– ಬಿ.ಸಂ. ಸುವರ್ಚಲಾ ಮಲೆನಾಡೆಂದರೆ ಹಸಿರಿನ ತೊಡುಗೆಯುಟ್ಟು, ಶುದ್ಧ ಗಾಳಿಯ ಪಸರಿಸುತ್ತಾ ಮನಸಿಗೆ ಮುದ ನೀಡುವ ಊರು. ಇಂತಹಾ ಮಲೆನಾಡ ಮಡಿಲಿನಲಿ ಪ್ರಕೃತಿಯ ಹಬ್ಬ ಯುಗಾದಿಯ ಆಚರಣೆಯ ಸೊಗಸೇ ಬೇರೆ. ಪ್ರಕೃತಿ ಮಾತೆಯು ಹೊಸ ಚಿಗುರಿನಿಂದ, ಬಣ್ಣ ಬಣ್ಣದ ಹೂ- ಹಣ್ಣುಗಳನ್ನು ತುಂಬಿಕೊಂಡು ತುಂಬು ಗರ್ಭಿಣಿಯಂತೆ ಕಾಣುವ ಸಂದರ್ಭದಲ್ಲಿ ಬರುವ ಹೊಸವರ್ಷದ ಹಬ್ಬ ಯುಗಾದಿ. ಇಲ್ಲಿ ಕೇವಲ ಒಂದು ಸಂವತ್ಸರ ಕಳೆದು ಇನ್ನೊಂದು ಸಂವತ್ಸರ ಬರುವುದಿಲ್ಲ. ಹಳೆತನದಿಂದ ಹೊಸತನದೆಡೆಗೆ ಜನರನ್ನು ಕರೆದೊಯ್ಯುತ್ತದೆ. ಮಲೆನಾಡ ಯುಗಾದಿ ಸಂಭ್ರಮ ಯುಗಾದಿ […]
Category: Malnad information
– ಮಲ್ನಾಡ್ ಪ್ಲಾನೆಟ್ Malnad Planet (Instagram Page) ಅಭಿವೃದ್ಧಿ ಬೇಕು ನಿಜ, ಆದರೆ ಅದು ಪಶ್ಚಿಮ ಘಟ್ಟದ ವಿನಾಶದ ಮೇಲೆ ಇರಬಾರದು. ಆಗುಂಬೆ ಘಾಟಿಯ ಹೇರ್‌ಪಿನ್ ತಿರುವುಗಳು ನಮ್ಮ ಹೆಮ್ಮೆ ಮತ್ತು ಪ್ರಕೃತಿಯ ಸೌಂದರ್ಯ. ಸುರಂಗ ಮಾರ್ಗದಿಂದ ಪ್ರಯಾಣ ಸುಲಭವಾಗಬಹುದು, ಆದರೆ ಕಾಳಿಂಗ ಸರ್ಪ ಮತ್ತು ಸಿಂಗಳೀಕಗಳ ಆವಾಸಸ್ಥಾನ ಹಾಳಾದರೆ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ಪರ್ಯಾಯವಾಗಿ ಹಳೆಯ ರಸ್ತೆಯನ್ನೇ ವೈಜ್ಞಾನಿಕವಾಗಿ ಸರಿಪಡಿಸುವುದು ಅಥವಾ ಬೇರೆ ಮಾರ್ಗಗಳನ್ನು ಬಳಸುವುದು ಸೂಕ್ತ. ಯೋಜನೆಯ ಪರವಾದ ಅಂಶಗಳು – […]
– ಅಭಿ ತೀರ್ಥಹಳ್ಳಿ ದಕ್ಷಿಣ ಭಾರತದ ಚೆರಾಪುಂಜಿ ಹಾಗೂ ಮಲೆನಾಡಿನ ಹೆಬ್ಬಾಗಿಲು ಎಂದೇ ಹೆಸರಾಗಿರುವ ನಮ್ಮ ಆಗುಂಬೆಯ ಅಸ್ತಿತ್ವ ಇಂದು ಭೀತಿಯಲ್ಲಿದೆ. ಸೋಮೇಶ್ವರ ವನ್ಯಜೀವಿ ಧಾಮದ ನಡುವೆ ಹಾದುಹೋಗುವ ಆಗುಂಬೆ ಘಾಟಿ ರಸ್ತೆ ಕೇವಲ ವಾಹನಗಳ ಓಡಾಟಕ್ಕಿರುವ ಸಂಪರ್ಕ ಮಾರ್ಗವಲ್ಲ, ಅದು ಅಸಂಖ್ಯಾತ ಜೀವಿಗಳ ಆವಾಸಸ್ಥಾನ ಮತ್ತು ಲಕ್ಷಾಂತರ ಜನರ ಬದುಕಿನ ಆಧಾರ. ಆದರೆ, ಈ ಸೂಕ್ಷ್ಮ ಪರಿಸರದಲ್ಲಿ ಸುರಂಗ ಮಾರ್ಗ, ದ್ವಿಪಥ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸುವ ಹೊಸ ಪ್ರಸ್ತಾವನೆಯು ಇದೀಗ ಪರಿಸರ ಪ್ರೇಮಿಗಳನ್ನು […]
