ಮಲ್ನಾಡ್ ಬದ್ಕು…
ಯತ್ ನೋಡುದ್ರು. ಮನ್ಸಿಗ್.. ಹಿತ ತರುವ ವಾತವರ್ಣ.. ಮಳಿಗ್ ಏನ್ ಕಮ್ಮಿಲ್ಲ… ಬಿಸ್ಲಿಗ್ ಏನ್ ಕಮ್ಮಿಲ್ಲ… ಹಂಗಂತ ಸುಮ್ನೆ.. ಕುಂತ್ರೆ.. ಬದ್ಕ್ ಏನ್ ನಡೆದ್ಲಾ…ಮಳ್ಗಾಲ್ ಬಂದ್ರೆ… ಸಸ್ ನಟ್ಟಿ..
ಬೇಸ್ಗೆ.. ಬಂದ್ರೆ ಗದ್ದೆ ಕೊಯ್ಲು ಒಕ್ಲಾಟ.. ಚಳಿಗಾಲ್.. ಬಂದ್ರೆ ಅಡ್ಕೆ ಕೊಯ್ಲು…ಹಿಂಗೆ ಒಂದ್ರು ಮೇಲೊಂದ್ ಕೆಲ್ಸ… ಯಂತಕ್ಕು.. ಪೂರ್ಸೋತ್ತಿಲ್ದು ಬದ್ಕ್… ನಮ್ ಮಲ್ನಾಡ್ ಬದ್ಕ್… ಹಂಗೆ.. ಊಟ್ ಉಪ್ಚಾರ್ಕೆ ಬಂದ್ರೆ.. ಹೊಟ್ಟೆಗ್ ಏನ್ ಕಮ್ಮಿ ಇರುದ್ಲಾ… ಹೊಳೆ ಬದಿ ಗಾಣ ಕಟ್ ಬಂದ್ರೆ.. ಅಪ್ರೂಪಕ್ಕೆ ಗಾಣಕ್ ಹೊಡಿಯೋ ಸಪ್ ಗರ್ಸೆ ಮೀನ್
ಕೆಸಿನ್ ಸೊಪ್ಪು… ಗದ್ದೆ ಬದಿ ಕಾರೇಡಿ.. ಹಳ್ಳದ್ ಮೀನ್. ಒಂದ್ ಮಳಿ ಬಂದ್… ಒಂದ್ ಅರ್ದ ಬಿಸ್ಲು ಬಂದ್ರೆ.. ಮುಗಿಬಿದ್ ಎಳುವ ಅಳ್ಬಿ…
ಇವ್ಕೆ ಪೈಪೋಟಿ ಕೊಡೋ.. ಹಡ್ಡೆ ಬದಿ ಎಳೋ ಅಕ್ಕಿ ಅಳ್ಬಿ
ಹಂಗೆ… ಹೊಳೆ ಬದಿ ಬಿದ್ರು ಮೊಟ್ಟಲ್ಲಿ.. ಮೇಲೊಂದ್. ಕೆಳಗೊಂದ್ ಅಂತ.. ಕಳಲೆ.. ಇವ್ಕೆಲ್ ನೀರ್ ದೋಸೆ… ಹಂಚಿನ್ ರೊಟ್ಟಿ… ಕಡ್ಬು..ಇಂಥವೆಲ್ಲ… ಇದ್ಬಿಟ್ರೆ… ಅವತ್ತಿನ್..ಊಟ… ಸ್ವರ್ಗ… ಇನ್ನಾ… ಮಕ್ಕಿ ಗದ್ದೇಲಿ.. ಬತ್ತದ್ ತೆನೆ ಬಂದ್ರ್ ಸಾಕ್ ಕುಸ್ ಕುಸಿಲ್. ಕಾಡಂದಿ..ಲೂಟಿ.. ಅವುನ್ ಹೊಡಿಯಕ್ಕೆ.. ರಾತ್ರಿ.. ಶಿಕಾರಿಯ ಬರ್ಜರಿ ಬೇಟಿ… ಹಂಗೆ ಇನ್ನೊಂದ್ ಕಡೆ… ಅಡ್ಕೆ ಮರ್ದಲ್ಲಿ.. ಕೆಂಪ್ ಆಗಿ.. ಉದುರ್ತ ಇರೋ ಕೆಂಪ್ ಗೋಟ್.. ಕೊನೆಗಾರ್ರು ಸಿಕ್ಕಲ್ಲ.. ಅನ್ನೋ ಚಿಂತೆ..ಬೆಳಗಾದ್ರೆ ಸಾಕ್.. ದನುಕ್ಕೆ.. ಹುಲ್ ತರೋ.. ಸಡಗರ ಕೊಟ್ಗೆಗೆ ಸೊಪ್ಪು ದರ್ಗು… ಹೊತ್ ಹೊತ್ತಿಗ್.. ಹೊಟ್ಕಾಪಿ. ಹಿಂಗೆ ಬಗೆ ಬಗೆ ಬದ್ಕೆ… ನಮ್ ಮಲ್ನಾಡ್ ಬದ್ಕ್..
