಕ್ಕವರಿದ್ದಾಗ ಎದ್ದು ಹಲ್ಲುಜ್ಜಿ ಮೊದ್ಲು ಬರ್ತಿದ್ದ ಜಾಗನೇ ಈ ಒಲೆ ದಂಡೆ ಬುಡ. ಈ ‘ಒಲೆ’ದಂಡೇಲಿ ಚಳಿ ಕಾಸ್ತ, ಕಾಫಿ ಚರ್ಗಿಲಿ ಕಾಫಿನ ಲೋಟಕ್ಕೆ ಬಗ್ಗಿಸ್ಕೊಂಡು, ಲೋಟದಲ್ಲಿ ಕಾಫಿ ಖಾಲಿ ಆಗೋತನಕ ಕಾಫಿ ಕುಡಿದು, ಅಮ್ಮ ಹೊರಗೆ ಹೋಗ್ತಿದ್ದಂಗೆ ಬೇಗ ಬೇಗ ಮತ್ತೆ ಕಾಫಿ ಬಕ್ಸ್ ಕಂಡು ಅಮ್ಮ ಬರೋ ಮುಂಚೆ ಆ ಕಾಫಿನ ಕುಡಿದು ಮುಗಿಸಿ ಬಿಡ್ತಿದ್ವಿ, ಅಮ್ಮಂಗೆ ಗೊತ್ತಿಲ್ದೆ ಇದ್ದಂಗೆ ಹಿಂಗ್ ಎಷ್ಟು ಸಲ ಕಾಫಿ ಬಕ್ಸ್ ಕಂಡು ಚಳಿ […]

Categories
Author Kannada Poem Rain

ದಣಿದ ಧರೆಗೆ ವರುಣರಾಯನ ವರ..!

– ಸುಧನ್ವ ಗಡಿಕಲ್ ಬೇಸಿಗೆ ಬಿಸಿಯಲಿ ಬೆಂದ ಇಳೆಯನ್ನು ತಂಪೆರೆವ ಸಮಯ,ಬಿಸಿಲ ಕಾವಿಗೆ ತಾಕಿತ್ತು ಪ್ರಕೃತಿಯ ವಿನಯ..ಗಾಳಿಯ ಚಾಮರವು ಒಂದೆಡೆ ಬೀಸಲು,ಗುಡುಗು ಸಿಡಿಲ ನಾದವು ಮುಗಿಲಲ್ಲಿ ಮೊಳಗಲು… ಆಕಾಶದ ಅಂಗಳದಿ ಪನ್ನೀರಿನ ಮಾಲೆ,ಧರೆಗೆ ಇಳಿದಂತೆ ಆನಂದದ ಲೀಲೆ…ಪ್ರತಿ ಹನಿಯ ಸ್ಪರ್ಶಕೆ ಮಣ್ಣಿನ ಘಮಲು,ಹಸಿರ ಕಾಂತಿ ಹಬ್ಬಿತ್ತು ವನದೊಳು ಪಸರಿಸಲು… ಬಣಗುಟ್ಟಿದ ಮರಗಿಡಗಳು ಇಂದು ನಲಿದಿವೆ,ಮಳೆಯ ಮುತ್ತಿಗೆ ಮೈಮರೆತು ಓಲಾಡಿವೆ…ತಣಿದ ಭೂಮಿ ಮೆಲ್ಲಗೆ ಕಣ್ಣು ತೆರೆದಿದೆ,ಒಣಗಿದ ಕನಸಲಿ ಹಸಿರ ಚಿಗುರು ಮೂಡಿದೆ..!

Categories
Author Books Poornachandra Tejaswi Thirthahalli

ಪ್ರಕೃತಿ, ವಿಜ್ಞಾನ ಮತ್ತು ಮಲೆನಾಡಿನ ಬದುಕಿನ ಮುಖಾಮುಖಿಯೇ ಕರ್ವಾಲೊ!

-ಅಭಿ ತೀರ್ಥಹಳ್ಳಿ Abhi Thirthahalli “ಕರ್ವಾಲೊ Karvalo”, ಪೂರ್ಣಚಂದ್ರ ತೇಜಸ್ವಿ Purnachandra Tejaswi ಯವರ ಕೇವಲ ಒಂದು ರೋಚಕ ಕಾದಂಬರಿಯಲ್ಲ, ಬದಲಾಗಿ ಮಲೆನಾಡಿನ ಸಾಮಾಜಿಕ, ಪಾರಿಸರಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡುವ ಒಂದು ಮಹತ್ವದ ಕೃತಿ. ತೇಜಸ್ವಿಯವರ ಕೃತಿಗಳಲ್ಲಿ ನಾನು ಮೊದಲು ಓದಿದ ಹಾಗೂ ನನ್ನನ್ನು ಅತಿ ಹೆಚ್ಚು ಕಾಡಿದ ಪುಸ್ತಕವಿದು. ಇದನ್ನು ನಾನು ಐದು ಬಾರಿ ಓದಿರುವೆ. ಪ್ರತಿ ಬಾರಿಯೂ ಕೃತಿಯು ಹೊಸದೊಂದು ದೃಷ್ಟಿಕೋನವನ್ನು ತೆರೆದಿಡುತ್ತಲೇ ಹೋಗುತ್ತದೆ. ಕೇವಲ ಮಲೆನಾಡನ್ನು ರಮ್ಯವಾಗಿ, ಆದರ್ಶಮಯವಾಗಿ […]

Categories
Malnad photos

Manjunath Maaglu Malenadu Photography – ಮಂಜುನಾಥ ಮಾಗಲು ಫೋಟೋಗ್ರಫಿ 

Categories
Author

ಡಾ. ಕೆ. ಶ್ರೀಪತಿ ಹಳಗುಂದ – Dr. K. Sripati Halagunda

ವಿಚಾರಣೆಗಳು ಮಾಹಿತಿಪೂರ್ಣ ವಿವರಗಳು ಹೆಸರು ಕೆ. ಶ್ರೀಪತಿ ಹಳಗುಂದ (K. Sripati Halagunda) ಹುಟ್ಟಿದ ದಿನಾಂಕ ಹುಟ್ಟಿದ ಸ್ಥಳ ಪಳಗುಂದ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ತಂದೆಯ ಹೆಸರು ಕೃಷ್ಣಪ್ಪಗೌಡ ತಾಯಿಯ ಹೆಸರು ಗಂಗಮ್ಮ ಉದ್ಯೋಗ ಉಪನ್ಯಾಸಕ ಶಿಕ್ಷಣ ಎಂ.ಎ., ಪಿಎಚ್‌.ಡಿ. ಹವ್ಯಾಸಗಳು ಪ್ರಕಟಿತ ಪುಸ್ತಕಗಳು ಕಾವ್ಯಗಂಗೆ (ಕಾವ್ಯ)ಕಾರಂತರ ಕಾದಂಬರಿಗಳಲ್ಲಿ ಕಲಾವಂತೆಯರು (ವಿಮರ್ಶೆ) ಇತರೆ ಪ್ರಮುಖ ಕೃತಿ ಕನ್ನಡ ಕಾದಂಬರಿಗಳಲ್ಲಿ ವೇಶ್ಯಾ ಜೀವನ (ಪಿಎಚ್.ಡಿ. ಮಹಾಪ್ರಬಂಧ) ಪ್ರಶಸ್ತಿಗಳು ಪಂಡಿತ ಪುಟ್ಟರಾಜ ಸಾಹಿತ್ಯ ಪುರಸ್ಕಾರ ಡಾ. ಕೆ. ಶ್ರೀಪತಿ […]