-ಪ್ರಸಾದ ಶೆಣೈ ಆರ್.ಕೆ. ಕೆಲವು ವರ್ಷಗಳಲ್ಲಿ ಸಣ್ಣ ಪುಟ್ಟ ಭೂಕುಸಿತ, ಹವಾಮಾನ ಬದಲಾವಣೆಗಳಿಂದ ಆಗುಂಬೆ ಪರಿಸರ ಒಳಗೊಳಗೇ ಬದಲಾಗುತ್ತಿದೆ. ಎಲ್ಲಾ ಘಾಟಿ ರಸ್ತೆಗಳನ್ನು ಅಗಲೀಕರಣ ಮಾಡಿ ಅಭಿವೃದ್ಧಿಪಡಿಸಬೇಕು ಎನ್ನುವ ಜನಪ್ರತಿನಿಧಿಗಳ ಯೋಚನೆಗಳು ಜಾಸ್ತಿಯಾಗುತ್ತಿದೆ. ಕೆಲವೊಂದು ಅಭಿವೃದ್ಧಿಗಳು ಅನಿವಾರ್ಯವಾದರೂ ಪರಿಸರವನ್ನು ಉಳಿಸಿ ಅಭಿವೃದ್ಧಿ ಮಾಡುವ ಗೋಜಿಗೆ ಯಾವ ಸರಕಾರಗಳೂ ಹೋಗುತ್ತಿಲ್ಲ. ಹೀಗಿರುವಾಗ “ಆಗುಂಬೆಗೆ ಸುರಂಗ ಮಾರ್ಗ” ಬೇಕು ಎನ್ನುವ ಬೇಡಿಕೆಯೊಂದನ್ನು ಸ್ಥಳೀಯ ಜನಪ್ರತಿನಿಧಿಗಳು ಹುಟ್ಟು ಹಾಕಿದ್ದಾರೆ. ಆಗುಂಬೆಯಲ್ಲಿ ದ್ವಿಪಥ ಸುರಂಗಮಾರ್ಗ, ದ್ವಿಪಥ ಹೆದ್ದಾರಿ ನಿರ್ಮಿಸಲು ಇದೀಗ ಕೇಂದ್ರ ಸರಕಾರ […]
ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸೌಂದರ್ಯದ ನಡುವೆ ಇರುವ ತೀರ್ಥಹಳ್ಳಿಯ ಶ್ರೀ ಮಾರಿಕಾಂಬಾ ದೇವಸ್ಥಾನವು ಈ ಭಾಗದ ಭಕ್ತರ ಆರಾಧ್ಯ ದೈವವಾಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಈ ಸುಂದರ ದೇವಸ್ಥಾನವು ತಾಯಿ ಮಾರಿಕಾಂಬೆಯ ಶಕ್ತಿ ರೂಪಕ್ಕೆ ಸಾಕ್ಷಿಯಾಗಿದೆ. ಈ ದೇವಸ್ಥಾನವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಪ್ರತಿದಿನ ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ ಪ್ರತಿ ಎರಡು ವರ್ಷಕ್ಕೊಮ್ಮೆ ಜರುಗುವ ಅದ್ಧೂರಿ ಮಾರಿಕಾಂಬಾ ಜಾತ್ರೆ. ಈ ಮಹೋತ್ಸವವು ಒಂಬತ್ತು ದಿನಗಳ ಕಾಲ […]
