Categories
Adike Blogs Kannada Malnad Rain

Sinchana Gadikal Lines About Malnad Nature

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಮ್ಮ ಈ ಮಲೆನಾಡಿನಲಿ..
ಕಾಡುಮೇಡುಗಳೇ ಆವರಿಸಿಕೊಂಡಿರುವ ಈ ಪ್ರಕೃತಿಯಲಿ..
ಮನಸಿಗೆ ಹಿತ ಸಿಗುವುದು ಈ ಪ್ರಕೃತಿ ಮಾತೆಯ ಮಡಿಲಲಿ..
ಹಕ್ಕಿಯ ಕಲರವದಿಂದ ಮೊಳಗುವ ಆ ಮುಸ್ಸಂಜೆಯಲಿ..
ಅದೆಷ್ಟೊ ಪ್ರಾಣಿ ಪಕ್ಷಿಗಳು ತಾಣವನ್ನಾಗಿಸಿಕೊಂಡಿವೆ ಈ ಭುವಿಯಲಿ..
ಮಳೆಗಾಲದಲ್ಲಿ ಭೂಮಿಗೆ ಚುಂಬಿಸುವ ಆ ಹನಿಗಳ ಸ್ಪರ್ಶದಲಿ..
ಮೈ ಮರೆಯುವುದು ಆ ಮಣ್ಣಿನಿಂದ ಹೊರಹೊಮ್ಮುವ ಸುವಾಸನೆಯಲಿ..
ಸೂರ್ಯನ ಕಿರಣಗಳು ಭುವಿಗೆ ಮುತ್ತಿಕ್ಕುವ ಮುಂಜಾನೆಯಲಿ..
ಸ್ವರ್ಗವೇ ಧರೆಗಿಳಿದಂತಿರುತ್ತದೆ ನಮ್ಮ ಈ ಮಲೆನಾಡಿನಲಿ…

ಮಳೆಯ ಬರುವಿಕೆಗಾಗಿ ಕಾದಂತಹ ಇಳೆಗೆ
ಮಳೆಯ ಹನಿಗಳು ಸ್ಪರ್ಶಿಸುವ ಆ ಘಳಿಗೆ
ಗಿಡ ಮರಗಳೆಲ್ಲ ಹಸಿರಾಗಿ ಮಡಿಲ್ಲೆಲ್ಲ ತಂಪಾಗಿದೆ ಭುವಿಗೆ
ಮಳೆಯ ಹನಿಯ ಚುಂಬನದಿಂದ ಘಮ ಘಮಿಸುವ ಮಣ್ಣಿಗೆ
ಪ್ರೀತಿಯ ಹಿತ ನೀಡುತ್ತಿದ್ದೆ ಮನಸ್ಸಿಗೆ
ಪ್ರಕೃತಿ ಒಡಲು ಇನ್ನಷ್ಟು ಹಸಿರಾಗುತ್ತಿದೆ ಅಂದವನ್ನು ಹೆಚ್ಚಿಸಲು ಮಲೆನಾಡಿಗೆ

