Categories
Adike

ಮಲೆನಾಡ ಅಡಿಕೆ ಕೊಯ್ಲು – Malenada Adike Koylu

ದೀಪಾವಳಿ ಹಬ್ಬದಿಂದ ಈಚೆ ಅಂದ್ರೆ ಚುಮು ಚುಮು ಚಳಿಗಾಲ ತಲೆ ಹಾಕೋಕೆ ಶುರು ಮಾಡಿದ್ದೆ ತಡ ಮಲೆನಾಡಲ್ಲೆಲ್ಲ ಒಂತರ ಗಡಿಬಿಡಿ ಶುರು. ಒಂದು ಕಡೆ ಊರಿನ ಪೇಟೆಯಲ್ಲೆಲ್ಲ ಜನ ಕಮ್ಮಿಯಾಗಿದ್ರೆ ಇನ್ನೊಂದು ಕಡೆ ಅಡಿಕೆ ದೋಟಿಗಳು ಊರಿನ ರಸ್ತೆಯಲ್ಲೆಲ್ಲ ಸವಾರಿ ಶುರು ಮಾಡಿರ್ತಾವೆ. ಇನ್ನು ಊರೊಳಗೆ ಬಂದ್ರೆ ಅಯ್ಯೋ ಈ ಕೊನೆ ತೆಗೆಯೋನು ಎತ್ತಲಾಗೋದ ಅನ್ನೋ ಮಾತು ಕೆಲವರ ಬಾಯಲ್ಲಿ ಕೇಳಿ ಬರ್ತಿದ್ರೆ ಇನ್ನು ಕೆಲವರ ಬಾಯಲ್ಲಿ ಕೊನೆ ತೆಗೆಯೋರೇ ಸಿಗ್ತಿಲ್ಲ ಅನ್ನೋ ಮಾತು ಕುಣಿದಾಡ್ತಿರುತ್ತೆ. ಒಂದು […]

Categories
Adike Blogs Kannada Malnad Rain

Sinchana Gadikal Lines About Malnad Nature

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಮ್ಮ ಈ ಮಲೆನಾಡಿನಲಿ..ಕಾಡುಮೇಡುಗಳೇ ಆವರಿಸಿಕೊಂಡಿರುವ ಈ ಪ್ರಕೃತಿಯಲಿ..ಮನಸಿಗೆ ಹಿತ ಸಿಗುವುದು ಈ ಪ್ರಕೃತಿ ಮಾತೆಯ ಮಡಿಲಲಿ..ಹಕ್ಕಿಯ ಕಲರವದಿಂದ ಮೊಳಗುವ ಆ ಮುಸ್ಸಂಜೆಯಲಿ..ಅದೆಷ್ಟೊ ಪ್ರಾಣಿ ಪಕ್ಷಿಗಳು ತಾಣವನ್ನಾಗಿಸಿಕೊಂಡಿವೆ ಈ ಭುವಿಯಲಿ..ಮಳೆಗಾಲದಲ್ಲಿ ಭೂಮಿಗೆ ಚುಂಬಿಸುವ ಆ ಹನಿಗಳ ಸ್ಪರ್ಶದಲಿ..ಮೈ ಮರೆಯುವುದು ಆ ಮಣ್ಣಿನಿಂದ ಹೊರಹೊಮ್ಮುವ ಸುವಾಸನೆಯಲಿ..ಸೂರ್ಯನ ಕಿರಣಗಳು ಭುವಿಗೆ ಮುತ್ತಿಕ್ಕುವ ಮುಂಜಾನೆಯಲಿ..ಸ್ವರ್ಗವೇ ಧರೆಗಿಳಿದಂತಿರುತ್ತದೆ ನಮ್ಮ ಈ ಮಲೆನಾಡಿನಲಿ… ಮಳೆಯ ಬರುವಿಕೆಗಾಗಿ ಕಾದಂತಹ ಇಳೆಗೆಮಳೆಯ ಹನಿಗಳು ಸ್ಪರ್ಶಿಸುವ ಆ ಘಳಿಗೆಗಿಡ ಮರಗಳೆಲ್ಲ ಹಸಿರಾಗಿ ಮಡಿಲ್ಲೆಲ್ಲ ತಂಪಾಗಿದೆ ಭುವಿಗೆಮಳೆಯ […]