ಕ್ಯಾಸೆಟ್ …
ಅಬ್ಬಬ್ಬಾ… ಒಮ್ಮೆ ಕಣ್ಣಂಚಲ್ಲೇ ಕಣ್ಣೀರ ಕಂಬನಿ ಮೌನದಲ್ಲೇ ದುಃಖವನ್ನೆ ಹಿಡಿದಿಟ್ಟಿತು… ಮಲೆನಾಡ ಪ್ರಕೃತಿಯ ಹಸಿರೆಲೆ ಮಡಿಲಲಿ ಹಾಸೊಬ್ಬಿದ ಇಬ್ಬನಿಯಂತೆ ಬಿಸಿಲು ಬಂದರೆ ಆ ಇಬ್ಬನಿ ಕರಗುವಂತೆ… ಈ ಚಿತ್ರದ ಪ್ರತಿಯೊಂದು ದೃಷ್ಯವು ಕಣ್ಣು ಕಟ್ಟುವಂತಿದೆ… ಕಣ್ಣೀರ ಕಂಬನಿ ಅಳುವಂತಿದೆ. “ಕ್ಯಾಸೆಟ್” ನಿಂದ ಶುರುವಾದ ಮೌನದ ಪ್ರೀತಿ.. ಆ ಮೌನದಲ್ಲೇ ಸುಂದರ ಹಾಡುಗಳೊಂದಿಗೆ ಮರೆಯಾಯಿತು..ಕಾರಣ ತಿಳಿಯದೆ..? ತುಂತುರು ಮಳೆ ಹನಿಗಳೊಂದಿಗೆ ಹಸಿರೆಲೆ ಚಿಗುರಿದ ಆ ಗಿಡದಲಿ ಸುಂದರ ಹೂವು ಅರಳಿದಂತೆ.. ಆ ಹೂವನ್ನು ಕಿತ್ತ ನಾನು ಅದು ಬೇರೆಯವರ ಮುಡಿಗೆ ಸೇರಿತೆಂದು ಖುಷಿಪಡಲೋ..?
ಅಥವಾ ಆ ಸುಂದರ ಹೂವನ್ನು ಕಿತ್ತೇನೆಂದು ದುಃಖಪಡಲೋ…?
ಒಟ್ಟಿನಲ್ಲಿ ಹೇಳುವುದಾದರೆ..ಮುಗಿದು ಹೋದ ಕಥೆಗಳಿಗೆ ಮೌನವೇ ವಿರಾಮ..!

ಬರ್ಲ್ಹಿಡಿ..!
“ಹೊಯ್ ಯೆಂತ ಮರೆರೇ..
ದಿನದಿಂದ ದಿನಕ್ಕೆ ನನ್ನೇ ಮರ್ಥೆ ಬಿಟ್ರೆನ್ ಅಲಾ” ಹಿಂಗೆ ಹಿಡಿ ಬರ್ಲಿನ ಮನದಾಳದ ಮಾತು ಕಂಡ್ರಿ ನಿವ್ ಎಂತದೆ ಹೇಳಿ.. ಮುಸುಕು ತುಂಬಿದ ಮನಸಿನ ಮೌನದಂತೆ, ನೆನಪಿನ ಅಲೆಯಲ್ಲೇ ಮರೆಯಾಯಿತು ಈ ಹಿಡಿ ಬರ್ಲಿನ ಕಥೆ.
ಎಂಥುಕ್ ಅಂದ್ರೆ.. ಮನೇ ಮುಂದೆ ಅಂಗ್ಳ ಇರ್ಲಿ, ಬತ್ತ ಒಕ್ಕೂ ಕಣ ಇರ್ಲಿ, ಕ್ವಟ್ಗಿಗೆ ದರ್ಗ್ ಗುಡ್ಸೊಕಾದ್ರೂ ಇರ್ಲಿ ಎಂಥದೇ ಇದ್ರು ಈ ಹಿಡಿ ಬರ್ಲಲ್ಲಿ ಒಂದ್ ಸಲ ಗುಡ್ಸ್ ಬಿಟ್ರೆ ಬಾರಿ ಚಂದ ಕಾಣೋದು ಕಂಡ್ರಿ.. ಒಂದ್ ಸಲ ಕಾಡ್ ಬದಿ ಹೋಗಿ ಹುಲ್ಚಪ್ಪಿನ ಗಿಡುದ್ ಹಿಡಿಕಣೇ ಕಡ್ದು ಅದ್ರು ಸೊಪ್ಪೆಲ್ಲ ತಿರ್ಪಿ ಮನೆಗೆ ತಂದ್ ಒಂದೆ ಹದಕ್ಕೆ ಕಾಡ್ ಬಳ್ಳಿ ಹಾಕ್ ಬಿಗುದ್ರೆ ಉಂಟಲ್ಲ ಒಂದ್ ಎಲ್ಡ್ ವರ್ಷ ಏನ್ ಅಡ್ಡಿಲ್ಲ ಈ ಹಿಡಿ ಬರ್ಲಿಗೆ..! ಈಗೆಲ್ಲ “ಎಲೆ ಮರೆ ಕಾಯ್” ಹಂಗೆ.. “ಬರ್ಲ್ಹಿಡಿ” ಪ್ರಗತಿ ಪರ ಪ್ರಪಂಚದಲ್ಲಿ ಮರೆಮ್ಚಾತ್ತ ಅದೆ..
ಅಂದಿನ ಕಾಲದ ಕೆಲಸ ಕಾರ್ಯಗಳು ಕಣ್ಣೆದುರು ನೆನ್ಪಸ್ತ ಅದೆ..!