ಯಂತ್ರಗಳ ಮದ್ಯೆ ಮರೆಯಾಗುತ್ತಿರುವ ಅಡಿಕೆ ಸುಲ್ತ

ಹಿಂದೆಲ್ಲಾ ಕೊನೆ ತೆಗ್ದ್ ತಕ್ಷಣ ಅಡಿಕೆ ಸುಲಿಯೋರಿಗೆಲ್ಲ ಫೋನ್ ಮಾಡಿ ಅಡಿಕೆ ಸುಲಿಯೋಕೆ ಐತೆ ಬನ್ನಿ ಅಂತ ಹೇಳಿ ಅಡಿಕೆ ಸುಲಿಯೋಕೆ ಬರೋರಿಗೆಲ್ಲ ಉದ್ರು ಬುಟ್ಟಿ ಎಲ್ಲಾ ತಯಾರಿ ಮಾಡಿ ಕಾಪಿ ತಿಂಡಿ ಎಲ್ಲಾ ಮಾಡುವಷ್ಟ್ರಲ್ಲಿ ಒಬ್ಬೊಬ್ರೆ ಚಿಮಣಿ ದೀಪ ಇಟ್ಕೊಂಡು ಬ್ಯಾಟ್ರಿ ಇಟ್ಕೊಂಡು ಮಾತಾಡ್ತಾ ಬರೋರು. ಮೆಟ್ಗತ್ತಿ ನಿಡ್ಕೊಂಡು ಅಡಿಕೆ ಸುಲಿತ ಸುಲಿತ ಎಲಡ್ಕೆ ಹಾಕ್ತಾ ಎಲ್ಲರ ಮನೆ ವಿಷ್ಯ ಮಾತಾಡ್ತಾ ಹೊತ್ತು ಹೋಗಿದ್ದು ಕೆಲ್ಸ ಸಾಗಿದ್ದು ಗೊತ್ತಾಗ್ತಿರಲಿಲ್ಲ
ಅದ್ರೆ ಇವತ್ತು ಮನುಷ್ಯನ ಬದ್ಲು ಯಂತ್ರಗಳು ಕೆಲ್ಸ ಮಾಡ್ತಾ ಇದಾವೆ ಈ ಯಂತ್ರಗಳಿಂದ ಮನುಷ್ಯನಿಗೆನೊ ಮಾಡೋ ಕೆಲ್ಸ ಕಮ್ಮಿ ಆಗುತ್ತೆ ಅದ್ರೆ ಅಂಗಳದ್ ತುಂಬಾ ಜನ ಅವ್ರು ಮಾತುಕತೆ ಈ ಯಂತ್ರಗಳ ಶಬ್ದದ ನಡುವೆ ದಿನೇ ದಿನೇ ಮರೆಯಾಗುತ್ತಿದೆ

Advertisement
Advertisement Advertisement

ಮಳೆಗಾಲದ ಮಲೆನಾಡಿನ ದಿನಗಳು…..


ಮುಸ್ಸಂಜೆಯಾಗಿದೆ ಎಂದು ತಿಳಿಸುವ ಜಿರುಂಡೆಗಳು..
ಮಳೆಗಾಲದಲ್ಲಿ ಸ್ನೇಹಿತರಾಗುವಂತಹ ತಿಗಣೆಗಳು…
ಮಲೆನಾಡಿನ ಅತಿಥಿಗಳಾಗಿರುವ ಕಳಲೆ ಅಣಬೆಗಳು..
ಮಳೆ ನಿಂತ ಮೇಲೆ ಮರ ಗಿಡಗಳಿಂದ ಬೀಳುವಂತ ಮಳೆಯ ಹನಿಗಳು…
ಮಳೆಗಾಲದಲ್ಲಿ ಹಳ್ಳಿ ಜನರ ಪಾಲಿಗೆ ರಸ್ತೆಗಳೇ ಜಾರು ಬಂಡಿಗಳು…
ಅತಿಯಾಗಿ ಮಳೆ ಬಂದಾಗ ಏನ್ ಬೇವರ್ಸಿ ಮಳೆ ಎಂದು ಗೊಣಗುವ ಜನಗಳು…
ಎತ್ತಾ ನೋಡಿದರು ಹಚ್ಚ ಹಸಿರಿನಿಂದ ತುಂಬಿರುವ ತೋಟ ಗದ್ದೆಗಳು..
ಮೈದುಂಬಿ ಹರಿಯುವ ಹಳ್ಳ ಕಾಲುವೆಗಳು…
ಗದ್ದೆಗಳಲ್ಲಿ ಸಿಗುವಂತ ಏಡಿಗಳು….
ಇವೆಲ್ಲಾ ಮಲೆನಾಡಿನ ಜನರ ಪಾಲಿಗೆ ಒಂಥರ ಸುಂದರ ಕ್ಷಣಗಳು…

Advertisement
Advertisement Advertisement