ಸಹಜ ಸುಂದರ ಮಲೆನಾಡಿನ ಮಡಿಲಲ್ಲಿರುವ ತೀರ್ಥಹಳ್ಳಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಮ್ಮೆಯೇ ಶ್ರೀ ಮಾರಿಕಾಂಬಾ ದೇವಸ್ಥಾನ. ಭವ್ಯ ಇತಿಹಾಸವನ್ನು ಹೊಂದಿರುವ ಈ ಪುಣ್ಯಕ್ಷೇತ್ರವು ಜಿಲ್ಲೆಯ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿದ್ದು, ತನ್ನ ಭಕ್ತರ ದೃಢ ನಂಬಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ನೆಲೆಸಿರುವ ಜಗನ್ಮಾತೆ ಮಾರಿಕಾಂಬೆಯು ಸರ್ವ ಸಂಕಷ್ಟಗಳನ್ನು ಹರಿಸುವ ಮಹಾತಾಯಿಯಾಗಿ ಭಕ್ತರ ಮನದಲ್ಲಿ ನೆಲೆಸಿದ್ದಾಳೆ. ಈ ದೇವಸ್ಥಾನದ ವೈಭವವು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ತೀರ್ಥಹಳ್ಳಿ ಮಾರಿಕಾಂಬಾ ಜಾತ್ರೆ’ಯ ಸಮಯದಲ್ಲಿ ಮುಗಿಲು ಮುಟ್ಟುತ್ತದೆ. ಮುಂಬರುವ 2026ರ ಫೆಬ್ರವರಿ 17 ರಿಂದ 25 ರವರೆಗೆ ಈ […]
ಸುವರ್ಣ ಮಲೆನಾಡು ಸಂಘದ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ ಕಾರ್ಯಕ್ರಮ ಫೆಬ್ರವರಿ 1 ರಂದು ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಅದ್ದೂರಿಯಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಕಂಪು ರಂಗೇಳಲಿದೆ. ಕ್ರೀಡಾಕೂಟ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮಲೆನಾಡಿನವರಿಗೋಸ್ಕರ ಆಯೋಜನೆಯಾಗಿದ್ದು ಇದೊಂದು ಮಲೆನಾಡಿಗರ ಸಂಭ್ರಮದ ಸಂಗಮವಾಗಲಿದೆ. ಗಣ್ಯರ ಸಮಾಗಮ: ಹೊಸನಗರ ತಾಲ್ಲೂಕಿನ ಶ್ರೀಕ್ಷೇತ್ರ ಕಾರ್ತಿಕೇಯ ಸಾರಗನ ಜೆಡ್ಡು ಶ್ರೀ ಶ್ರೀ ಶ್ರೀ ಅವಧೂತ ಯೋಗೇಂದ್ರ ಶ್ರೀಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. […]
ಬೆಂಗಳೂರು: ಬೆಂಗಳೂರಿನ ಮಲೆನಾಡಿಗರ ಸಾಂಸ್ಕೃತಿಕ ಸಂಘಟನೆ “ಸಹ್ಯಾದ್ರಿ ಸಂಘ ಬೆಂಗಳೂರು” ಇದರ 22 ನೇ ವರ್ಷದ ವಾರ್ಷಿಕ ಕ್ರೀಡಾಕೂಟ, ದಿ. ಶ್ರೀ. ಹೆಚ್.ಟಿ. ರತ್ನಾಕರ್ ಇವರ ಸ್ಮರಣಾರ್ಥ, ಜನವರಿ 18 ರಂದು ಒಕ್ಕಲಿಗರ ಸಂಘ ಪ್ರೌಢಶಾಲೆ ಆವರಣ, ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಂಗಳೂರು ಇಲ್ಲಿ ನಡೆಯಲಿದೆ. ಕ್ರೀಡಾಕೂಟದ ಉದ್ಘಾಟನೆಯನ್ನು ಸಹ್ಯಾದ್ರಿ ಸಂಘ ಬೆಂಗಳೂರು ಇದರ ಅಧ್ಯಕ್ಷರು ಜಿ.ಎ.ಪುರುಷೋತ್ತಮ ಗೌಡ ಅವರು ನೆರವೇರಿಸಲಿದ್ದಾರೆ. ಸಾಯಂಕಾಲ 6 ಗಂಟೆಗೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ, ಉಪಮುಖ್ಯಮಂತ್ರಿಗಳ ವಿಶೇಷಾಧಿಕಾರಿಗಳಾದ ಜಿ.ಎಸ್ ಶ್ರೀಧರ್, […]
ನಂ. 92, ರಾಜಗೋಪಾಲನಗರ ಮುಖ್ಯರಸ್ತೆ, ಪೀಣ್ಯ 2ನೇ ಹಂತ, ಬೆಂಗಳೂರು – 560 058 ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸಂದೇಶ್ ಗೌಡ, ಹಂದಿಗೋಡು ಅಧ್ಯಕ್ಷರು 9945211401 ಡಿ.ಟಿ. ವನಮಾಲಯ್ಯ, ಇಳಿಮನೆ ಉಪಾಧ್ಯಕ್ಷರು 9243458858 ಕೆ.ಜಿ. ನಾಗೇಶ್ ಕೇಳೂರು ಕಾರ್ಯದರ್ಶಿ 9741107645 ರಾಘವೇಂದ್ರ ಸಿಸ್ಲೆ ಸಹ ಕಾರ್ಯದರ್ಶಿ 9880909745 ನಿದರ್ಶನ್, ಗಾಡಿಗೆರೆ ಖಜಾಂಚಿ 9481094240 ದಿನೇಶ್, ಹೊಸನಗರ ಸಂಘಟನಾ ಕಾರ್ಯದರ್ಶಿ 9036808226 ರವೀಶ್, ಕೊಡಿಗೆಬೈಲು ಸಂಘಟನಾ ಕಾರ್ಯದರ್ಶಿ 9844212091 ನಿಶ್ಚಿತ್ ಜಾವಗಲ್ ಸಂಘಟನಾ ಕಾರ್ಯದರ್ಶಿ 9480554964 ಮಾಜಿ […]
ದೊಡ್ಡದಾಗಿರುವ ಒಂದು ಹಾವು ಕಾಡಿಂದ ಊರೊಳಗೆ ಹೋಗಿರೋ ತರ ತಿರುವುಗಳ ಹೋಂಡಾ ಗುಂಡಿ ತುಂಬಿರೋ ರಸ್ತೆ, ಕಣ್ಣು ಹಾಯಿಸದಲ್ಲೆಲ್ಲ ಹಚ್ಚ ಹಸಿರು ಸ್ವಚ್ಛ ಗಾಳಿ, ಹೌದು ನಾನು ಕರ್ಕೊಂಡು ಹೋಗ್ತಿರುವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕುದುರೆಗುಂಡಿ ಈ ಊರು ಅಭಿವೃದ್ಧಿಯ ಪತ ಹಿಡಿದು ತನ್ನ ಮಿತವಾದ ವೇಗದಲ್ಲಿ ಅಭಿವೃದ್ಧಿ ಕಡೆಗೆ ಸಾಗುತ್ತಿದ್ದರೆ ತನ್ನೊಳಗಿರುವಂತಹ ವಿಶೇಷ ವಿಷಯಗಳನ್ನ ಅತ್ಯಮೂಲ್ಯ ರೀತಿಯಲ್ಲಿ ಸುರಕ್ಷಿತವಾಗಿ ನೋಡ್ಕೊಳ್ತಾಯಿದೆ ಅಂತಹ ಒಂದು ವಿಶೇಷವಾದ ವಿಷಯವನ್ನು ನಾನು ನಿಮಗೆ ಇವತ್ತು ಪರಿಚಯಿಸುತ್ತಿದ್ದೇನೆ.ಈ ಕುದುರೆ ಗುಂಡಿ ಸಮಯದಲ್ಲಿ […]
